The Kannada nameplate is 60% larger and the rest
The nameplate of language should be 40%; Insistence of Karunada Vijayasena
ತುಮಕೂರು:ಕರ್ನಾಟಕ ಸರಕಾರ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ಶಾಫ್
ಅಂಡ್ ಎಸ್ಟಾಬಿಷಮೆಂಟ್ ಕಾಯ್ದೆ 1963ರ ಕಲಂ 2 ಎ ಅನ್ನು ನಗರದಲ್ಲಿರುವ ಎಲ್ಲಾ
ಅಂಗಡಿ ಮುಂಗಟ್ಟುಗಳು ಅನುಸರಿಸುವಂತೆ ಒತ್ತಾಯಿಸಿ,ಕರುನಾಡ ವಿಜಯಸೇನೆ
ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ನಗರದ ಎಂ.ಜಿ.ರಸ್ತೆಯ
ಅಂಗಡಿ,ಮುಂಗಟ್ಟುಗಳ ಮಾಲೀಕರಿಗೆ ಕರಪತ್ರ ಹಂಚುವ ಮೂಲಕ
ಒತ್ತಾಯಿಸಲಾಯಿತು.
ಕರುನಾಡ ವಿಜಯಸೇನೆಯ ಹತ್ತಾರು ಕಾರ್ಯಕರ್ತರು ಜಿಲ್ಲಾಧ್ಯಕ್ಷ
ಅರುಣ್ ಕೃಷ್ಣಯ್ಯ ಅವರ ನೇತೃತ್ವದಲ್ಲಿ ನಗರದ ಪ್ರಮುಖ ವಾಣಿಜ್ಯ
ಕೇಂದ್ರವಾಗಿರುವ ಎಂ.ಜಿ.ರಸ್ತೆ,ಕೆ.ಆರ್.ಬಡಾವಣೆ, ವಿವೇಕಾನಂದ ರಸ್ತೆ,
ಹೊರಪೇಟೆ ಮುಖ್ಯ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ
ತೆರಳಿ,ಸರಕಾರದ ನಿಯಮದಂತೆ ಕರ್ನಾಟಕದಲ್ಲಿ ಅಂಗಡಿ ತೆರೆದು ವ್ಯಾಪಾರ
ಮಾಡುವ ಅಂಗಡಿಗಳ ಮಾಲೀಕರು ಕರ್ನಾಟಕ ರಾಜ್ಯ ಶಾಫ್ಸ್ ಅಂಡ್
ಎಷ್ಟಾಬ್ಲಿಷಮೆಂಟ್ ಅಕ್ಟ್ 1963 ಕಲಂ 2 ಎ ಅನ್ವಯ ತಮ್ಮ ಅಂಗಡಿ
ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕು.60:40ರ
ಅನುಪಾತದಲ್ಲಿ, ಕನ್ನಡ ನಾಮಫಲಕ ಶೇ60ರಷ್ಟು ದೊಡ್ಡದಾಗಿದ್ದು,ಉಳಿದ
ಭಾಷೆಯ ನಾಮಫಲಕ ಶೇ40ರಷ್ಟಿರಬೇಕು ಎಂಬ ನಿಯಮ ರೂಪಿಸಿದೆ. ಇದರ
ಅಧಿಸೂಚನೆಯನ್ನು ಹೊರಡಿಸಿದೆ.
ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ
ಸ್ಥಳೀಯ ಆಡಳಿತ ಅಂತಹ ಅಂಗಡಿ ಮುಂಗಟ್ಟುಗಳಿಗೆ ನೋಟಿಷ್ ನೀಡಿ,ನಿಗಧಿತ
ಅವಧಿಯೊಳಗೆ ಪಾಲಿಸದೇ ಇದ್ದಲ್ಲಿ ದಂಡ ವಿಧಿಸುವ ಅವಕಾಶವಿದೆ. ಆದರೆ
ಇದುವರೆಗೂ ತುಮಕೂರು ನಗರದಲ್ಲಿ ಜಾರಿಯಾಗದ ಹಿನ್ನೆಲೆಯಲ್ಲಿ
ಕರಪತ್ರ ವಿತರಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಅರುಣ್ ಕೃಷ್ಣಯ್ಯ
ತಿಳಿಸಿದರು.