ತುಮಕೂರು : ಕನ್ನಡ ಸ್ಯಾಂಡಲ್‌ವುಡ್ ಸಾಮ್ರಾಟ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ದೊಡ್ಡಮನೆಯ ಹಿರಿಯಣ್ಣ ಡಾ.
ಶಿವರಾಜ್‌ಕುಮಾರ್ ಅವರಿಗೆ ಆರೋಗ್ಯದ ಸಮಸ್ಯೆ ಕಾರಣ ಹೊರದೇಶಕ್ಕೆ ಚಿಕಿತ್ಸೆ ಹಾಗೂ ಶಸ್ತçಚಿಕಿತ್ಸೆಗೆ ತೆರಳಿದ್ದು, ಅವರು
ಆದಷ್ಟು ಬೇಗ ಗುಣಮುಖರಾಗಲೆಂದು ತುಮಕೂರು ಜಿಲ್ಲಾ ಡಾ|| ರಾಜ್ ಸೇನಾ ಸಮಿತಿ ಹಾಗೂ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ
ತುಮಕೂರು ತಾಲ್ಲೂಕು ಅರೆಯೂರು ವೈದ್ಯನಾಥೇಶ್ವರ ಸ್ವಾಮಿ ವಸ್ಥಾನದಲ್ಲಿ ಇಂದು ವಿಶೇಷ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವರಾಜ್, ಎಸ್ ಪರಮೇಶ್, ದರ್ಶನ್, ಕೀರ್ತಿ, ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.