ಅಸಂಘಟಿತ ಕಾರ್ಮಿಕರಿಗೆ ಲಾಕ್ ಡೌನ್ ಪರಿಹಾರ, ಸಾಮಾಜಿಕ ಭದ್ರತೆ, ವಸತಿ, ಒತ್ತಾಯಸಿ ಪತ್ರಿಭಟನೆ.
ರಾಜ್ಯ ಸರ್ಕಾರ ಎಲ್ಲಾ ಸಂಘಟಿತ ಕಾರ್ಮಿಕರಿಗೆ ಲಾಕ್ ಡೌನ್ ಪರಿಹಾರವಾಗಿ 7500ರೂಪಾಯಿಗಳನ್ನು ನೀಡ ಬೇಕು.]ರಾಜ್ಯದಲ್ಲಿ ಲಾಕ್ ಡೌನ್ ಪರಿಹಾರಕ್ಕೆ ಅರ್ಜಿಸಲ್ಲಿಸಿರುವ ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು, ಟೈಲರ್ಗಳು, ಮ್ಯೇಕ್ಯಾನಿಕ್& ಸಹಾಯಕರು,
ಅಟೋ, ಬಸ್, ಲಾರಿ, ಟೆಂಪೋ ಚಾಲಕರು, ದೊಭಿಗಳು, ಕ್ಷೌರಿಕರು, ಕುಂಭಾರರು, ಪುರಿ ಭಟ್ಟಿ ಕಾರ್ಮಿಕರು, ಚಿನ್ನ ಬೆಳ್ಳಿ ಕೆಲಗಾರರು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಈ ಕೊಡಲೆ ಪರಿಹಾರ ಹಣವನ್ನು ನೀಡಬೇಕು. ಇದಕ್ಕೆ ಅಗತ್ಯ ಅರ್ಥಿಕ ಅನುಧಾನವನ್ನು ರಾಜ್ಯ ಸರ್ಕಾರ ನೀಡಬೇಕು. ಇ – ಶ್ರಮ್ ಕಾಡ್ ಅನ್ನು ಉಚಿತವಾಗಿ ನೀಡಬೇಕು, ಹಾಗು ಎಲ್ಲಾ ಅಸಂಘಟಿ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳಾದ ಪಿಂಚಣ ,
ಮಕ್ಕಳ ವಿಧ್ಯಾಬ್ಯಾಸಕ್ಕೆ ವಿದ್ಯಾರ್ಥಿ ವೇತನ, ಚಿಕಿತ್ಸಾ ವೇಚ್ಚ ಮರುಪಾವತಿ, ಮಕ್ಕಳ ಮದವೆಗೆ ಸಹಾಯಧನ,ಯೋಜನೆಗಳನ್ನು ರೂಪಿಸಿಬೇಕು ,ಅದಕ್ಕೆ ಅಗತ್ಯವಾದ ಅನುಧಾನವನ್ನು ಕೇಂದ್ರ – ರಾಜ್ಯ ಸರ್ಕಾರಗಳು ನೀಡಬೇಕು, ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಹಾಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಉಚಿತ ವಾಗಿ ಸ್ಮಾಟ್ ಕಾರ್ಡ ನೀಡ ಬೇಕು, ಹಲವು ತಿಂಗಳುಗಳಿಂದ ನಿಲ್ಲಿಸಲಾಗಿರುವ ನೋಂದಣ ಕಾರ್ಯವನ್ನು ತಕ್ಷಣವೇ ಅರಂಬಿಸಿ ,ನೋಂದಾವಣ ಕಾರ್ಯವನ್ನು ಸರಳೀಕರಿಸಬೇಕು. ಮನೆ/ ನಿವೇಶನ ಇಲ್ಲದೆ ಇರುವ ಎಲ್ಲಾ ಅಸಂಘಟಿತ ಕಾರ್ಮಿರಿಗೆ ವಸತಿ ಯೋಜನೆಯನ್ನು ರೂಪಿಸಿಬೇಕು. ನಗರದಲ್ಲಿ ಮನೆ ಇಲ್ಲದೆ ಇರುವ ಎಲ್ಲಾರಿಗೂ ಅರ್ಜಿ ಸಲ್ಲಿಸಲು ಮತ್ತೋಂದು ಅವಕಾಶ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಅಸಂಘಟಿ ಕಾರ್ಮಿಕರ ಸಂಕಟಗಳನ್ನು ಪರಿಹಾರ ಕಾಣಲು ಸಮಿತಿಯೊಂದನ್ನು ರಚಿಸಬೇಕು . ಮತ್ತು ಅದನ್ನು ಪ್ರತಿ 3 ತಿಂಗಳಿಗೆ ಒಮ್ಮೆ ಕಡ್ಡಾಯ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿ ಸಿಐಟಿಯು , ಮನ ಕೆಲಸಗಾರರ ಸಂಘ, ಟೈಲರ್ ಗಳ ಸಂಘ , ಪುಟ್ ಪಾತ್ ವ್ಯಾಪಾರಿಗಳ ಸಂಘ, ಅಟೋ ಚಾಲಕರು ಜಂಟಿಯಾಗಿ ದಿನಾಂಕ; 23-09-2021 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು’.
ಅಸಂಘಟಿತ ವಲಯದ ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು, ಟೈಲರ್ಗಳು, ಮ್ಯೇಕ್ಯಾನಿಕ್& ಸಹಾಯಕರು, ಅಟೋ, ಬಸ್, ಲಾರಿ, ಟೆಂಪೋ ಚಾಲಕರು, ದೊಭಿಗಳು, ಕ್ಷೌರಿಕರು, ಕುಂಭಾರರು, ಪುರಿ ಭಟ್ಟಿ ಕಾರ್ಮಿಕರು, ಚಿನ್ನ ಬೆಳ್ಳಿ ಕೆಲಗಾರರು, ಬೀದಿ ಬದಿ ಮಾರಾಟಗಾರರು….ಹೀಗೆ ನೂರಾರು ಕೆಲಸಗಳಲ್ಲಿ ತೋಡಗಿರುವರಿಗೆ ರಾಜ್ಯ ಸರ್ಕಾರ ಲಾಕ್ ಡೌನ್ ಪರಿಹಾರ ಸಮರ್ಪಕವಾಗಿ ತಲುಪಿಲ್ಲ . 11 ವಲಯದ ಕಾರ್ಮಿಕರು ದಿನವಿಡೆ ಸರಧಿ ಸಾಲುಗಳಲ್ಲಿ ನಿಂತು, ಕೂಲಿ ಕಳೆಕೊಂಡು ಬೋಜಿಂಗ್ ಸೆಂಟರ್ಗಳಲ್ಲಿ ನೂರಾರು ರೂಪಾಯಿಗಳನ್ನು ಖಚ್ಚು ಮಾಡಿ ಸಲ್ಲಿಸಿ ಅರ್ಜಿಗೆ ಇನ್ನು ಒಂದು ನಯಾಪೈಸ ಬಂದಿಲ್ಲ. ಎಂದು ಪತ್ರಿಭಟನಾಕಾರರು ಅರೋಪಿಸಿದರು.
ಪ್ರತಿಭಟನೆ ಅಧ್ಯಕ್ಷರು ಸೈಯದ್ ಮುಜೀಬ್ , ಎನ್.ಕೆ.ಸುಬ್ರಮಣ್ಯ ಮನೆ ಕೆಲಸಗಾರರ ಸಂಘ ಅನಸೂಯ , ಟೈಲರ್ ಗಳ ಸಂಘ ಮಂಜುಳ ಅಟೋ ಚಾಲಕಕರ ಸಂಘ ಸಿದ್ದರಾಜು , ಪುಟ್ ಪಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಶೆಖರ್ ಕಟ್ಟಡ ಕಾರ್ಮಿಕರ ಸಂಘದ ಕಲೀಲ್ , ಮಾತನಾಡಿದರು.
ಮನವಿ ಸ್ವಿಕರಿಸಿದ ಕಾರ್ಮಿಕ ಧಿಕಾರಿ ರಮೇರ್ಶ ಅವರು ಎಲ್ಲಾ ಅರ್ಹ ಅರ್ಜಿದಾರರಿಗೆ 2000 ರೂ ಬರಲಿದೆ. ಅಸಂಘಟಿತರ ಕಲ್ಯಾಣಯೊಜನೆ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು. Àರ್ಕಾರಗಳು ಅಗತ್ಯವಾದ ಗಮನವನ್ನು ನೀಡದೆ ಇರುವ . ಅವರ ಸಂಕಟಗಳಿಗೆ ಪರಿಹಾರ ಕಾಣುವ ರಾಜಕ್ರಿಯಾ ಇಚ್ಚಾ ಶಕ್ತಿಯನ್ನು ತೋರದೆ ಇರುವ ಕಾರಣ ಈ ಕಾರ್ಮಿಕರ ಬದುಕು ತೀರ ಶೋಚನಿಯವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಸರಿ ಸುಮಾರು 55,500 ರಷ್ಟು ಅರ್ಜಿಗಳನ್ನು ಸಲ್ಲಿಸಿರುವಾಗ ಇದುವರೆವಿಗೋ 7-8 ಸಾವಿರ ಕಾರ್ಮಿಕರಿಗಷ್ಟೆ ಲಾಕ್ ಡೌನ್ ಪರಿಹಾರ ಸಿಕ್ಕಿದೆ. ಉಳಿದ 47500 ಮಂದಿ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಇನ್ನು ಬಂದಿಲ್ಲ. ಇದಕ್ಕೆ ಸೂಕ್ತವಾದ ಅರ್ಥಿಕ ಮಂಜೂರಾತಿ ರಾಜ್ಯ ಸರ್ಕಾರದಿಂದ ನೀಡಲು ಸಿಐಟಿಯು ಪ್ರತಿಭಟನಾಕಾರರು ಒತ್ತಾಯಿಸಿದರು ..