ತುಮಕೂರು:ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಪ್ರಸ್ತಾಪಿತ ನೋಟರಿ ಕಾಯ್ದೆಗೆ ಆಕ್ಷೇಪಣೆಯನ್ನು ತುಮಕೂರು ಜಿಲ್ಲಾ ನೋಟರಿಗಳ ಸಂಘದವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ಹೆಚ್.ಕೆ.ವಿ.ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಹೆಚ್.ವಿ.ವೆಂಕಟೇಶ್ ಅವರುಗಳ ನೇತೃತ್ವದಲ್ಲಿ ಹತ್ತಾರು ನೋಟರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಆಕ್ಷೆಪಣೆ ಸಲ್ಲಿಸಲಿದರು.
ಈ ವೇಳೆ ಮಾತನಾಡಿ ತುಮಕೂರು ಜಿಲ್ಲಾ ನೋಟರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ವೆಂಕಟೇಶ, ಕೇಂದ್ರ ಸರಕಾರ ನೋಟರಿಸ್ ಆಕ್ಟ್ 1952ಕ್ಕೆ ತಿದ್ದುಪಡಿ ತರಲು,ದಿ ನೋಟರಿಸ್ ಆಕ್ಟ್ -2021 ನ್ನು ಪ್ರಾಸ್ತಾಪಿಸಿದೆ.ಸದರಿ ಪ್ರಾಸ್ತಾವನೆ ಯಲ್ಲಿ ನೋಟರಿಯಾಗಿ ಕೆಲಸ ಮಾಡುವವರಿಗೆ 15 ವರ್ಷಗಳ ಕಾಲಮಿತಿಯನ್ನು ನಿಗಧಿ ಪಡಿಸಲು ಮುಂದಾಗಿದೆ.ಇದರಿಂದ ಲಕ್ಷಾಂತರ ಜನ ನೋಟರಿ ವಕೀಲರಿಗೆ ತೀವ್ರ ತೊಂದರೆಯಾಗುತ್ತದೆ.ಕೋರೋನ ಮತ್ತಿತರರ ಸಂಕಷ್ಟಗಳಿಂದ ನೋಟರಿ ವಕೀಲರು ದಿನಕ್ಕೆ 300-400 ರೂ ದುಡಿಯುವುದು ಕಷ್ಟವಾಗಿದೆ. ಹೀಗಿರುವಾಗ 15 ವರ್ಷಕ್ಕೆ ನಿಗಧಿಗೊಳಿಸಿದರೆ, ಈ ಕಾರ್ಯ ನಿರ್ವಹಿಸುತ್ತಿರುವ ವಕೀಲರ ಪಾಡೇನು ಎಂದು ಪ್ರಶ್ನಿಸಿದರು.
ನೋಟರಿಗಳಾಗಿ ಕೆಲಸ ಮಾಡಬೇಕೆಂದರೆ ಕನಿಷ್ಠ 10 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.ಒಮ್ಮೆ ನೋಟರಿಗಳಾಗಿ ಕಾರ್ಯ ಆರಂಭಿಸಿದರೆ ವಕೀಲರಾಗಿ ಕಾರ್ಯನಿರ್ವಹಿಸಲು ಕಷ್ಟ, ಎರಡು ಕಡೆಗಳಲ್ಲಿ ಒತ್ತಡ ಹೆಚ್ಚಿರುತ್ತದೆ. ಇಂತಹ ವೇಳೆಯಲ್ಲಿ ನೋಟರಿಗಳಾಗಿ 15 ವರ್ಷ ಮಾತ್ರ ಸೇವೆ, ಅಲ್ಲದೆ ಒಂದು ವೇಳೆ ತಾವು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಪ್ಪು ಮಾಡಿದರೆ ನೋಟರಿಯಿಂದ ತೆಗೆಯುವ ಪ್ರಸ್ತಾಪ ಮುಂದಿಟ್ಟಿದೆ. ಇದನ್ನು ವಿರೋಧಿಸಿ, ಇಂದು ಇಡೀ ದೇಶದಾದ್ಯಂತ ನೋಟರಿ ವಕೀಲರು ತಮ್ಮ ಕೆಲಸ ಸ್ಥಗಿತಗೊಳಿಸಿ,ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಒಂದು ವೇಳೆ ಸರಕಾರ ನಮ್ಮ ಮನವಿ ಸ್ಪಂದಿಸಿ,ವಯಸ್ಸಿನ ಮಿತಿಯನ್ನು ತಿದ್ದುಪಡಿ ವಿಧೇಯಕದಿಂದ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡಸಲಾಗುವುದು ಎಂದು ಟಿ.ಹೆಚ್.ವೆಂಕಟೇಶ್ ತಿಳಿಸಿದರು.
ಈ ವೇಳೆ ನೋಟರಿಗಳಾದ ಎನ್.ಬಸವರಾಜು, ವೆಂಕಟೇಶ್, ಶಿವರಾಮ್, ರಾಮಚಂದ್ರಪ್ಪ, ತಿಪ್ಪಣ್ಣ, ನಿಸಾರ್ ಅಹಮದ್, ರಮೇಶ್‍ನಾಯ್ಕ್, ಮಲ್ಲಿಕಾರ್ಜುನ್, ಸುಧಾಮಣ , ಭಾರತಿ, ವೀಣಾಲಕ್ಷ್ಮಿ, ಮಮತ ಸೇರಿದಂತೆ ಹಲವರು ಉಪಸ್ಥಿತರಿದ್ದರು.