ತುಮಕೂರು: ಇಂದಿನ ಕಾಲದಲ್ಲಿ ದೇವರು, ಧರ್ಮ, ಗುರುಗಳ ಬಗ್ಗೆ ಯಾರು ಯಾವ ರೀತಿಯ ಭಾವನೆ ಇಟ್ಟುಕೊಂಡಿದ್ದಾರೆ ಎಂದು ಹೇಳಬೇಕಾಗಿಲ್ಲ, ದೇವರನ್ನು ನಂಬದ ನಾಸ್ತಿಕರೂ ಇದ್ದಾರೆ, ನಂಬಿ ಪೂಜಿಸುವ ಆಸ್ತಿಕರೂ ಇದ್ದಾರೆ. ಆದರೆ
ನಾಸ್ತಿಕರು ಕೊನೆ ಹಂತದಲ್ಲಿ ದೇವರಿಗೆ ಶರಣಾದ ಉದಾಹರಣೆಗಳಿವೆ ಎಂದು ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸೋಮವಾರ ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದಿAದ
ಹಮ್ಮಿಕೊAಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ನಂತರ
ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರುಗಳು,
ದೇವರು ಎಲ್ಲೆಡೆ ಇದ್ದಾನೆ, ಮನುಷ್ಯನ ಅಂತರAಗಲ್ಲಿ ದೇವರು ಸದಾ
ತುಂಬಿರುತ್ತಾನೆ. ಅದು ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲ. ಎಳ್ಳಿನಲ್ಲಿ ಎಣ್ಣೆ ಇದ್ದರೂ
ಕಾಣುವುದಿಲ್ಲ, ಅದನ್ನು ಉರಿದು, ಅರೆದು, ಹಿಂಡಿದಾಗ ಮಾತ್ರ ಎಣ್ಣೆ ಬರುತ್ತದೆ.
ದೇವರೂ ಹಾಗೆಯೇ ಎಳ್ಳಿನ ಒಳಗಿರುವ ಎಣ್ಣೆಯಂತೆ. ಹಾಲಿನಲ್ಲಿ ನಮಗೆ
ಕಾಣದಂತಿರುವ ತುಪ್ಪ ಇದ್ದಂತೆ ಎಂದರು.
ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್,
ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ನಿರ್ದೇಶಕರಾದ ಟಿ.ಎಸ್.ನಳಿನಾ, ಟಿ.ಬಿ.ಮೃತ್ಯುಂಜಯ,
ಹೆಚ್.ಎನ್.ಶಿವಕುಮಾರ್, ಪ್ರಭಾಕರ್, ಕೆ.ಎಸ್.ಸುರೇಶ್, ಓ.ಕೆ.ಅರುಣ್‌ಕುಮಾರ್,
ಟಿ.ಎಸ್.ಫೃಥ್ವಿಪ್ರಸಾದ್, ಟಿ.ಶಾಂತಕುಮಾರಿ, ಟಿ.ಎಸ್.ಲೋಕೇಶ್‌ಕುಮಾರ್, ಟಿ.ಎಸ್.ಚಿದಾನಂದ್,
ಡಾ.ಡಿ.ಎಸ್.ಸುರೇಶ್, ಟಿ.ಎಸ್.ಜಗದೀಶ್, ಹೆಚ್.ಎಸ್.ಸಿದ್ದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಕೆ.ಎಸ್.ಮಂಜುನಾಥ್ ಹಾಗೂ ಸಿಬ್ಬಂದಿ ಅಲ್ಲದೆ, ಸಮಾಜದ ಹಲವಾರು ಗಣ್ಯರು, ಮುಖಂಡರು,
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.