ತುಮಕೂರು: ತುಮಕೂರಿನಲ್ಲಿ ಪ್ರಪ್ರಥಮ ಭಾರಿಗೆ ವಿಯಾ ಮೋಟಾರ್ಸ್ ವತಿಯಿಂದ ಆಪೆ ಎಲೆಕ್ಟ್ರಿಕಲ್ ಪ್ಯಾಸೆಂಜರ್ ಮತ್ತು ಗೂಡ್ಸ್ ಆಟೋ ಶೋರೂಂ ಪ್ರಾರಂಭೋತ್ಸವವನ್ನು ಅ.12 ರಂದು ಸಂಜೆ 6 ಗಂಟೆಗೆ ನಗರದ ರಿಂಗ್ ರಸ್ತೆಯ ಹೊರವಲಯದ ಮರಳೂರು ಸಮೀಪ ಹಮ್ಮಿಕೊಳ್ಳಲಾಗಿದೆ ಎಂದು ಶೋ ರೂಂನ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ವಾಲಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಗ್ರಾಹಕರಿಗಾಗಿ ಆಪೆ ಎಲೆಕ್ಟ್ರಿಕ್ ಆಟೋ ಶೋರೂಂ ಪ್ರಾರಂಭಿಸಲಾಗುತ್ತಿದ್ದು, ಅಧಿಕ ಮೈಲೇಜ್ ಮತ್ತು ಉತ್ತಮ ಗುಣಮಟ್ಟವುಳ್ಳ ಶಬ್ದ ರಹಿತ ಐ ಕನೆಕ್ಟ್ ವುಳ್ಳ ಫೆಸಿಲಿಟಿವುಳ್ಳ
ವಾಹನಗಳು ಲಭ್ಯವಿವೆ ಎಂದರು.
ವಾಯುಮಾಲಿನ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಧರಗಳು ಕೂಡ ಹೆಚ್ಚುತ್ತಿವೆ. ಇದರಿಂದ ಆಟೋ ಚಾಲಕರು ಮತ್ತು ಮಾಲೀಕರು ಪೆಟ್ರೋಲ್ ಮತ್ತು ಡೀಸೆಲ್ ಗೆ ಹಣ ಹೊಂಚಲು ಪರದಾಡುವಂತಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಪ್ಯಾಸೆಂಜರ್ ಆಟೋ ಅಥವಾ ಗೂಡ್ಸ್ ಆಟೋಗಳನ್ನು ಕೇವಲ 3 ಗಂಟೆ 20 ನಿಮಿಷ ಚಾರ್ಜ್ ಮಾಡಿದರೆ ಸಾಕು ಪ್ಯಾಸೆಂಜರ್ ಆಟೊ 110 ಕಿ.ಮೀ ಮೈಲೇಜ್ ಕೊಡುತ್ತದೆ. ಹಾಗೆಯೇ ಗೂಡ್ಸ್ ಆಟೋ 90 ರಿಂದ 100 ಕಿ.ಮೀ ಮೈಲೇಜ್ ಕೊಡುತ್ತದೆ ಎಂದು ವಿವರಿಸಿದರು.
ಒಂದು ಗಂಟೆಗೆ 45 ನಿಮಿಷ ಕ್ರಮಿಸುವ ಎಲೆಕ್ಟ್ರಿಕ್ ಆಟೋ ಕೆಪಾಸಿಟಿ 500 ಕೆ.ಜಿ.ತೂಕವನ್ನು ಹೊತ್ತಯ್ಯಲಿದೆ. ಮೂರು ವರ್ಷಗಳ ವಾರೆಂಟಿಯೊಂದಿಗೆ ಮೂರು ವರ್ಷಗಳ ಫ್ರೀ ಮೈಂಟೆನೆನ್ಸ್, ಯಾವುದೇ ರಸ್ತೆ ತೆರಿಗೆ ಇಲ್ಲದೆ ಅತ್ಯಂತ ಕಡಿಮೆ ರನ್ನಿಂಗ್ ಕಾಸ್ಟ್ ವುಳ್ಳ ಪವರ್ಫುಲ್ ಮೋಟಾರ್, 7.5 ಞWh ಸಾಮರ್ಥದ ಪವರ್ ಫುಲ್ ಬ್ಯಾಟರಿ ಹೊಂದಿರುವ ವಾಹನಗಳು ಗ್ರಾಹಕರಿಗೆ ಸಿಗಲಿವೆ ಎಂದು ಹೇಳಿದರು.
4.30 ಲಕ್ಷ ರೂ. ವಾಹನದ ಒಟ್ಟು ಮೌಲ್ಯವಾಗಿದ್ದು, ಸರ್ಕಾರದ ಸಬ್ಸಿಡಿ 70 ರಿಂದ 80 ಸಾವಿರ ರೂ ಸಿಗಲಿದೆ. ಹೀಗಾಗಿ ಗ್ರಾಹಕರಿಗೆ ಕೇವಲ 3.10 ಲಕ್ಷದಲ್ಲಿ ಪ್ಯಾಸೆಂಜರ್ ಆಟೋ ಮತ್ತು 3.35 ಲಕ್ಷ ರೂ ಗಳಲ್ಲಿ ಗೂಡ್ಸ್ ಆಟೋ ಸಿಗಲಿವೆ ಎಂದರು. ಈ ಸಂದರ್ಭದಲ್ಲಿ ಶ್ರೀಮತಿ ವರ್ಷ ವೀರೇಶ್ ಹಾಜರಿದ್ದರು.
ಅ.12 ರಂದು ಪ್ರಾರಂಭೋತ್ಸವ:
ಅ.12 ರಂದು ಸಂಜೆ 6 ಗಂಟೆಗೆ ವಿಯಾ ಮೋಟಾರ್ಸ್ ಪ್ರಾರಂಭೋತ್ಸವ ನಡೆಯಲಿದ್ದು, ಕೇಂದ್ರ ಸಚಿವರಾದ ಭಗವಂತ ಖೂಬಾ ಉದ್ಘಾಟಿಲಿದ್ದಾರೆ. ಸಂಸದ ಜಿ.ಎಸ್. ಬಸವರಾಜ್ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜಿಮಾಬೀ, ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾಲಿಕೆ ಸದಸ್ಯರಾದ ಮನು, ಧರಣೇಂದ್ರಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.