breaking newsPUBLICSOCIAL ACTIVIST

Tumkur district borewell agents association protest

Tumkur district borewell agents association protest

ತುಮಕೂರು:ಕೊಳವೆ ಬಾವಿ ಕೊರೆಯುವ ದರವನ್ನು ಏಕಾಎಕಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಗೂ ಎಜೆಂಟ್‍ರುಗಳನ್ನು ಮಾಲೀಕರ ಸಂಘದೊಳಗೆ ವಿಲೀನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಇಂದು ತುಮಕೂರು ಜಿಲ್ಲಾ ಬೊರ್‍ವೆಲ್ ಎಜೆಂಟ್‍ರುಗಳ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗುಬ್ಬಿ ರಿಂಗ್ ರಸ್ತೆಯಲ್ಲಿರುವ ಕೊಳವೆ ಬಾರಿ ಕೊರೆಯುವ ಲಾರಿ ಮಾಲೀಕರು ಮತ್ತು ಎಜೆಂಟರ ಸಂಘದ ಕಚೇರಿ ಎದುರು ಎಜೆಂಟರಾದ ರಾಮಣ್ಣ ಅವರ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿ,ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿರುವ ಡಿಗ್ಗಿಂಗ್ ದರವನ್ನು ಕಡಿತಗೊಳಿಸಬೇಕು ಹಾಗೂ,ಎಜೆಂಟರ ಸಂಘವನ್ನು ಮಾಲೀಕರ ಸಂಘದೊಂದಿಗೆ ವಿಲೀನ ಮಾಡಬಾರದು ಎಂದು ಆಗ್ರಹಿಸಿದರು.


ಈ ವೇಳೆ ಮಾತನಾಡಿದ ಎಜೆಂಟರ ಸಂಘದ ರಾಮಣ್ಣ ಅವರು,ಇದುವರೆಗೂ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ಲಾರಿ ಮಾಲೀಕರು ಮತ್ತು ಎಜೆಂಟರ ಸಂಘಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು.ಆದರೆ ಕಳೆದ ಎರಡು ತಿಂಗಳ ಹಿಂದೆ ತುಮಕೂರಿನಲ್ಲಿ ಲಾರಿ ಮಾಲೀಕರು ಮತ್ತು ಎಜೆಂಟರ ಸಂಘ ಎಂಬ ಸಂಘ ಹುಟ್ಟು ಹಾಕಿ,ಬಲವಂತವಾಗಿ ಎಜೆಂಟರುಗಳನ್ನು ಸೇರುವಂತೆ ಒತ್ತಾಯಿಸುತ್ತಿದ್ದಾರೆ.ನಮ್ಮದು ಕಾರ್ಮಿಕ ಸಂಘಟನೆ, ಅವರದ್ದು ಮಾಲೀಕರ ಸಂಘಟನೆ, ಹಾಗಾಗಿ ಎರಡು ಸಂಘಗಳ ವಿಲೀನ ಬೇಡ ಎಂಬುದು ನಮ್ಮ ಆಗ್ರಹವಾಗಿದೆ.ಆದರೆ ಇದಕ್ಕೆ ಅವರು ಬೆಲೆ ನೀಡುತ್ತಿಲ್ಲ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಿಪಿಐ ಅವರಿಗೆ ಸಹ ದೂರು ನೀಡಲಾಗಿದೆ.ಅಲ್ಲದೆ ರಾಜ್ಯ ಸಂಘದ ಅಧ್ಯಕ್ಷರಾದ ಅನಿಲ್ ಅವರ ಗಮನಕ್ಕೂ ತರಲಾಗಿದೆ. ಅವರು ಸಹ ಎಜೆಂಟರು ಮತ್ತು ಮಾಲೀಕರ ಸಂಘ ಒಂದೆ ಹೆಸರಿನಲ್ಲಿ ಇರುವುದು ಸೂಕ್ತವಲ್ಲ ಎಂದು ತಿಳಿ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.


ಕೊಳವೆಬಾವಿ ಕೊರೆಯುವ ಮಾಲೀಕರು ಏಕಾಎಕಿ ಡಿಗ್ಗಿಂಗ್ ಮಾಡುವ ದರವನ್ನು ಒಂದು ಸಾವಿರ ಅಡಿಯವರೆಗೆ,ಪ್ರತಿ ಅಡಿಗೆ 85 ರೂ ಇದ್ದನ್ನು,115-120 ರೂ ಮಾಡಿದ್ದಾರೆ.ಆದರೆ ನಾವು ಕೊವಿಡ್ ಸಂಕಷ್ಟದಲ್ಲಿ ದರ ಹೆಚ್ಚಳ ಮಾಡುವುದು ತರವಲ್ಲ.ಇದರಿಂದ ರೈತರಿಗೆ ಹೆಚ್ಚಿನ ಹೊರೆಯಾಗಲಿದೆ.ಅಲ್ಲದೆ 300 ಅಡಿಯವರೆಗೆ 115 ರೂ,400 ಅಡಿಯವರೆಗೆ 120 ರೂ, ಆ ನಂತರ ಸಾವಿರ ಅಡಿಯವರೆಗೆ 125 ರೂ ಹೀಗೆ ಮನಸ್ಸಿಗೆ ಬಂದಂತೆ ಪಿಕ್ಸ್ ಮಾಡಿದ್ದಾರೆ.ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಮ್ಮನ್ನು ಬದಿಗೊತ್ತಿ,ಲಾರಿ ಮಾಲೀಕರು ಮತ್ತು ಗುತ್ತಿಗೆದಾರರು ನೇರವಾಗಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದಾರೆ.ಇದಕ್ಕೆ ನಮ್ಮ ವಿರೋಧವಿದೆ.ನಾವು ಹತ್ತಾರು ವರ್ಷಗಳಿಂದ ಎಜೆಂಟರಾಗಿ ಕೆಲಸ ಮಾಡಿದ ನಮಗೆ ಅನ್ಯಾಯವಾಗುತ್ತಿದ್ದು,ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ರಾಮಣ್ಣ ತಿಳಿಸಿದರು.


ಕೊಳವೆ ಬಾವಿ ಕೊರೆಯುವ ಲಾರಿಗಳ ಓನರ್,ಗುತ್ತಿಗೆದಾರರು ಮತ್ತು ಎಜೆಂಟರ ಸಂಘ ಎಂದು ಹೇಳಿಕೊಂಡು,ಲಾರಿ ಮಾಲೀಕರಿಂದ 25 ಸಾವಿರ,ಎಜೆಂಟರಿಂದ 15 ಸಾವಿರ ರೂಗಳನ್ನು ಯಾವುದೇ ರಸೀದಿ ನೀಡದೆ ಹಣ ಪಡೆಯುತ್ತಿದ್ದಾರೆ. ಸಂಘವೂ ಇನ್ನೂ ನೊಂದಣ ಯಾಗಿಲ್ಲ.ಅನಧೀಕೃತವಾಗಿ ಬಲವಂತವಾಗಿ,ಪ್ರಭಾವಿಗಳನ್ನು ಬಳಸಿಕೊಂಡು ವಸೂಲಿ ದಂಧೆಗೆ ಇಳಿದಿದ್ದಾರೆ.ಹಾಗಾಗಿ ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಬೆಣ್ಣೆರಾಜು ತಿಳಿಸಿದರು.
ಈ ವೇಳೆ ಎಜೆಂಟರುಗಳಾದ ಎಸ್.ಕೆ.ಆಟೋ ಕುಮಾರ್,ನಾಗವಲ್ಲಿ ಮಂಜುನಾಥ್, ಕುಣ ಗಲ್ ರಮೇಶ್, ಕೊರಟಗೆರೆ ಸುನೀಲ್,ಮೃತ್ಯುಂಜಯ,ಕುಮಾರ್ ದೇವರಾಯಪಟ್ಟಣ,ಹೊನಸಿಗೆರೆ ಅರ್ಜುನ್,ನಿಟ್ಟೂರು ಮಲ್ಲೇಶ್,ಕೋಳಾಲ ಚಿದಾನಂದ್, ಕುದೂರು ರವಿಕುಮಾರ್,ಯಡಿಯೂರು ರಾಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *