೩೯ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ದಿನಗಣನೆ, ಎಸ್ ಎಸ್ ಐ ಟಿ ಕ್ಯಾಂಪಸ್ ಆವರಣದಲ್ಲಿ ವೇದಿಕೆ ನಿರ್ಮಾಣಕ್ಕೆ ಪೂಜೆ, ಸುಗ್ಗಿ
ಸಂಭ್ರಮದ ನಂತರ ೩೯ನೇ ಪತ್ರಕರ್ತರ ಸಮ್ಮೇಳನ: ಟಿ.ಇ.ರಘುರಾಮ್
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ ತಿಂಗಳು ೧೮ ಮತ್ತು ೧೯ರಂದು ಕುಣಿಗಲ್ ರಸ್ತೆಯ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ೩೯ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಸ್ ಎಸ್ ಐ ಟಿ ಆವರಣದ ಮೈದಾನದಲ್ಲಿ ವೇದಿಕೆ
ನಿರ್ಮಾಣಕ್ಕೆ ಇಂದು ಪೂಜೆ ಸಲ್ಲಿಸಲಾಯಿತು.

ಇದೇ ತಿಂಗಳ ಜನವರಿ ೧೮ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ. ಪರಮೇಶ್ವರ್ ಅವರ ಆಶಯದಂತೆ ಕಾರ್ಯಕ್ರಮ ಮೂಡಿ ಬರಲಿದೆ, ಇದೇ ದಿನ ಬೆಳಗ್ಗೆ ೮ ರಿಂದ ಟೌನ್ ಹಾಲ್ ವೃತ್ತದಿಂದ ನಡೆಯಲಿರುವ ಪತ್ರಕರ್ತರ ಬೃಹತ್ ಮೆರವಣಿಗೆ ಐತಿಹಾಸಿಕವಾಗಲಿದ್ದು ಎಲ್ಲಾ ಪತ್ರಕರ್ತರು ಶಿಸ್ತು ಸಂಯಮದಿAದ
ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷ ಶಿವಾನಂದ್ತ ಗಡೂರ್ ಅವರು ತಿಳಿಸಿದ್ದಾರೆ.
ಕಾ.ನಿ.ಪ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ಅವರು ಮಾತನಾಡಿ ಕಲ್ಪತರು ನಾಡಿನಲ್ಲಿ ಮೊದಲ ಬಾರಿಗೆ
ನಡೆಯಲಿರುವ ರಾಜ್ಯಮಟ್ಟದ ೩೯ನೇ ಪತ್ರಕರ್ತರ ಸಮ್ಮೇಳನ ಇತಿಹಾಸ ನಿರ್ಮಾಣ ಮಾಡಲಿದ್ದು ಅನೇಕ ವಿಶೇಷತೆಗಳಿಂದ ಸಮ್ಮೇಳನ ಮೂಡಿಬರಲಿದೆ ಕಲ್ಪತರು ನಾಡಿನ ಎಲ್ಲಾ ಸಂಘ ಸಂಸ್ಥೆಯ ಮುಖ್ಯಸ್ಥರು ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮ್ಮೇಳನಕ್ಕೆ ತಮ್ಮದೇ ಆದ ಸಹಕಾರ, ಸಲಹೆ ನೀಡಿದ್ದು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸುಗ್ಗಿ ಸಂಕ್ರಾAತಿಯ ಸಂದರ್ಭದಲ್ಲಿ ವಿಶೇಷ ವೆನಿಸಲಿದೆ, ೩೯ನೇ ಪತ್ರಕರ್ತರ ಸಮ್ಮೇಳನದ ಅಂಗವಾಗಿ
ತುಮಕೂರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು ೧೫ ಸಾಧಕರನ್ನ ಗುರುತಿಸಿ ಗೌರವಾರ್ಥವಾಗಿ ಕಲ್ಪತರು ರತ್ನ ಎಂಬ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾನಿ.ಪ. ಉಪಾಧ್ಯಕ್ಷ ಚಿಕ್ಕಿರಪ್ಪ ಅವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮೇಳನ ಬಹಳ
ಅದ್ದೂರಿಯಾಗಿ ಮೂಡಿ ಬರಲಿದ್ದು ಇದಕ್ಕೆ ಮುಖ್ಯ ಕಾರಣ ಹಲವು ಉಪ ಸಮಿತಿಗಳ ಕೆಲಸ ಕಾರ್ಯ ಪತ್ರಕರ್ತ ಸಂಘಟನೆಯ ಎಲ್ಲಾ
ಸದಸ್ಯರುಗಳು ಹಾಗೂ ಉಪಸಮಿತಿಯ ಅಧ್ಯಕ್ಷರುಗಳ ಕಾರ್ಯವೈಖರಿಯಿಂದಾಗಿ ಹಾಗೂ ವಿಭಿನ್ನತೆಗಳಿಂದ ಸಮ್ಮೇಳನ ಯಶಸ್ವಿಗೊಳ್ಳಲಿದ್ದು,
ಸಮ್ಮೇಳನದಲ್ಲಿ ನಡೆಯುವ ಹಲವು ಘೋಷ್ಠಿಗಳು ಗಮನ ಸೆಳೆಯಲಿದೆ ಎಂದು ತಿಳಿಸಿದರು.
ವೇದಿಕೆ ನಿರ್ಮಾಣ ಪೂಜಾ ಸಮಯದಲ್ಲಿ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಚ್ಎಸ್ ಪರಮೇಶ್, ಸ್ಮರಣ ಸಂಚಿಕೆ ಸಮಿತಿಯ ಹರೀಶ್
ಆಚಾರ್ಯ, ಪ್ರಚಾರ ಸಮಿತಿಯ ಸಂಚಾಲಕರುಗಳಾದ ರೇಣುಕಾ ಮತ್ತು ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.