Tumkur | The person who made the video is being treated in the ICU | viral video |
ತುಮಕೂರು ನಗರದ ನಜರಾಬಾದ್ ಬಡಾವಣೆಯಲ್ಲಿ ವಾಸುಸುತ್ತಿರುವ ಆಝಮ್ ಪಾಷಾ (37) ಮೀಟರ್ ಬಡ್ಡಿ ದಂಧೆ ಗೆ ಸಿಲುಕಿ ಭಾನುವಾರದಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತುಮಕೂರಿನ ಸದಾಶಿವನಗರದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಒಂದೇ ಕುಟುಂಬದ ಐದು ಮಂದಿ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ನಂತರವೂ ಮೀಟರ್ ಬಡ್ಡಿ ದಂಧೆಕೋರರ ದಬ್ಬಾಳಿಕೆ ನಿಲ್ಲುತ್ತಾ ಇಲ್ಲ, ನಗರದಲ್ಲಿ ನಿರಂತರವಾಗಿ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಆತ್ಮಹತ್ಯೆಗೆ ಯತ್ನಿಸಿದ ನಜರಾಬಾದ್ ಬಡಾವಣೆಯ ನಿವಾಸಿ ಅಝಮ್ ಪಾಷಾ ರವರು ಖಾಸಗಿ ವ್ಯಕ್ತಿ ಹತ್ರ ಕೈಸಾಲವನ್ನು ಪಡೆದಿದ್ದು ಮರುಪಾವತಿಸಲಾರದೇ ಮೀಟರ್ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಹಲವು ಪ್ರಶ್ನೆಗೆ ಉತ್ತರ ಸಿಗಲಾರದಂತಾಗಿದೆ.ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚಾಗಿದ್ದು ಪೊಲೀಸರಿಗೆ ಸವಾಲಾಗಿದೆ. ಇಂತಹ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಷ್ಟು ಮಂದಿ ದಂಧೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆವಾಗಿದೆ.