breaking news

ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಲಿತ ಪರ ಸಂಘಟನೆಗಳ ಪ್ರತಿಭಟನೆ

ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಲಿತ ಪರ ಸಂಘಟನೆಗಳ ಪ್ರತಿಭಟನೆ

ತುಮಕೂರು- ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್
ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್
ಶಾ ರವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ,
ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾ ಸೇನೆ, ಆಲ್ ಇಂಡಿಯಾ
ಬಹುಜನ ಸಮಾಜದ ಪಾರ್ಟಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ
ವತಿಯಿAದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.


ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ಜಿಲ್ಲಾ ಕಾಂಗ್ರೆಸ್
ಕಾರ್ಯಕರ್ತರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ
ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಹೇಳಿಕೆ
ವಿರುದ್ಧ ಆಕ್ರೋಶ ಹೊರ ಹಾಕಿದರು. ನಂತರ ಜಿಲ್ಲಾಧಿಕಾರಿಗಳ
ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್
ಹೆಸರು ಉಚ್ಛರಿಸುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು
ಉಚ್ಛರಿಸುವ ಬದಲು ದೇವರ ಹೆಸರನ್ನು ಉಚ್ಛರಿಸಿದರೆ ಏಳು
ಜನ್ಮದವರೆಗೂ ಸ್ವರ್ಗ ಪಡೆಯಬಹುದು ಎಂದು ಹೇಳಿಕೆ ನೀಡುವ
ಮೂಲಕ ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಈ ಕೂಡಲೇ
ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು
ಪ್ರತಿಭಟನಾಕಾರರು ಒತ್ತಾಯಿಸಿದರು.


ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಪ್ರಜಾಪ್ರಭುತ್ವ ಸಮಾನತೆ
ಮತ್ತು ನ್ಯಾಯಾದ ಸಿದ್ದಾಂತಗಳಿಗೆ ಅಡಿಪಾಯ ಹಾಕಿದ ಮಹಾನ್
ನಾಯಕರು. ಅವರ ಹೆಸರು ಮಾತ್ರವಲ್ಲ, ಅವರ ಆದರ್ಶಗಳು
ಮತ್ತು ಅವರ ಕೃತಿಗಳು ಕೋಟ್ಯಂತರ ಭಾರತೀಯರಿಗೆ
ಸ್ಫೂರ್ತಿಯಾಗಿದೆ. ಹೀಗಿದ್ದರೂ ಸಹ ಅಮಿತ್ ಶಾ ಅವರು ಅಂಬೇಡ್ಕರ್
ಬಗ್ಗೆ ನೀಡಿರುವ ಹೇಳಿಕೆ ದೇಶದ ಸಂವಿಧಾನದ ಅಡಿಪಾಯವನ್ನು
ದೂಷಿಸುತ್ತದೆ ಮತ್ತು ಸಮಾಜದ ಹೀನ ವರ್ಗಗಳ ಭಾವನೆಗೆ
ಧಕ್ಕೆಯುಂಟಾಗುತ್ತಿದೆ ಪ್ರತಿಭಟನಾನಿರತರು ಹೇಳಿದರು.
ಪ್ರಜಾಪ್ರಭುತ್ವದ ವಿರುದ್ದವಾದ, ಸಮಾನತೆಗೆ ವಿರುದ್ಧವಾದ
ಮತ್ತು ಅಂಬೇಡ್ಕರ್ ಗೌರವಕ್ಕೆ ಅವಮಾನಕರ ಹೇಳಿಕೆ ನೀಡಿರುವ
ಅಮಿತ್ ಶಾ ಕೇಂದ್ರ ಗೃಹ ಸಚಿವರ ಸ್ಥಾನಕ್ಕೆ ತಕ್ಕವರಲ್ಲ. ಆದ್ದರಿಂದ
ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು
ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಮುಖಂಡರಾದ ವಿರೂಪಾಕ್ಷ, ಪಿ.ಎನ್. ರಾಮಯ್ಯ,
ಬಂಡಕುಮಾರ, ಭರತ್‌ಕುಮಾರ್, ಕೆಂಪರಾಜು, ಕುಪ್ಪೂರು
ಶ್ರೀಧರ್, ಶ್ರೀನಿವಾಸ್, ಮಂಜುನಾಥ್, ಎನ್. ಕುಮಾರ್, ಚಂದ್ರ, ರಾಜೇಶ್,
ನಾಗೇಂದ್ರ, ಸೋಮಣ್ಣ, ವೀರಕ್ಯಾತಯ್ಯ, ಮೂರ್ತಿ, ಕಲಾಶ್ರೀ
ನರಸಿಂಹದಾಸ್, ಬೋರಯ್ಯ, ಬಾಲಕೃಷ್ಣಪ್ಪ, ಬಸವರಾಜು ಹಾಗೂ ಜಿಲ್ಲಾ
ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರಗೌಡ, ಕೆಂಚಮಾರಯ್ಯ,
ವಾಲೆಚAದ್ರಯ್ಯ, ಆಟೋರಾಜು, ಮೆಹಬೂಬು ಪಾಷ, ಸುಜಾತ
ಸೇರಿದಂತೆ ದಲಿತ ಪರ ಸಂಘಟನೆ ಹಾಗೂ ಕಾಂಗ್ರೆಸ್
ಕಾರ್ಯಕರ್ತರು ಪಾಲ್ಗೊಂಡಿದ್ದರು.

Pro-Dalit organizations protest against Union Home Minister Amit Shah for speaking lightly of BR Ambedkar

Share this post

About the author

Leave a Reply

Your email address will not be published. Required fields are marked *