ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ಅಭಿಯಾನತುಮಕೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಅ. 15 ರಿಂದ ಆರಂಭವಾಗಿದ್ದು, ಅ. 31ರ ವರೆಗೆ ನಡೆಯಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ತಾಜುದ್ದಿನ್ ಶರೀಫ್ ತಿಳಿಸಿದರು.ಭಾರತದಲ್ಲಿ ಸುಮಾರು 2,300 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ, ಕೆಲವು ಕೋಮು ಆಧಾರಿತ ಪಕ್ಷಗಳಾಗಿವೆ.
ಕೆಲವು ಕುಟುಂಬ ಆಧಾರಿತವಾದರೆ ಇನ್ನು ಕೆಲವು ಸ್ವಪ್ರತಿಷ್ಠೆಗಾಗಿ ಹುಟ್ಟಿಕೊಂಡ ಪಕ್ಷಗಳಾಗಿವೆ ಎಂದು ವಿಷಾದಿಸಿದರು.ಹೀಗೆ ಹಲವು ಕಾರಣಗಳಿಗಾಗಿ ಹುಟ್ಟಿಕೊಂಡ ಪಕ್ಷಗಳಿಗೆ ದೇಶದ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳು ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಬಡತನ, ನಿರುದ್ಯೋಗ, ಕೆಲವರ್ಗದವರ ಮೇಲೆ ದೌರ್ಜನ್ಯ, ಹೀಗೆ ಹಲವಾರು ಸಮಸ್ಯೆಗಳು ಇನ್ನು ಕಾಡುತ್ತಿವೆ. ಕೇವಲ ಕೈ ಬದಲಾವಣೆ ಆಗಿದೆಯೇ ಹೊರತು ಆಡಳಿತ ಶೈಲಿಯಲ್ಲಿ ಬದಲಾವಣೆಯಾಗಿಲ್ಲ.
ಇವೆಲ್ಲವುಗಳಿಂದ ಜನರಿಗೆ ಬೇಸರ ಹುಟ್ಟಿದೆ ಎಂದರು.ಜನಸಾಮಾನ್ಯರಿಗೆ ರಾಜಕೀಯ ಪಕ್ಷಗಳೆಂದರೆ ಒಂದು ತರಹ ಅಲರ್ಜಿಯಾಗತೊಡಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯದಲ್ಲಿ ಮೌಲ್ಯದೊಂದಿಗೆ, ಭಾರತದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸಿನೊಂದಿಗೆ ಹುಟ್ಟಿಕೊಂಡ ಪಕ್ಷವಾಗಿದೆ ಎಂದರು.
ಈ ಸದಸ್ಯತ್ವವನ್ನು ಮಿಸ್ಡ್‌ಕಾಲ್ (9482874767) ಕೊಡುವ ಮೂಲಕ ನೋಂದಾಯಿಸಬಹುದು. ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.