breaking newsPUBLIC

Govinda Govinda kannada film Releasing on 26th Nov

Govinda Govinda kannada film Releasing on 26th Nov

ಗೋವಿಂದಾ ಗೋವಿಂದಾ ಕನ್ನಡ ಚಿತ್ರ ನವೆಂಬರ್ 26 ರಂದು ಬಿಡುಗಡೆಯಾಗುತ್ತಿದೆ

ತುಮಕೂರು:ನಾನು ಅವನಲ್ಲ ಅವಳು,ನಮಸ್ತೇ ಮೇಡಂ ಸೇರಿದಂತೆ ಅನೇಕ ಚಿತ್ರ ನಿರ್ಮಾಣ ಮತ್ತು ಕಿರುತರೆ ಧಾರವಾಹಿ ನಿರ್ದೇಶಕ ರವಿ ಆರ್ ಗರಣ , ಶೈಲೇಂದ್ರ ಬಾಬು, ಕಿಶೋರ್ ನಿರ್ಮಾಣದ ಗೋವಿಂದ ಗೋವಿಂದ ಚಿತ್ರ ನ.26ರಂದು ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ತಿಲಕ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಮಂತ್, ಜಾಕಿ ಭಾವನಾ,ಕವಿತಾಗೌಡ,ಪವನ್,ಚೆಂಡೂರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣ ಸುತ್ತಿದ್ದು,ಕುಟುಂಬ ಸಮೇತ ನೋಡಬಹು ದಾದ ಕೌಟುಂಬಿಕ ಕಾಮಿಡಿ ಥ್ರಿಲ್ಲರ್ ಚಿತ್ರ ಇದಾಗಿದೆ ಎಂದರು.


ಚಿತ್ರದ ನಾಯಕನಟ ಸುಮಂತ್ ಮಾತನಾಡಿ, ಐದು ವರ್ಷದ ನಂತರ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದು, ಪ್ರೇಕ್ಷಕರಿಗೆ ಉತ್ತಮ ಚಿತ್ರ ನೀಡುತ್ತಿರುವ ಖುಷಿ ಇದೆ ಎಂದ ಅವರು, ಹಾಸ್ಯಭರಿತ ಕೌಟುಂಬಿಕ ಚಿತ್ರವನ್ನು ಮನೆ ಮಂದಿಯಲ್ಲ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ ಎಂದರು.


ತ್ರಿಭಾμÉಯಲ್ಲಿ ರೂಪುಗೊಂಡಿರುವ ಗೋವಿಂದ ಗೋವಿಂದ ಸಿನಿಮಾ,ತಮಿಳು,ಮಲೆಯಾಳಂ,ಕನ್ನಡದಲ್ಲಿ ಬಿಡುಗಡೆ ಯಾಗುತ್ತಿದೆ, ಮೊದಲು ಕನ್ನಡದಲ್ಲಿ ಬಿಡುಗೊಂಡ ನಂತರ ತಮಿಳು ಮತ್ತು ಮಲೆಯಾಳಂ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.


ಚಿತ್ರದಲ್ಲಿ ನಾನು ಉತ್ತರ ಕರ್ನಾಟಕದ ಹುಡುಗನಾಗಿ ಕಾಣ ಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದ್ದು, ಇದರೊಂದಿಗೆ ಹಾಸ್ಯಕ್ಕೆ ಒತ್ತು ನೀಡಿದರು ಸಹ ಸಸ್ಪೆನ್ಸ್ ಥ್ರಿಲ್ಲರ್ ಇದಾಗಿದ್ದು, ಕೌಟುಂಬಿಕ ಮನರಂಜನಾ ಸಿನಿಮಾ ಇದು ಎಂದರು.


ಸಣ್ಣಪುಟ್ಟ ಸಮಸ್ಯೆಗಳು ನಮ್ಮ ನಡುವೆ ಉಂಟು ಮಾಡುವ ಸಮಸ್ಯೆ ಹಾಗೂ ತಂದೆ ಮತ್ತು ಮಕ್ಕಳ ನಡುವಿನ ಅಂತರವನ್ನು ತೋರುವಂತಹ ಪಾತ್ರವನ್ನು ಮಾಡಿದ್ದು, ನನಗೆ ತಂದೆಯಾಗಿ ಅಚ್ಯುತ್ ಕುಮಾರ್ ಕಾಣ ಸಿಕೊಳ್ಳಲಿದ್ದಾರೆ, ಅವರೊಂದಿಗೆ ಪಾತ್ರ ಹಂಚಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದು ಚಿತ್ರದ ನಾಯಕಿ ಕವಿತಾ ಗೌಡ ತಿಳಿಸಿದರು.


ಮಧುಗಿರಿ ಶಾಂತಲಾ ಚಿತ್ರಮಂದಿರದ ಮಾಲೀಕರು, ನಿರ್ಮಾಪಕರಾದ ಕಿಶೋರ್ ಅವರು ಮಾತನಾಡಿ ಅರವತ್ತು ವರ್ಷದಿಂದ ಚಿತ್ರ ಪ್ರದರ್ಶಕನಾಗಿದ್ದು, ಮೊದಲನೇ ಸಿನಿಮಾದ ನಿರ್ಮಾಣಕ್ಕೆ ಖ್ಯಾತ ನಿರ್ಮಾಪಕರು ಜೊತೆಗೂಡಿದ್ದರಿಂದ ಉತ್ತಮ ಚಿತ್ರ ಮೂಡಿ ಬಂದಿದೆ ಎಂದರು.


ಹಾಸ್ಯನಟ, ಚಿತ್ರ ಬರಹಗಾರ ವಿಜಯ್ ಚೆಂಡೂರ್ ಮಾತನಾಡಿ, ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿದ್ದರು ಸಹ ನಿಮ್ಮಲ್ಲಿ ನಗು ಮೂಡಿಸುವಂತಹ ಅವಸ್ಥೆ ಚಿತ್ರದಲ್ಲಿದೆ, ಮನರಂಜನೆಯಿಂದ ವಂಚಿತರಾಗಿರುವವರು ಚಿತ್ರದಲ್ಲಿ ಭರಪೂರ ಮನರಂಜನೆ ದೊರಕಲಿದೆ ಎಂದರು.


ಪೆÇೀಷಕರು ಮಕ್ಕಳ ಮೇಲೆ ಹೇರುತ್ತಿರುವ ಒತ್ತಡ ಮತ್ತು ತಂದೆ ಮಕ್ಕಳ ನಡುವಿನ ವಿರೋಧಾಭಾಸದಲ್ಲಿನ ಹಾಸ್ಯ ಸನ್ನಿವೇಶಗಳೇ ಚಿತ್ರದ ಜೀವಾಳ, ಜೀವನದಲ್ಲಿ ಅವಾಂತರಗಳಲ್ಲಿನ ತಿಕ್ಕಾಟದಿಂದ ಹೊರಬರಲು ಗೋವಿಂದ ಗೋವಿಂದ ಚಿತ್ರ ನೆರವಾಗಲಿದೆ ಎಂದು ಮಜಾಟಾಕೀಸ್ ಖ್ಯಾತಿಯ ಪವನ್ ಅಭಿಪ್ರಾಯಪಟ್ಟರು.


ಚಿತ್ರಕ್ಕೆ ನಿತಿನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದು, ಛಾಯಾಗ್ರಹಣವನ್ನು ಚಂದ್ರು ಮಾಡಿದ್ದಾರೆ, ಗಾಯಿತ್ರಿ ಚಿತ್ರಮಂದಿರದ ಮಾಲೀಕ ರುದ್ರಪ್ಪ ಸೇರಿದಂತೆ ಚಿತ್ರದ ತಂತ್ರಜ್ಞರು ಭಾಗವಹಿಸಿದ್ದರು.

Share this post

About the author

Leave a Reply

Your email address will not be published. Required fields are marked *