Felicitation Ceremony to achievement of NEET students in Tumkur
ತುಮಕೂರು: ನಗರದ ಅಲಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಕರ್ನಾಟಕ ಔಖಾಫ್ ಪ್ರೊಟೆಕ್ಷನ್ ಕೌನ್ಸಿಲ್, ಅನಾಸ್ ಇಬ್ನ್ ಮಲಿಕ್ ವೆಲ್ಫೇರ್ ಕೌನ್ಸಿಲ್, ಹಾಗೂ ಜಾಮಿಯಾ ಸ್ಯೆದಿನ ಅನಸ್ ಇಬ್ನ್ ಮಲಿಕ್ ವತಿಯಿಂದ 2021ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ
ವಿದ್ಯಾರ್ಥಿಗಳಾದ ನೇಹಾ ಅಜ್ಮತ್ (610 /720) ಖತೀಜತುಲ್ ಕುಬ್ರಾ (577/720)
ಸಾನಿಯಾ ಆಯೇಷಾ ಹುಸ್ಸನ್ನ್ (507/720) ಮೊಹಮ್ಮದ್ ಫಾಸಿಉಲ್ಲಾ (474/720)
ನೂರ್ ಹಾಜಿರಾ (455/720) ಹುಸ್ನ ಕೌಸರ್ (452/720)
ರಬಿಯಾ ಖಾನಂ (418/720) ಕುಲ್ಸುಮ್ಆಸೀಫ್(399/720)
ಅಂಕವನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳ ಈ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ.ವಸೀಮ್ ಇಮ್ರಾನ್, ಜಿಲ್ಲಾ ಆಸ್ಪತ್ರೆ ಹಿರಿಯ ಶಸ್ತ್ರಚಿಕಿತ್ಸಕ, ಡಾ. ಅಸ್ಗರ್ ಬೇಗ್, ನೇತ್ರ ಶಸ್ತ್ರಚಿಕಿತ್ಸಕ ಜನರಲ್ ಆಸ್ಪತ್ರೆ, ಡಾ. ತಮೀಮ್ ಅಹ್ಮದ್ ಹೃದಯ ಶಸ್ತ್ರಚಿಕಿತ್ಸಕ ಎಸ್.ಎಸ್.ಎಂ.ಸಿ, ಅಬ್ದುಲ್ ಹಫೀಜ್ ಖಾಸ್ಮಿ ಇಮಾಮ್ ಮಸೀದ್ ಇ ಅನ್ಸಾರ್, ನಿವೃತ್ತ ಡಿವೈಎಸ್ಪಿ ಕೆ.ಎಂ ಮೊಹಮ್ಮದ್ ಆರಿಫುಲ್ಲಾ ಹಾಗೂ ಕರ್ನಾಟಕ ಔಖಾಫ್ ಪ್ರೊಟೆಕ್ಷನ್ ಕೌನ್ಸಿಲ್ ಅಧ್ಯಕ್ಷ ಟಿ.ಪಿ ಆಫ್ಷರ್ ಖಾನ್,
ಅನಾಸ್ ಇಬ್ನ್ ಮಲಿಕ್ ವೆಲ್ಫೇರ್ ಕೌನ್ಸಿಲ್ ಅಧ್ಯಕ್ಷ ಆಫ್ಝಲ್ ಶರಿಫ್, ಅಲಿ ಪಬ್ಲಿಕ್ ಸ್ಕೂಲ್ (ಟ್ರಸ್ಟ್) ಅಧ್ಯಕ್ಷ ಅಬ್ದುಲ್ ರಹಮಾನ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ಅಸ್ಲಾಂ ಪಾಷಾ, ಶೌಕತ್ ಉಲ್ಲ ಖಾನ್, ಮೊಹಮ್ಮದ್ ಯೂಸಫ್, ಮೊಹಮ್ಮದ್ ಫಾರೂಕ್ ಅಹಮೆದ್, ಝಬಿವುಲ್ಲಾ ಖಾನ್, ಅಮೀನ್ ಅಹಮದ್, ಇಫ್ಟ್ಖರ್ ಅಹಮೆದ್, ಇಲಿಯಾಸ್ ಅಸ್ಲಾಂ ಮತ್ತು ಇತರರು ಉಪಸ್ಥಿತರಿದ್ದರು.