ದಲಿತ ಸಂಘಟನೆ ಮತ್ತು ವಾಲ್ಮೀಕಿ ಸಮುದಾಯದ ಮುಖಂಡರೊಂದಿಗೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ತುಮಕೂರು:ಚುನಾವಣಾ ರ್ಯಾಲಿಗಳಿಗೆ,ದಸರಾ ಹಬ್ಬಗಳ ಮೆರವಣ ಗೆಗೆ ಇಲ್ಲದ ನಿಯಮಗಳನ್ನು ವಾಲ್ಮೀಕಿ ಜಯಂತಿಗೆ ರೂಪಿಸುವ ಮೂಲಕ ಸರಕಾರ ದಲಿತರ ಜಯಂತಿಗಳನ್ನು ಆಚರಿಸಲು ಅಡ್ಡಿಪಡಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷ ಅರ್ಜುನ್ ಪಾಳ್ಳೇಗಾರ್ ಆರೋಪಿಸಿದ್ದಾರೆ.
ಸರಕಾರ ವಾಲ್ಮೀಕಿ ಜಯಂತಿ ಆಚರಣೆಗೆ ಅತ್ಯಂತ ಕಠಿಣ ನಿಯಮಗಳನ್ನು ರೂಪಿಸಿರುವ ಹಿನ್ನೇಲೆಯಲ್ಲಿ ಇಂದು ದಲಿತಪರ ಸಂಘಟನೆಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮಾತನಾಡಿದ ಅವರು,ಸಾವಿರಾರು ಜನರು ಸೇರುವ ಸಿನಿಮಾ, ನಾಟಕ, ಉತ್ಸವ, ಮಾಲ್ ಗಳಿಗೆ ಅವಕಾಶ ನೀಡಿ, ಕೋರೋನ ಹೆಸರಿನಲ್ಲಿ ವಾಲ್ಮೀಕಿ, ಅಂಬೇಡ್ಕರ್ ಜಯಂತಿಗಳ ಆಚರಣೆಗೆ ಅಡ್ಡಿಪಡಿಸುತ್ತಿರುವುದು ತಾರತಮ್ಯ ನೀತಿಯಿಂದ ಕೂಡಿದೆ ಎಂದರು.
ಜಿಲ್ಲಾಡಳಿತ ಅಕ್ಟೋಬರ್ 20 ರಂದು ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕರೆದಿದ್ದ ಮುಖಂಡರ ಪೂರ್ವಬಾವಿ ಸಭೆಯಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿ, ಅಕ್ಟೋಬರ್ 16 ರಂದು ಏಕಾಎಕಿ ಮೆರವಣ ಗೆ ನಡೆಸುವಂತಿಲ್ಲ, 100 ಜನರ ಮೇಲೆ ಸೇರುವಂತಿಲ್ಲ ಎಂಬ ನಿಯಮಗಳನ್ನು ರೂಪಿಸಿರುವುದು ಇದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ಕೇವಲ ವಾಲ್ಮೀಕಿ ಜಯಂತಿಯಿಂದ ಮಾತ್ರ ಕೋರೋನ ಸೋಂಕು ಉಲ್ಬಣವಾಗಲಿದೆಯೇ, ಚುನಾವಣಾ ರ್ಯಾಲಿಗಳಿಂದ, ದಸರಾ ಉತ್ಸವಗಳಿಂದ ಕೋರೋನ ಬರುವುದಿಲ್ಲವೇ ಎಂಬ ಪ್ರಶ್ನೆಯನ್ನು ಸರಕಾರವೇ ಕೇಳಿಕೊಳ್ಳಬೇಕಾಗಿದೆ ಎಂದು ಅರ್ಜುನ್ ಪಾಳ್ಳೇಗಾರ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತದೊಂದಿಗೆ ನಡೆದ ಪೂರ್ವಭಾವಿ ಸಭೆಯಂತೆ ಅಕ್ಟೋಬರ್ 20 ರಂದು ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣ ಗೆಯನ್ನು ಟೌನ್‍ಹಾಲ್ ವೃತ್ತದಿಂದ ನಡೆಸಲಿದ್ದೇವೆ. ಸರಕಾರ ನಮಗೆ ರಕ್ಷಣೆ ನೀಡುವುದಾದರೆ ನೀಡಲಿ, ಅಡ್ಡಿ ಪಡಿಸಿದರೆ ಉಗ್ರ ಹೋರಾಟ ಮಾಡುವುದಲ್ಲದೆ, ಮುಂದೆ ಯಾವುದೇ ಜಯಂತಿಗಳಿಗೂ ಅವಕಾಶ ನೀಡದಂತೆ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಕರ್ನಾಟಕ ರಾಜ್ಯ ವಾಲ್ಮೀಕಿ ಯುವ ಕಾಂತ್ರಿ ಸೇನೆಯ ಜಿಲ್ಲಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ್ ಮಾತನಾಡಿ, ರಾಜ್ಯ ಸರಕಾರ ಡಾ.ಬಿ.ಆರ್.ಅಂಬೇಡ್ಕರ್,ಡಾ.ಬಾಬು ಜಗಜೀವನ್ ರಾಂ ಹಾಗೂ ವಾಲ್ಮೀಕಿ ಜಯಂತಿಗಳಿಗೆ ಮಾತ್ರ ವಿಶೇಷ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವ ಮೂಲಕ ಆರ್.ಎಸ್.ಎಸ್.ಅಜೆಂಡಾವನ್ನು ರಾಜ್ಯದಲ್ಲಿ ಜಾರಿಗೆ ತರಲು ಹೊರಟಿದೆ. ನೂರಾರು ಜನರು ಸೇರಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅರ್ಥ ಪೂರ್ಣ ಕಾರ್ಯಕ್ರಮ ಆಚರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗಿತ್ತು.ಅದರೆ ರಾಜ್ಯ ಸರಕಾರ ಏಕಾಎಕಿ ಮೆರವಣ ಗೆ ಮಾಡದಂತೆ, ಕಾರ್ಯಕ್ರಮದಲ್ಲಿ ನೂರು ಜನರು ಮಾತ್ರ ಇರುವಂತೆ ನಿಯಮ ರೂಪಿಸಿರುವುದು ತಾರತಮ್ಯದಿಂದ ಕೂಡಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಂಡೆ ಶಿವಕುಮಾರ್, ಬಿಟ್ಟನಕುರಿಕೆ ಜಯಣ್ಣ,ನಾಗೇಶ್, ಪುನೀತ್, ಕುಮಾರ್, ನಾಗಣ್ಣ ಮರಳೂರು, ಹೆಚ್.ಜಿ.ರಂಗನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.