ತುಮಕೂರು: ಸಮಗ್ರ, ಸಮೃದ್ದ, ಸೌಹಾರ್ಧ ಕರ್ನಾಟಕಕ್ಕಾಗಿ ಎಂಬ
ಘೋಷ ವಾಕ್ಯದೊಂದಿಗೆ ಭಾರತ್ ಕಮ್ಯುನಿಷ್ಟ್ ಪಕ್ಷ (ಮಾರ್ಕ್ವಾದಿ) ಡಿಸೆಂಬರ್
೨೯-೩೦-೩೧ ರಂದು ಮೂರುದಿನಗಳ ೨೪ನೇ ಸಿಪಿಐ(ಎಂ)ನ ರಾಜ್ಯ
ಸಮ್ಮೇಳನವನ್ನು ಸ್ಟಾರ್ ಕನ್ವೆಕ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು
ಸಿಪಿಐ(ಎA) ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನರೇಂದ್ರಮೋದಿ
ನೇತೃತ್ವದ ಎನ್.ಡಿ.ಎ ಸರಕಾರ ಹಾಗೂ ಬಿಜೆಪಿಯ ನೀತಿಗಳಿಂದ
ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ.ಇದರ ಜೊತೆಗೆ ಬಿಜೆಪಿಯ
ಥಿಂಕ್ ಟ್ಯಾಂಕ್ ಆಗಿರುವ ಆರ್.ಎಸ್.ಎಸ್‌ನ ಯೋಜನೆಗಳಿಂದ ಸೌಹಾರ್ಧತೆ ಭಂಗ
ಉAಟಾಗುತ್ತಿದೆ.ಇAತಹ ಸಂದಿಗ್ಧ ಸ್ಥಿತಿಯಲ್ಲಿ ಸಿಪಿಐ(ಎಂ) ಸಮಗ್ರ, ಸಮೃದ್ದ,
ಸೌಹಾರ್ಧ ಕರ್ನಾಟಕದ ಪರಿಕಲ್ಪನೆಯಲ್ಲಿ ರಾಜ್ಯ ಸಮ್ಮೇಳನ ಆಯೋಜಿಸುತ್ತಿದೆ
ಎಂದರು.
ಸಿಪಿಐ ಎಂ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ೨೭ ಜಿಲ್ಲೆಗಳ ಆಯ್ದ ೫೦೦ಕ್ಕೂ ಹೆಚ್ಚು
ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ ೨೯ರಂದು ನಗರದ ಸ್ವಾತಂತ್ರ
ಚೌಕದಿAದ ಟೌನ್ ಹಾಲ್ ವರೆಗೆ ರ‍್ಯಾಲಿ ನಡೆಯಲಿದ್ದುರ‍್ಯಾಲಿಗೆ ಸಿಪಿಐ(ಎಂ)
ಪಾಲಿಟ್‌ಬ್ಯೂರೋ ಸದಸ್ಯ ಬಿ.ವಿ.ರಾಘವ್ ಅವರು ಚಾಲನೆ ನೀಡಲಿದ್ದಾರೆ.ನಂತರ
ಟೌನ್‌ಹಾಲ್ ಮುಂಭಾಗದಲ್ಲಿ ನಡೆಯುವ ಬಹಿರಂಗ ಸಭೆಯನ್ನು ಎಂ.ಬಿ.ಬೇಬಿ
ಅವರು ಉದ್ಘಾಟಿಸಲಿದ್ದು,ಮತ್ತೊಬ್ಬ ಪಾಲಿಟ್ ಬ್ಯೂರೋ ಸದಸ್ಯ ವಿಜಯರಾಘವನ್
ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಯು.ಬಸವರಾಜು ತಿಳಿಸಿದರು.
ಕೇಂದ್ರದಲ್ಲಿ ಪುನಃ ಅಧಿಕಾರಕ್ಕೆ ಬಂದಿರುವ ನರೇಂದ್ರಮೋದಿ
ನೇತೃತ್ವದ ಬಿಜೆಪಿ,ಈ ಹಿಂದಿನ ಘಟನೆಗಳಿಂದ ಬುದ್ದಿ ಕಲಿತಂತೆ
ಕಾಣುತ್ತಿಲ್ಲ.ಮತ್ತದೇ ಕಾರ್ಮಿಕ,ರೈತ ವಿರೋಧಿ ನೀತಿಗಳನ್ನು
ಮುಂದುವರೆಸಿ,ಕಾರ್ಪೋರೇಟ ಪರ ನಿಲುವುಗಳನ್ನು
ಮುಂದುವರೆಸಿದೆ.ಒAದು ದೇಶ,ಒಂದು ಚುನಾವಣೆಯ ಹೆಸರಿನಲ್ಲಿ
ಅಧಿಕಾರವನ್ನು ಕೇಂದ್ರಿಕೃತಗೊಳಿಸಲು ಮುಂದಾಗಿದೆ, ಒಕ್ಕೂಟ
ಸರಕಾರದಲ್ಲಿರುವ ೩೦ ರಾಜ್ಯಗಳಲ್ಲಿ ಚುನಾವಣೆ ಬೇರೆ ಬೇರೆ ಸಮಯಕ್ಕೆ
ನಡೆಯುತ್ತೇವೆ.ಇಂತಹ ಸ್ಥಿತಿಯಲ್ಲಿ ಒಮ್ಮೆ ಏನಾದರೂ ಅವಧಿಪೂರ್ಣ
ಸರಕಾರ ಬಿದ್ದು ಹೋದರೆ,ಲೋಕಸಭಾ ಚುನಾವಣೆ ಬರುವವರೆಗೂ ಆ
ರಾಜ್ಯದ ಮೇಲೆ ರಾಷ್ಟçಪತಿ ಆಳ್ವಿಕೆ ಹೇರುವ ಮೂಲಕ ಬಿಜೆಪಿಯೇತರ
ರಾಜ್ಯಗಳನ್ನು ತನ್ನ ತಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಇದರ
ಹಿಂದಿದೆ.ಇದು ಅತ್ಯಂತ ಅಪಾಯಕಾರಿ ಮತ್ತು ಪ್ರಜಾಪ್ರಭುತ್ವ
ವಿರೋಧಿಯಾಗಿದೆ.ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಮುಂದಿನ
ಹೋರಾಟ ರೂಪಿಸುವ ನಿಟ್ಟಿನಲ್ಲಿ ೨೪ನೇ ಸಿಪಿಐ(ಎಂ) ರಾಜ್ಯ ಸಮ್ಮೇಳನ ಮಹತ್ವ
ಪಡೆದುಕೊಂಡಿದೆ ಎಂದು ಬಸವರಾಜು ತಿಳಿಸಿದರು.
![ಕರ್ನಾಟಕಕ್ಕೆ ಸಮಗ್ರ, ಸಮೃದ್ಧ, ಸಾಮರಸ್ಯ CPIM ಘೋಷಣೆ: ಮೂರು ದಿನಗಳ ರಾಜ್ಯಮಟ್ಟದ ಬೃಹತ್ ಸಮಾವೇಶ 2 DSC2998](https://infojournalist.in/wp-content/uploads/2024/12/DSC2998-1024x595.jpg)
ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಮಿನಾಕ್ಷಿ ಸುಂದರA
ಮಾತನಾಡಿ,ಭಾರತದ ತಲಾ ಅದಾಯದಲ್ಲಿ ಸಾಕಷ್ಟು ಭಿನ್ನವಿದೆ.ನಗರಗಳಲ್ಲಿ
ತಲಾ ಆದಾಯ ೭-೮ಲಕ್ಷ ವಿದ್ದರೆ,ಗ್ರಾಮೀಣ ಭಾಗಗಳಲ್ಲಿ ಕೇವಲ ೭೫೦೦೦-೧ಲಕ್ಷ
ವಿದೆ.ಅಭಿವೃದ್ದಿ ಎಂಬುದು ನಗರ ಕೇಂದ್ರೀತವಾಗುತಿದ್ದು, ಗ್ರಾಮೀಣ
ಭಾಗವನ್ನು ಸಂಪೂರ್ಣ ನಿರ್ಲಕ್ಷ ಮಾಡಲಾಗಿದೆ.ಒಂದೆಡೆ ಫಲವತ್ತಾ ಕೃಷಿ
ಭೂಮಿಗಳನ್ನು ಕೈಗಾರಿಕೆಗಳಿಗೆ ನೀಡುತ್ತಿದ್ದರೆ, ಇನ್ನೊಂದೆಡೆ ಖಾಲಿ
ಇರುವ ಲಕ್ಷಾಂತರ ಎಕರೆ ಬಂಜರು ಭೂಮಿಯ ಕಡೆಗೆ
ಗಮನಹರಿಸುವವರೇ ಇಲ್ಲದಾಗಿದೆ.ಕೇಂದ್ರದ ರೀತಿಯೇ ರಾಜ್ಯ ಸರಕಾರದ
ನೀತಿಗಳು ಜನಸಾಮಾನ್ಯರಿಗೆ ಮಾರಕ ವಾಗಿವೆ.ಲಕ್ಷಾಂತರ ಖಾಯಂ
ಹುದ್ದೆಗಳನ್ನು ತುಂಬದೆ, ಹೊರಗುತ್ತಿಗೆ ಮೂಲಕ ಅಧುನಿಕ
ಜೀತಪದ್ದತಿಯನ್ನು ಜಾರಿಗೆ ತರಲಾಗುತ್ತಿದೆ.ಗುತ್ತಿಗೆ ನೌಕರರ ಸೇವಾ
ಭದ್ರತೆಗೆ ಕಾಯ್ದೆ ತರಬೇಕೆಂಬ ಕಾರ್ಮಿಕರ ಕೂಗ ಸರಕಾರದ ಕಿವಿಗೆ
ಮುಟ್ಟಿಲ್ಲ.ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡದೆ, ಕಾರ್ಮಿಕರಿಗೆ
ಕನಿಷ್ಠ ಕೂಲಿ ನೀಡದ ಸರಕಾರ, ಕಾರ್ಮಿಕರ ಹೆಸರಿನಲ್ಲಿ ಮಾಲೀಕರಿಗೆ ಹಣ
ನೀಡಲು ಯೋಜನೆಗಳನ್ನು ರೂಪಿಸುತ್ತಿದೆ.ಜಿ.ಎಸ್.ಟಿ. ಮೂಲಕ
ಜನಸಾಮಾನ್ಯರಿಗೆ ತೆರಿಗೆ ಬರೆ ಹಾಕಿ, ಶ್ರೀಮಂತರ ಖಜಾನೆ ತುಂಬಿಸಲು
ಹೊರಟಿದೆ.ಈ ಎಲ್ಲಾ ಅಂಶಗಳ ಕುರಿತು ಮೂರು ದಿನಗಳ ರಾಜ್ಯ
ಸಮ್ಮೇಳನದಲ್ಲಿ ಚರ್ಚೆ ನಡೆದು, ಮುಂದಿನ ಹೋರಾಟಗಳ ರೂಪುರೇಷೆ
ಸಿದ್ದಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸೈಯದ್
ಮುಜೀಬ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ,ಜಿಲ್ಲಾ ಕಾರ್ಯದರ್ಶಿ
ಮಂಡಳಿ ಸದಸ್ಯ ಬಿ.ಉಮೇಶ್ ಉಪಸ್ಥಿತರಿದ್ದರು.