ಒತ್ತುವರಿ ತೆರವು ಹೆಸರಿನಲ್ಲಿ ಬೀದಿಗೆ ಬಿದ್ದ ಕುಟುಂಬ…..?
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ನಲ್ಲಿ ಬರುವ ಲಿಂಗಮ್ಮನಹಳ್ಳಿ ಸರ್ವೇ ನಂಬರ್ 9 ರಲ್ಲಿ ಸರ್ಕಾರದಿಂದ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುಟುಂಬಗಳು ಕಟ್ಟಡಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ ಆದರೆ ತಾಲೂಕು ಆಡಳಿತ ನವೆಂಬರ್ 27ರಂದು ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತಿನಲ್ಲಿ ಏಕಾಏಕಿ ಕಟ್ಟಡ ಹಾಗೂ ನಿವೇಶನಗಳನ್ನು ತೆರವುಗೊಳಿಸಲಾಗಿದೆ.ಆದರೆ ತರಾತುರಿಯಲ್ಲಿ ನೋಟಿಸ್ ನೀಡದೆ ನಮ್ಮ ನಿವೇಶನವನ್ನು ತಾಲ್ಲೂಕು ಆಡಳಿತ ರಸ್ತೆ ಹೆಸರಿನಲ್ಲಿ ತೆರವುಗೊಳಿಸಿದೆ ಎಂದು ತಾಲ್ಲೂಕು ಆಡಳಿತದ ವಿರುದ್ಧ ಕುಟುಂಬವೊಂದು ಗಂಭೀರ ಆರೋಪ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಯಾಜ್ ಪಾಷ ರವರು ಹತ್ತು ವರ್ಷಗಳ ಹಿಂದೆ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದು ಕೂಡಿಟ್ಟ ಹಣದಲ್ಲಿ ನಿವೇಶನ ಕೊಂಡುಕೊಳ್ಳಲಾಗಿದೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸರ್ಕಾರದಿಂದ ನೀಡಿರುವ ಹಕ್ಕುಪತ್ರ, ಕಟ್ಟಡ ಲೈಸೆನ್ಸ್ ಸೇರಿದಂತೆ ಕೋರ್ಟಿಂದ ತಡೆಯಾಜ್ಞೆ ಇದ್ದರೂ ಕೂಡ ತಾಲ್ಲೂಕು ದಂಡಾಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ನಮ್ಮ ಜಾಗಗಳನ್ನು ತೆರವುಗೊಳಿಸಿದ್ದಾರೆ ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ ಇನ್ನೂ ರಸ್ತೆಯೇ ಇಲ್ಲದ ಜಾಗದಲ್ಲಿ ರಸ್ತೆಯಿದೆ ಎಂದು ಮೂಲ ದಾಖಲಾತಿಗಳನ್ನು ಅಧಿಕಾರಿಗಳು ತಿರುಚುವ ಮೂಲಕ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿಗಳನ್ನು ನೀಡಿ ರಸ್ತೆ ಹೆಸರಿನಲ್ಲಿ ಏಕಾಏಕಿ ನಮ್ಮ ನಿವೇಶನವನ್ನು ತೆರವುಗೊಳಿಸಲಾಗಿದೆ. ಇನ್ನು ಇದೇ ಭಾಗದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜು ಕಟ್ಟಡವಿದ್ದು ಇದಕ್ಕೆ ಸಂಚರಿಸಲು ಈಗಾಗಲೇ ಮೂರು ರಸ್ತೆಗಳಿವೆ ಆದರೂ ಕೂಡ ನಮ್ಮ ನಿವೇಶನವನ್ನು ತಾಲೂಕು ದಂಡಾಧಿಕಾರಿಗಳು ಯಾವುದೇ ನೋಟಿಸ್ ನೀಡದೆ ತೆರವು ಗೊಳಿಸಿದ್ದಾರೆ ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದ್ದು ನಮಗೆ ನ್ಯಾಯ ದೊರಕದೆ ಇದ್ದರೆ ಕುಟುಂಬದವರೊಂದಿಗೆ ತಾಲ್ಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕಲಿoಮುಲ್ಲಾ 1978_1979 ರಲ್ಲಿ ಈ ಭಾಗದಲ್ಲಿ ಬಡವರಿಗಾಗಿ ಸರ್ಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು .ಈಗಾಗಲೇ ಈ ಭಾಗದಲ್ಲಿ ಸಂಚರಿಸಲು ರಸ್ತೆಗಳು ಇವೆ ಆದರೆ ಮೂಲ ದಾಖಲಾತಿಗಳನ್ನು ಅಧಿಕಾರಿಗಳು ತಿರುಚುವ ಮೂಲಕ ಬಡವರ ಜಾಗಗಳನ್ನು ಕಸಿದುಕೊಳ್ಳುವ ದೊಡ್ಡ ಹುನ್ನಾರವನ್ನು ಮಾಡುತ್ತಿದ್ದಾರೆ ಇದರಿಂದ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಸಂತ್ರಸ್ತ ನಂಜುಂಡಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಮುಖಂಡರು ಹಾಜರಿದ್ದರು.