breaking news

ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಬೇಕೆಂದು ಡಿಸಿ ಸೂಚನೆ

ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಬೇಕೆಂದು ಡಿಸಿ ಸೂಚನೆ

ತುಮಕೂರು: ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿಯಿರುವ ಗ್ರಾಮ ಆಡಳಿತಾಧಿಕಾರಿಗಳ ನೇರ
ನೇಮಕಾತಿಗೆ ಸಂಬAಧಿಸಿದAತೆ ತಾತ್ಕಾಲಿಕ ಪರಿಷ್ಕೃತ ಆಯ್ಕೆ
ಪಟ್ಟಿಯನ್ವಯ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು
ನಿಯಮಾನುಸಾರ ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ಶುಭ
ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಬಹು
ಉಪಯೋಗಿ ಸಭಾಂಗಣದಲ್ಲಿAದು ನಡೆದ ಅಭ್ಯರ್ಥಿಗಳ
ಮೂಲ ದಾಖಲೆಗಳ ಪರಿಶೀಲನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ
ಮಾತನಾಡಿದ ಅವರು, ದಾಖಲೆಗಳನ್ನು ಪರಿಶೀಲಿಸುವಾಗ
ಅನುಸರಿಸಬೇಕಾದ ನಿಯಮಗಳ ಬಗ್ಗೆ
ಪರಿಶೀಲನಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.
ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ
ನಿಯೋಜಿತ ಪರಿಶೀಲನಾಧಿಕಾರಿಗಳು ನಿಗಧಿತ ನಮೂನೆಯ
ಅಂಕಣಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.
ಭರ್ತಿ ಮಾಡಿದ ನಂತರ ಅಭ್ಯರ್ಥಿಗಳಿಂದ ಅಗತ್ಯ ದಾಖಲೆಗಳ
೨ ಸೆಟ್ ದೃಢೀಕೃತ ನಕಲುಗಳನ್ನು ಪಡೆಯಬೇಕು
ಎಂದು ಸೂಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ
ಜಿಲ್ಲಾಧಿಕಾರಿಗಳು, ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ
ಇರುವ ಒಟ್ಟು ೭೩ ಹುದ್ದೆಗಳಿಗೆ ಸಲ್ಲಿಸಿರುವ ಅರ್ಜಿಗಳ ಪೈಕಿ ೧:೩
ಅನುಪಾತದನ್ವಯ ದಾಖಲೆಗಳನ್ನು ಪರಿಶೀಲನೆಗಾಗಿ
ಜೇಷ್ಠತೆ ಆಧಾರದ ಮೇಲೆ ೨೧೫ ಅಭ್ಯರ್ಥಿಗಳಿಗೆ ಸೂಚನಾ
ಪತ್ರಗಳನ್ನು ಕಳುಹಿಸಲಾಗಿತ್ತು ಎಂದು ತಿಳಿಸಿದರು.
ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ
ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ೪೩೨೦
ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅಭ್ಯರ್ಥಿಗಳ ತಾತ್ಕಾಲಿಕ
ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ
ನೀಡಲಾಗಿತ್ತು. ಮೂಲ ದಾಖಲೆಗಳ ಪರಿಶೀಲನೆ ನಂತರ
ಅAತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಸಿಂಧುತ್ವ ಪ್ರಮಾಣ
ಪತ್ರ, ಪೊಲೀಸ್ ವರದಿ, ಎಸ್.ಎಸ್.ಎಲ್.ಸಿ./ಪಿಯುಸಿ ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಿ ನೇಮಕಾತಿ ಆದೇಶ
ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪರಿಶೀಲನಾ ಕಾರ್ಯಕ್ಕಾಗಿ ೭ ಕೌಂಟರ್‌ಗಳನ್ನು
ನಿರ್ಮಿಸಲಾಗಿದ್ದು, ೧ ರಿಂದ ೬ ಕೌಂಟರ್‌ಗಳಲ್ಲಿ ಸಾಮಾನ್ಯ, ಪರಿಶಿಷ್ಟ
ಪಂಗಡ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ
ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಪ್ರತಿ
ಕೌಂಟರ್‌ನಲ್ಲಿ ತಲಾ ೩ ಅಧಿಕಾರಿಗಳು ಹಾಗೂ ೩ ಸಹಾಯಕ
ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯಲ್ಲದೆ ೭ನೇ ಕೌಂಟರ್‌ನಲ್ಲಿ
ವಿಕಲಚೇತನರ ದಾಖಲೆಗಳ ಪರಿಶೀಲನೆಗಾಗಿ ವಿಶೇಷವಾಗಿ
ಕೌಂಟರ್ ತೆರೆದು ೬ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ,
ಕಚೇರಿ ಸಹಾಯಕ ಮೋಹನ್‌ಕುಮಾರ್, ಮತ್ತಿತರರು ಹಾಜರಿದ್ದರು.

DC instructed to check the original documents of the candidates as per the revised selection list


Share this post

About the author

Leave a Reply

Your email address will not be published. Required fields are marked *