ತುಮಕೂರು :ಸಮಾಜದ ಏಳಿಗೆಗೆ ಬೇಕಾದ ಸಂಸ್ಕೃತಿ, ಸಂಸ್ಕಾರ, ಕಟಿಬದ್ಧ,ಸೋತ್ರ ಹಾಗೂ ಪರೋಪಕಾರಂ ಇದಂ ಶರೀರಂ ಎಂಬಂತೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ಶ್ರಮಿಸುತ್ತಿದೆ ಎಂದು ಪಾಲನಹಳ್ಳಿ ಶ್ರೀ ಶನೇಶ್ವರ ಕ್ಷೇತ್ರದ ಮಠಾಧ್ಯಕ್ಷರಾದ ಡಾ. ಶ್ರೀ ಸಿದ್ಧರಾಜು ಸ್ವಾಮಿಜಿ ತಿಳಿಸಿದರು.
ಮಾಗಡಿ ತಾಲೂಕಿನ ಪಾಲನಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ಮಠದಲ್ಲಿ ಹೊಸ ವರ್ಷದ ಪ್ರಯುಕ್ತ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಈ ಟ್ರಸ್ಟ್ ನ ಮೂಲಕ ಸಮಾಜದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ, ಸಮಾಜದ ಎಲ್ಲಾ ರಂಗದಲ್ಲೂ ಈ ಟ್ರಸ್ಟ್ ಆಡಿಯಲ್ಲಿ ಸೇವೆಗಳನ್ನು ಸಲ್ಲಿಸಿ ಅತ್ಯುತ್ತಮ ಸ್ಥಾನಕ್ಕೆರಲಿ ಎಂದು ಆಶೀರ್ವದಿಸಿದರು.
ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಪಾಲನಹಳ್ಳಿ ಶ್ರೀ ಶನೇಶ್ವರ ಕ್ಷೇತ್ರದ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಟ್ರಸ್ಟಿನ ಕ್ಯಾಲೆಂಡರ್ ಬಿಡುಗಡೆ ಮಾಡಿದ ವೇಳೆ ಟ್ರಸ್ಟಿನ ಉಪಾಧ್ಯಕ್ಷರು ನಂಜುಂಡಯ್ಯ ಯಲ್ಲಾಪುರ, ಕಾರ್ಯದರ್ಶಿ ನಾಗರಾಜ್ ಬುಗುಡನಹಳ್ಳಿ, ಖಜಾಂಚಿ ನಾಗರಾಜ್ ತಿಮ್ಮನಾಯಕನಹಳ್ಳಿ , ಸುನಿಲ್ ತೊಂಡಿಗೆರೆ, ನರಸಿಂಹರಾಜು ವಡ್ಡರಹಳ್ಳಿ, ಬೈರಸಂದ್ರ ಹರೀಶ್, ಹೆಬ್ಬಾಕ ಕುಮಾರ್, ನಂದಿಹಳ್ಳಿ ನಾಗರಾಜ್ ಉಪಸ್ಥಿತರಿದ್ದರು.