breaking news

ವಿಧ್ಯಾರ್ಥಿ ಗಳಿಗೆ ತಮ್ಮ ತಂದೆ,ತಾಯಿಗಳೇ ರೋಲ್ ಮಾಡಲ್ ಆಗಬೇಕು: ಡಿಡಿಪಿಐ ರಾಧಾ ಎಂ.ಎಸ್

ವಿಧ್ಯಾರ್ಥಿ ಗಳಿಗೆ ತಮ್ಮ ತಂದೆ,ತಾಯಿಗಳೇ ರೋಲ್ ಮಾಡಲ್ ಆಗಬೇಕು: ಡಿಡಿಪಿಐ ರಾಧಾ ಎಂ.ಎಸ್

ತುಮಕೂರು: ಕೇವಲ ಒಳ್ಳೆಯ ಅಂಕ ಗಳಿಕೆಯಷ್ಟೇ ಶಿಕ್ಷಣದ ಉದ್ದೇಶವಲ್ಲ.ಅಂಕಗಳ ಜೊತೆಗೆ ಉತ್ತಮ ಚಾರಿತ್ರ್ಯ,ಒಳ್ಳೆಯ ನಡತೆ, ಮಾನವೀಯ ಗುಣಗಳನ್ನು ಬೆಳೆಸುವುದು ಸಹ ಆಗಿದೆ ಎಂದು ತುಮಕೂರು ಜಿಲ್ಲಾ ಪಿಯು ಡಿಡಿಪಿಐ ರಾಧಾ ಎಂ.ಎಸ್. ತಿಳಿಸಿದ್ದಾರೆ ನಗರದ ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಸಂಸ್ಕೃತಿ-2026-27 ರಲ್ಲಿ ಪ್ರತಿಭಾ ಪುರಸ್ಕಾರ, ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣವೆಂಬುದು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಒಂದು ಮಹತ್ ಸಾಧನ ಎಂದರು

ನಾನು ವಿಧ್ಯಾರ್ಥಿ ದಿಸೆಯಿಂದಲೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಬೇಕು ಎಂಬ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಂದು ಅವರೇ ಹುಟ್ಟು ಹಾಕಿದ ಕಾಲೇಜಿನಲ್ಲಿ ಮಾತನಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ವಿಧ್ಯಾರ್ಥಿ ಗಳಿಗೆ ತಮ್ಮ ತಂದೆ,ತಾಯಿಗಳೇ ರೋಲ್ ಮಾಡಲ್ ಆಗಬೇಕು. ಗುರು,ಹಿರಿಯರು ಸಹೋದರರೊಂದಿಗೆ ಒಳ್ಳೆಯ ಭಾಂಧ್ಯವ್ಯ ಹೊಂದಿ ತಾವು ಕೂಡ ತಮಗಿಂತ ಕಿರಿಯರಿಗೆ ಮಾದರಿಯಾದ ವ್ಯಕ್ತಿತ್ವ ರೂಪಿಸಿಕೊಂಡಾಗ ಮಾತ್ರ ನಿಮ್ಮ ವಿದ್ವತ್ ಗೆ ಬೆಲೆ ಬರುತ್ತದೆ. ಸಮಾಜದಿಂದ ಎಲ್ಲವನ್ಬು ಪಡೆಯುವ ನೀವುಅವಕಾಶ ಸಿಕ್ಕಂತ ಸಂದರ್ಭದಲ್ಲಿ ಸಮಾಜಕ್ಕೆ  ಎನ್ನನ್ನಾದರೂ ನೀಡುವ ಗುಣ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಸಾಧನೆಗೆ ಮಿತಿ ಎಂಬುದಿಲ್ಲ. ಅಸೂಯೆಯನ್ನು ಬದಿಗಿಟ್ಟು ಗುರಿಯಡೆಗೆ ಸಹಬಾಳ್ವೆಯೊಂದಿಗೆ ಮುನ್ಬೆಡೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಪಿಯು ಡಿಡಿಪಿಐ ರಾಧಾ ಎಂ.ಎಸ್‌.ತಿಳಿಸಿದರು. ಲೇಖಕಿ ಮತ್ತು ಯುವ ವಾಗ್ಮಿ ಹಾರಿಕ ಮಂಜುನಾಥ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಗುಡಿ ಗೋಪುರಗಳಲ್ಲಿ ಅಡಕವಾಗಿಲ್ಲ. ಅದು ವೇದ,ವಚನಗಳಲ್ಲಿ ಅಡಕವಾಗಿದೆ. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಂತ ಸಂತರು ಒಂದು ಶತಮಾನಗಳ ಕಾಲ ಬದುಕಿದ್ದು ಹತ್ತಾರು ಶತಮಾನಗಳಿಗೆ ಆಗುವಂತಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಸಂಸ್ಖೃತಿಯ ವಾರಸುದಾರರೇ ಯುವಜನರು,ಅದರಲ್ಲಿಯೂ ಮಹಿಳೆಯರು. ನಮ್ಮ ಪೂರ್ವಜರು ಈ ನಾಡಿನ ಕಲೆ,ಸಾಹಿತ್ಯ, ವಿಜ್ಞಾನ,ಗಣಿತ ಹೀಗೆ ಎಲ್ಲಾ ವಿಷಯಗಳಿಗೂ ಆಪಾರ ಕೊಡುಗೆ ನೀಡಿದ್ದಾರೆ.ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಿದ್ದಗಂಗಾ ಪದವಿಪೂರ್ವ ಕಾಲೇಜು ಗಳ ಸಂಯೋಜಕ ರಾದ ಪ್ರೊ.ಜಿ.ಎಸ್.ರೇಣುಕಪ್ಪ ಮಾತನಾಡಿ, ನಮ್ಮ ಕಾಲೇಜುಗಳಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದವೆ.ಹಾಗಾಗಿ ಜಿಲ್ಲೆಯಲ್ಲಿ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿಗೆ ಒಳ್ಳೆಯ ಹೆಸರಿದೆ. ಉತ್ತಮ ಪ್ರಜೆಗಳನ್ನು ರೂಪಿಸುವ ಕೆಲಸ ನಮ್ಮಲ್ಲಿ ನಡೆದಿದೆ ಎಂದರು. ಸಿದ್ದಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಟಿ.ಕೆ.ನಂಜುಂಡಪ್ಪ ಮಾತನಾಡಿ, ಕ್ರಿಡೆ,ಎನ್.ಎಸ್.ಎಸ್. ,ಎನ್.ಸಿ.ಸಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಾಯಕ್ವ ಗುಣ ಬೆಳೆಸುವ ಜೊತೆಗೆ, ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಉತ್ತಮ ಮೌಲ್ಯಗಳನ್ನು ಬೆಳೆಸುತ್ತವೆ.ಸ್ವಾಮಿ ವಿವೇಕಾನಂದರ ಹೇಳಿಕೆಯಂತೆ ಗುರಿ ಮುಟ್ಟುವ ತನಕ ನಿಮ್ಮ ಪ್ರಯತ್ನ ಮುಂದುವರೆಯಲಿ, ಇಂದು ಸನ್ಮಾನ ಸ್ವಿಕರಿಸುತ್ತಿರುವ ಪ್ರತಿಭಾವಂತರು ಕಿರಿಯರಿಗೆ ಸ್ಫೂರ್ತಿ ಯಾಗಿ ಮುಂದಿನ ಬಾರಿ ಅವರು ಸಹ ಸನ್ಮಾನ ಸ್ವಿಕರಿಸುವಂತೆ ಪ್ರೇರೆಪಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಚಂದ್ರಶೇಖರ್ ಮಾತನಾಡಿ,ಹೆಣ್ಣು ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು ಆರಂಭಿಸಿದ ಪದವಿಪೂರ್ವ ಕಾಲೇಜು, ಇಂದಿಗೂ ಅವರ ಆಶಯದಂತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಟಿಬದ್ದವಾಗಿ ಕೆಲಸ ಮಾಡುತ್ತಿದೆ.ಅತಿ ಹೆಚ್ಚು ಗ್ರಾಮೀಣ ಭಾಗದ ಮಕ್ಕಳೇ ಕಲಿಯುತ್ತಿದ್ದು, ಒಳ್ಳೆಯ ಶೈಕ್ಷಣಿಕ ವಾತಾವರಣ ನಮ್ಮಲಿದೆ.ಜ್ಞಾನಗಂಗಾ ಸ್ಮರಣೆ ಸಂಚಿಕೆ ಮಕ್ಕಳ ಅಭಿವ್ಯಕ್ತಿಗೆ ವೇದಿಕೆಯಾಗಿದೆ ಎಂದರು

ಸಂಸ್ಕೃತಿ ವೇದಿಕೆಯ ಸಂಚಾಲಕರಾದ ಸಮಾಜಶಾಸ್ತ್ರ ಉಪನ್ಯಾಸಕಿ ಮಂಜುಳ ಬಿ.ಎಸ್. ಕಾಲೇಜಿನ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 112 ಜನ ವಿದ್ಯಾರ್ಥಿನಿಯರಿಗೆ,ಹಾಗು ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ,ಭೋಧಕೇತರಸಿಬ್ಬಂದಿಗಳು ಹಾಗೂ ಮಕ್ಕಳು ಅವರ ಪೋಷಕರು ಪಾಲ್ಗೊಂಡಿದ್ದರು.

Parents Should Be the Primary Role Models for Students: DDPI Radha M.S

Share this post

About the author

Leave a Reply

Your email address will not be published. Required fields are marked *