breaking newsCrime StoryPolitics PublicPUBLICSOCIAL ACTIVIST

CFI protest against the book VALUE EDUCATION published to against of Prophet Muhammad

CFI protest against the book VALUE EDUCATION published to against of Prophet Muhammad

ಪಠ್ಯ ಪುಸ್ತಕದಲ್ಲಿ ಪ್ರವಾದಿ ಅವಹೇಳನ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ ಎಸ್ ಐ) ತುಮಕೂರಿನಲ್ಲಿ ಪ್ರತಿಭಟನೆ.

ಪ್ರವಾದಿ ಅವಹೇಳನ ನಡೆಸಿದ ಪುಸ್ತಕವನ್ನು ಸ್ಥಳದಲ್ಲಿಯೇ ಸುಟ್ಟು ಆಕ್ರೋಶ.


 ತುಮಕೂರು : ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡ ಬಿಎಡ್ ಮೂರನೇ ಸೆಮಿಸ್ಟರ್ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿರುವ ಪಠ್ಯಪುಸ್ತಕದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂಮರ , ಪ್ರವಾದಿ ಮುಹಮ್ಮದ್ (ಸ) ರವರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಾಕಾರಿ ಅಂಶಗಳನ್ನು  ಖಂಡಿಸಿ ಹಾಗು ಪ್ರೊಫೆಸರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಿತು.


ಪ್ರತಿಭಟನೆಯುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಧ್ಯಾಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ರಾಜ್ಯದಲ್ಲಿ ದಿನೇ ದಿನೇ ದ್ವೇಷ ಭಾಷಣ, ಹಲ್ಲೆ ಸಮುದಾಯವನ್ನು ಗುರಿಪಡಿಸಿ ಅವಹೇಳನ ಹೆಚ್ಚುತ್ತಿದ್ದು ಇದು ಕೂಡಾ ಇದರ ಬಾಗವಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯೇ ಇಲ್ಲಿ ಹಲ್ಲೆ ನಡೆಸಲು ಸುಪಾರಿ ನೀಡುತ್ತಿದ್ದೂ ರಾಜ್ಯವನ್ನು ಅರಾಜಕತೆ ಕೋಮುದಳ್ಳುರಿಯತ್ತ ಕೊಂಡೊಯ್ಯುತ್ತಿದ್ದಾರೆ. ಪ್ರವಾದಿ ಅವಹೇಳನವು ಗಂಭೀರ ವಿಷಯವಾಗಿದ್ದು ಶೀಘ್ರ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಾಂತಿಯನ್ನು ಕಾಪಾಡಬೇಕಾಗಿದೆ ಇಲ್ಲದಿದ್ದಲ್ಲಿ ಕ್ಯಾಂಪಸ್ ಫ್ರಂಟ್ ಈ ವಿಚಾರವನ್ನು ಇನ್ನಷ್ಟು ತೀವ್ರ ರೀತಿಯಲ್ಲಿ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದರು.

ರಾಜ್ಯ ಉಪಾಧ್ಯಕ್ಷ ಅಡ್ವೋಕೇಟ್ ರೋಷನ್ ನವಾಜ್ ಮಾತನಾಡಿ ಎಲ್ಲಾ ಜಾತ್ಯತೀತ ಮನಸ್ಸುಗಳು ಹಾಗು ಸಮುದಾಯವು ವಿಚಾರದಲ್ಲಿ ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಸಂಧರ್ಭದಲ್ಲಿ ಮುಖಂಡರಾದ ಅಝರ್, ಅರ್ಮಾನ್ ಹಾಗು ಮತ್ತಿತರು ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ರಿಜಿಸ್ಟ್ರಾರ್  ಮನವಿಯನ್ನು ಸ್ವೀಕರಿಸಿ , ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Share this post

About the author

Leave a Reply

Your email address will not be published. Required fields are marked *