ಆಹಾರ ಉತ್ಪಾಧನಾ ಕೇತ್ರದಲ್ಲಿ ತೊಡಗಿರುವವರಿಗೆ ತರಬೇತಿ
ಪ್ರಕಾರ್ ಸಂಸ್ಥೆಯಿಂದ ಜಿಲ್ಲೆಯಲ್ಲಿ ಪುಡ್‍ಸೆಪ್ಟಿ ಟ್ರೈನಿಂಗ್.
ತುಮಕೂರು:ಬೀದಿ ಬದಿ ಹಣ್ಣು,ತರಕಾ ವ್ಯಾಪಾರಿಗಳು,ಅಡುಗೆ ಕ್ಯಾಟರಿಂಗ್‍ನವರು, ನೈಟ್ ಕ್ಯಾಂಟೀನ್‍ಗಳು ಸೇರಿದಂತೆ ವಿವಿಧ ಬಗೆಯ ಆಹಾರೋತ್ಪಾದಕರು,ಮಾರಾಟಗಾರರು ಆಹಾರ ಸುರಕ್ಷತಾ ತರಬೇತಿಪ್ರಮಾಣ ಪತ್ರವನ್ನು ಹೊಂದುವುದು ಕೇಂದ್ರ ಸರಕಾರದ ಆಹಾರ ಸುರಕ್ಷತಾ ಅಧಿನಿಯಮದನ್ವಯ ಕಡ್ಡಾಯವಾಗಿದ್ದು,ರಾಜ್ಯದಲ್ಲಿ ಪ್ರಕಾರ್ ಫೌಂಡೇಶನ್ ತರಬೇತಿ ನೀಡುವ ಅಧಿಕೃತ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಫೌಂಡೇಶನ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಪ್ತಗಿರಿ ನಿವಾಸ್ ರೆಡ್ಡಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2023 ಮಾರ್ಚ್ ಅಂತ್ಯದೊಳಗೆ ದೇಶದ ಎಲ್ಲಾ ಬಗೆಯ ಬೀದಿ ಬದಿ ವ್ಯಾಪಾರಿಗಳು ಸೂಕ್ತ ತರಬೇತಿ ಪಡೆದು 2 ವರ್ಷದ ಅವಧಿಯ ಈ ತರಬೇತಿ ಪ್ರಮಾಣ ಪತ್ರವನ್ನು ಹೊಂದುವುದು ಕಡ್ಡಾಯವಾಗಿದೆ.2 ವರ್ಷಗಳ ಬಳಿಕ ಮತ್ತೆ ನವೀಕರಿಸಿಕೊಳ್ಳಬೇಕಾಗುತ್ತದೆ.
ಇಲ್ಲವಾದಲ್ಲಿ 1 ಸಾವಿರದಿಂದ ಒಂದು ಲಕ್ಷದವರೆಗೆ ದಂಡ ವಿಧಿಸುವ ಅವಕಾಶವನ್ನು ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಕಲ್ಪಿಸಲಾಗಿದೆ.ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಅರಿವು ಮೂಡಿಸಿ ತರಬೇತಿ ನೀಡುವ ದೃಷ್ಟಿಯಿಂದ ಶಾಖೆಯನ್ನು ತೆರೆಯಲಾಗಿದೆ ಎಂದರು.
ತರಬೇತಿಗೆ ನಿಗದಿತ ಶುಲ್ಕವಿದ್ದು,ಸ್ಥಳೀಯ ಸಂಸ್ಥೆಗಳು,ಎನ್‍ಜಿಓಗಳು,ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‍ಆರ್ ವಿಭಾಗದ ಅನುದಾನ ದೊರೆತರೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ.ದೇಶದಲ್ಲಿ 6,43,000 ಮಂದಿ ಈಗಾಗಲೇ ತರಬೇತಿಗೆ ನೋಂದಣ ಯಾಗಿದ್ದಾರೆ.ತರಬೇತಿಯಲ್ಲಿ ಆಹಾರ ಕಲಬೆರಕೆ,ಆಹಾರ ವಿಷವಾಗುವುದು,ಆಹಾರ ತಯಾರಿಸುವಲ್ಲಿ ಅನುಸರಿಸ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ರಾಜ್ಯ ಪ್ರತಿನಿಧಿ ಅಭಿಷೇಕ್, ಜಿಲ್ಲಾ ಸಂಚಾಲಕ ನವೀನ್ ಇತರರು ಹಾಜರಿದ್ದರು.