ತುಮಕೂರು: ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ ೨೫ನೇ ವರ್ಷದ ರಜತ
ಮಹೋತ್ಸವ ವರ್ಷ ಆಚರಣೆಗೆ ಚಾಲನೆ ಮತ್ತು ಸೌಹಾರ್ದ ಸಹಕಾರಿ ದಿನಾಚರಣೆ
ಕಾರ್ಯಕ್ರಮವನ್ನು ನಗರದ ಶಿವಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ
ಆಯೋಜಿಸಲಾಗಿತ್ತು.
ಈ ರಜತ ಮಹೋತ್ಸವವನ್ನು ಸಂಯುಕ್ತ ಸಹಕಾರಿ ಹಾಗೂ ರಾಜ್ಯದ ಎಲ್ಲಾ
ಸೌಹಾರ್ದ ಸಹಕಾರಿಗಳು ಜಂಟಿಯಾಗಿ ಆಚರಿಸಲಾಯಿತು. ಈ ಬಾರಿಯ ಸೌಹಾರ್ದ ಸಹಕಾರಿ
ದಿನಾಚರಣೆ ರಜತ ಮಹೋತ್ಸವ ವರ್ಷವಾಗಿರುವುದರಿಂದ ತುಮಕೂರಿನ ಶಿವಶ್ರೀ
ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘದಲ್ಲಿ ಬೆಳಗ್ಗೆ ೧೦ ರಿಂದ ೧೧
ಗಂಟೆಯವರೆಗೆ ಧ್ವಜಾರೋಹಣ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರುಗಳಾದ ಟಿ.ಆರ್.ಸದಾಶಿವಯ್ಯ,
ಸಿದ್ದರಾಜು, ಜಿ.ಸಿ.ವಿರೂಪಾಕ್ಷ, ಆರ್.ಎಸ್.ಪ್ರಭು, ಮಂಜುನಾಥ್, ವೀರಭದ್ರಸ್ವಾಮಿ,
ಓಂಕಾರಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿರರಿದ್ದರು.