Congratulatory program for Rajyotsava award Muzammil Pasha by Truck Owners Society
ತುಮಕೂರು: ನಾಡಿನಾದ್ಯಾಂತ ಅದ್ಧೂರಿ ಕನ್ನಡ ರಾಜ್ಯೋತ್ಸವ ಜರುಗಿದ್ದು ಜಿಲ್ಲಾ ಆಡಳಿತದ ವತಿಯಿಂದ ನಡೆದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ತುಮಕೂರು ಜಿಲ್ಲಾ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷರಾದ ಮೂಜಮ್ಮಿಲ್ ಪಾಷಾ ರವರ ಸಮಾಜ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಈ ನಿಟ್ಟಿನಲ್ಲಿ ಲಾರಿ ಮಾಲೀಕರು ಮತ್ತು ಚಾಲಕರ ವತಿಯಿಂದ ನಗರದ ರಿಂಗ್ ರಸ್ತೆಯಲ್ಲಿರುವ (evergreen transport) ಕಚೇರಿಯಲ್ಲಿ ಮೂಜಮ್ಮಿಲ್ ಪಾಷಾ ರವರನ್ನು ಅತ್ಮೀಯವಾಗಿ ಅಭಿನಂದಿಸಲಾಯಿತು.
ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ ಲಾರಿ ಮಾಲೀಕ ಕಲ್ಲೇಶ್ ರವರು ಮಾತನಾಡಿ ಜಿಲ್ಲಾ ಟ್ರಕ್ ಸಮಾಜದ ಅಧ್ಯಕ್ಷರಾಗಿರುವ ಮುಜ್ಮಿಲ್ ಪಾಷಾರ್ ಅವರು ಸಂಕಷ್ಟದಲ್ಲಿರುವ ಅನೇಕ ಲಾರಿ ಮಾಲೀಕರು ಮತ್ತು ಚಾಲಕರಿಗೆ ಸಹಾಯಕ ಚಾಚಿದ್ದು ಇವರ ಅಪಾರವಾದ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯವಾಗಿದ್ದು ಹೀಗಾಗಿ ತುಮಕೂರು ಜಿಲ್ಲಾ ಟ್ರಕ್ ಸಮಾಜದ ವತಿಯಿಂದ ಪ್ರಶಸ್ತಿ ಪಡೆದ ಮುಜ್ಮಿಲ್ ಪಾಷಾ ಅವರನ್ನು ಅಭಿನಂದಿಸಲಾಗಿದೆ ಎಂದು ತಿಳಿಸಿದರು.

ನಡೆದ ಅಭಿನಂದನಾ ಸಮಾರಂಭದಲ್ಲಿ ಲಾರಿ ಮಾಲೀಕರಾದ ಅಹಮದ್ ಖಾನ್ (ಬಾಬು ದಾ) ಪ್ರವೀಜ್ ಅಹಮದ್, ಆರ್.ಕೆ ಇಂಡಸ್ಟ್ರೀಸ್ ಮಾಲೀಕರಾದ ಲಯಿಕ್ ಅಹಮದ್, ಸಾಕ್ಲೆನ್, ಸರ್ದಾರ್, ರೋಷನ್ ಮತ್ತಿತರರು ಉಪಸ್ಥಿತರಿದ್ದರು.
Advertisements
