breaking news

ಸಮಾಜ ನಿರ್ಮಾಣದಲ್ಲಿ ಮಹಿಳಾ ಶಿಕ್ಷಣವೇ ಪ್ರಮುಖ ಶಕ್ತಿ: ಎಸಿ ನಾಹಿದಾ ಜಮ್‌ಜಮ್

ಸಮಾಜ ನಿರ್ಮಾಣದಲ್ಲಿ ಮಹಿಳಾ ಶಿಕ್ಷಣವೇ ಪ್ರಮುಖ ಶಕ್ತಿ: ಎಸಿ ನಾಹಿದಾ ಜಮ್‌ಜಮ್

ತುಮಕೂರು: ನಗರದ ಅಲಿ ಪಿಯು ಕಾಲೇಜಿನಲ್ಲಿ ಫುಡ್ ಫೆಸ್ಟ್–2025 ಕಾರ್ಯಕ್ರಮವನ್ನು ಸಹಾಯಕ ಆಯುಕ್ತೆಯಾದ ನಾಹಿದಾ ಜಮ್‌ಜಮ್ ರವರು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅವರು ಮಹಿಳೆಯ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಶಕ್ತಿ ಎಂಬುದನ್ನು ಹೈಲೈಟ್ ಮಾಡಿದರು.ನಾಹಿದಾ ಜಮ್‌ಜಮ್ ರವರು ಮಾತನಾಡಿ, “ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹಿಳಾ ಶಿಕ್ಷಣದ ಪಾತ್ರ ಅತ್ಯಂತ ಅಮೂಲ್ಯ.

ವಿದ್ಯಾರ್ಥಿನಿಯರು ಶಿಕ್ಷಣವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿ, ಅಧ್ಯಯನದೊಂದಿಗೆ ಮೌಲ್ಯಗಳು ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ದೊಡ್ಡ ಸಾಧನೆ ನಿಶ್ಚಿತ.

ಉತ್ತಮ ಶಿಕ್ಷಣ ಪಡೆದ ಮಹಿಳೆ ಒಂದು ಕುಟುಂಬವನ್ನಷ್ಟೇ ಅಲ್ಲ, ಸಮಗ್ರ ಸಮಾಜವನ್ನೂ ಉತ್ತೇಜನ ನೀಡಲು ಶಕ್ತಳು,” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ತುಮಕೂರು ಮಹಾನಗರ ಪಾಲಿಕೆ ಕೌನ್ಸಿಲ್ ಸೆಕ್ರೆಟರಿ ನಜ್ಮಾ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, “ಇಂದಿನ ಯುಗದಲ್ಲಿ ಸ್ಮಾರ್ಟ್ ವರ್ಕ್ ಮುಖ್ಯ. ಸತತ ಪರಿಶ್ರಮ, ಆತ್ಮವಿಶ್ವಾಸ ಮತ್ತು ಗುರಿ ಸಾಧನೆಯ ಹಂಬಲ ಇದ್ದರೆ ಯಾವುದೇ ಅಡೆತಡೆಗಳನ್ನೂ ದಾಟಿ ಸಮಾಜದಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದು,” ಎಂದು ಹೇಳಿದರು.

ಫುಡ್ ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ವಿವಿಧ ಆಹಾರ ವಸ್ತುಗಳ ಸ್ಟಾಲ್‌ಗಳನ್ನು ಅಲಂಕರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನೂ ಆಯೋಜಿಸಲಾಗಿದ್ದು, ಪಾಲಕರ ಹಾಗೂ ಅತಿಥಿಗಳಿಂದ ವಿದ್ಯಾರ್ಥಿಗಳ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿಗಳು ಹಾಜಿ ಮಿರ್ಜಾ ಅಸ್ಲಂ ಪಾಶ, ಪ್ರಾಂಶುಪಾಲ ಶೇಕ್ ಮಹಮ್ಮದ್ ಅನ್ವರ್, ಅತಿಥಿಗಳಾಗಿ ಆಗಮಿಸಿದ್ದ ಯುವ ಮುಖಂಡರಾದ ತಾಜುದ್ದೀನ್ ಷರೀಫ್, ಅಪ್ಸರ್ ಪಾಷ, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.

Value-Based Education is the True Guide for Women’s Progress: AC Nahida Zam Zam

Share this post

About the author

Leave a Reply

Your email address will not be published. Required fields are marked *