ತುಮಕೂರು: ಕನ್ನಡವೆಂದರೆ ಬರಿ ಭಾಷೆಯಲ್ಲ.ಅದು ಕರ್ನಾಟಕದಲ್ಲಿ
ಜೀವಿಸುವ ೬.೫೦ ಕೋಟಿ ಜನರ ಆಸ್ಮಿತೆ. ಕನ್ನಡವನ್ನು ಪೂಜಿಸುವ ಮೂಲಕ,
ಇತರೆ ಭಾಷೆಗಳನ್ನು ಪ್ರೀತಿಸುವ ಕೆಲಸವನ್ನು ಎಲ್ಲ ಕನ್ನಡಿಗರು
ಮಾಡಬೇಕಾಗಿದೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟಾçಧ್ಯಕ್ಷ
ಚಿ.ನಾ.ರಾಮು ತಿಳಿಸಿದ್ದಾರೆ.
ನಗರದ ಆರನೇ ವಾರ್ಡಿನ ದಿಬ್ಬೂರು ಗ್ರಾಮದಲ್ಲಿ ದಿಬ್ಬೂರು ಯುವಕರು
ಸಂಘ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದ
ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ
ಅವರು,ಕನ್ನಡ ಭಾಷೆಯೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆಗಳು
ಬೆರೆತಿವೆ.ಹಾಗಾಗಿ ಕನ್ನಡವನ್ನು ನಾವೆಲ್ಲರೂ ಪೂಜಿಸಬೇಕಾಗಿದೆ ಎಂದರು.
ದಿಬ್ಬೂರಿನ ಯುವಕ ಸಂಘದವರು, ದಿಬ್ಬೂರು ಗ್ರಾಮದಲ್ಲಿ ಒಂದು ಸ್ಮಶಾನ
ನಿರ್ಮಾಣದ ಬೇಡಿಕೆಯನ್ನು ನಮ್ಮ ಮುಂದಿಟ್ಟಿದ್ದು, ಸ್ಥಳೀಯ ಶಾಸಕರಾದ
ಜಿ.ಬಿ.ಜೋತಿಗಣೇಶ್ ಹಾಗೂ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರೊಂದಿಗೆ
ಮಾತುಕತೆ ನಡೆಸಿ, ಗ್ರಾಮಕ್ಕೆ ಒಂದು ಪ್ರತ್ಯೇಕ ಸ್ಮಶಾನ ಮಂಜೂರು
ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಅಖಿಲ ಭಾರತ ದಲಿತ ಕ್ರಿಯಾಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿದ್ದ
ಇಂದ್ರಕುಮಾರ್.ಡಿ.ಕೆ. ಅವರನ್ನು ರಾಜ್ಯ ದಕ್ಷಿಣ ಜಿಲ್ಲೆಗಳ ಉಸ್ತುವಾರಿಗಳನ್ನಾಗಿ
ನೇಮಕ ಮಾಡಿದ ನೇಮಕಾತಿ ಪತ್ರವನ್ನು ಗಣ್ಯರ ಮುಂದೆ ವಿತರಿಸಿದರು.
ಕಾರ್ಯಕ್ರಮವನ್ನು ಡಾ.ರಾಜಕುಮಾರ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ
ಸಾ.ರಾ.ಗೋವಿಂದ್ ಉದ್ಘಾಟಿಸಿದರು. ಕಲಾಶ್ರೀ ಡಾ.ಲಕ್ಷö್ಮಣದಾಸ್,ವಿಶ್ವಣ್ಣ,
ಮಂಜುನಾಥ್,ವಿಜಯಕುಮಾರ್,ಷೋ ರೂಂ ರಂಗೇಗೌಡ,ಗಾಡಿ
ಜಯರಾಮ್,ವಕೀಲರಾ ವೆಂಕಟಾಚಲ, ಇಂದ್ರಕುಮಾರ್.ಡಿ.ಕೆ,ಭೈರೇಶ್
ಮತ್ತಿತರರು ಪಾಲ್ಗೊಂಡಿದ್ದರು.