ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾಗಿ ಗುಬ್ಬಿ ಕ್ಷೇತ್ರದಿಂದ ಚುನಾಯಿತರಾದ ಶಾಸಕ ಎಸ್.ಆರ್.ಶ್ರೀನಿವಾಸ್ ಪತ್ನಿ ಕೆ.ಪಿ.ಭಾರತಿದೇವಿ ಅವರು ಶುಕ್ರವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹೂ ಗುಚ್ಚ ನೀಡಿ ತಮ್ಮ ಗೆಲುವಿಗೆ ಸಹಕರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಡಾ.ಪರಮೇಶ್ವರ ಅವರು
ಭಾರತಿದೇವಿ ಅವರಿಗೆ ಶುಭಕೋರಿದರು. ಮುಖಂಡರಾದ ಚೆನ್ನಪ್ಪ, ಮಾರುತಿ
ಮತ್ತಿತರರು ಹಾಜರಿದ್ದರು.