ತುಮಕೂರು:ಹಂಚಿ ತಿನ್ನುವುದು, ನೆರೆ ಹೊರೆಯವರ ಸಂತೋಷದಲ್ಲಿ
ಪಾಲ್ಗೊಳ್ಳುವAತೆ ಮಾಡುವುದು ಕ್ರಿಸ್‌ಮಸ್ ಹಬ್ಬದ ಸಂದೇಶವಾಗಿದ್ದು,ನಾಡಿನ
ಎಲ್ಲ ಜನರು ಸಂತೋಷದಿAದ ಹೊಸ ವರ್ಷವನ್ನು ಆಚರಿಸುವಂತಾಗಲಿ ಎಂದು
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ದಿಯಾ
ಚಾರಿಟಬಲ್ ಟ್ರಸ್ಟ್(ರಿ) ಇಂಡಿಯಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸಹಯೋಗದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿಕಲಚೇತನ
ಮಕ್ಕಳಿಗೆ ಆಟಿಕೆಗಳು ಹಾಗೂ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ
ಆಟಿಕೆಗಳನ್ನು ವಿತರಿಸಿ ಮಾತನಾಡಿದ ಅವರು,ನಾಡಿನ ಎಲ್ಲ ಜನರು ಸಹ ಸುಖಃ,
ಶಾಂತಿ, ನೆಮ್ಮದಿಯಿಂದ ಬಾಳುವಂತೆ ನಾವೆಲ್ಲರೂ ಪ್ರಾರ್ಥಿಸಬೇಕಿದೆ.ಕ್ರಿಸ್‌ಮಸ್
ತಾತ ಸಾಂತಕ್ಲಾಸ್ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ,ಕಾರಣ ಅವರು ಮಕ್ಕಳಿಗೆ
ನೀಡುವ ಉಡುಗೊರೆ ಹಾಗೂ ಸಿಹಿ,ನಿಮ್ಮ ಬಾಳಿನಲ್ಲಿಯೂ ಸಿಹಿ ಕಾಣುವಂತಾಗಲಿ
ಎAದರು.
ದಿಯಾ ಚಾರಿಟಬಲ್ ಟ್ರಸ್ಟ್ ಹಲವಾರು ವರ್ಷಗಳಿಂದ ಆಶಕ್ತರು,
ಬಡವರು,ವಿಕಲಚೇತರು, ಮಹಿಳೆಯರ ಸಬಲೀಕರಣಕ್ಕೆ ದುಡಿಯುತ್ತಾ
ಬಂದಿದೆ.ತಮ್ಮ ದುಡಿಮೆಯ ಒಂದು ಪಾಲನ್ನು ಇಂತಹ ಸಮಾಜ ಸೇವೆಗಳಿಗೆ
ಮೀಸಲಿಟ್ಟು,ಇಂತಹ ಮಕ್ಕಳ ಮುಖದಲ್ಲಿ ನಗು ಕಾಣುವಂತೆ ಮಾಡಿದ್ದಾರೆ.
ಭಗವಂತ ಅವರು ಮತ್ತಷ್ಟು ಇಂತಹ ಸಮಾಜ ಸೇವೆಯಲ್ಲಿ ತೊಡಗಲು
ಶಕ್ತಿ ನೀಡುವಂತೆ ನಾವೆಲ್ಲರೂ ಶುಭ ಹಾರೈಸೋಣ.ಅವರ ಸಮಾಜ ಸೇವಾ
ಕಾರ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಲಿದೆ ಎಂದು
ನ್ಯಾ.ನೂರುನ್ನಿಸಾ ಶುಭ ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಾಲೋಚನಾಧಿಕಾರಿ ದಿನೇಶ್
ಮಾತನಾಡಿ, ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಹಲವರು ಸಮಾಜ ಸೇವಾ
ಕಾರ್ಯಗಳಲ್ಲಿ ತೊಡಗಿದ್ದು,ಇಂದು ವಿಕಲಚೇತನ ಮಕ್ಕಳಿಗೆ ಆಟಿಕೆ
ಮತ್ತು ಸಿಹಿ ವಿತರಿಸಿ, ಅವರ ಮುಖದಲ್ಲಿ ಸಂತೋಷ ಅರಳುವಂತೆ
ಮಾಡಿದ್ದಾರೆ.ಇAತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು.
ದಿಯಾ ಚಾರಿಟಬಲ್ ಟ್ರಸ್ಟ್(ರಿ) ಇಂಡಿಯಾದ ಸಂಸ್ಥಾಪಕ ಮತ್ತು ಅಧ್ಯಕ್ಷ
ಡಾ.ಇಮ್ಯಾನುವೆಲ್ ಜಯಕುಮಾರ್.ಎಲ್, ಮಾತನಾಡಿ,ಕಳೆದ ೧೫ ವರ್ಷಗಳಿಂದ
ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.