ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸುಜಾತ ಸಂಜೇಗೌಡ ನಾಮಪತ್ರ ಸಲ್ಲಿಕೆ
ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 12 ರಂದು ನಡೆಯಲಿರುವ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕ್ ನಿರ್ದೇಶಕರು ಹಾಗೂ ಶ್ರೀ ಭೈರವಿ ಮಹಿಳಾ ಸಂಘ ಹಾಗೂ ಚುಂಚಶ್ರೀ ಭೈರವಿ ಮಹಿಳಾ ಸಂಘಗಳ ಅಧ್ಯಕ್ಷರಾದ ಸುಜಾತ ನಂಜೇಗೌಡ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕ ಆರ್.ಜೆ. ಕಾಂತರಾಜು ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಜಾತ ನಂಜೇಗೌಡ ಅವರು, ರಾಜ್ಯ ಒಕ್ಕಲಿಗರ ಸಂಘ ಸ್ಥಾಪನೆಯಾದಾಗಿನಿಂದಲೂ ಇಲ್ಲಿಯವರೆಗೂ ಮಹಿಳಾ ಅಭ್ಯರ್ಥಿಗಳ್ಯಾರು ಸ್ಪರ್ಧಿಸಿರಲಿಲ್ಲ, ಇದೇ ಪ್ರಪ್ರಥಮ ಭಾರಿಗೆ ತುಮಕೂರು ಜಿಲ್ಲೆಯಿಂದ ಮಹಿಳಾ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದು, ಒಕ್ಕಲಿಗ ಸಮುದಾಯದ ಮತದಾರರು ಮಹಿಳಾ ಅಭ್ಯರ್ಥಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮತದಾರರಿಗೆ ಎರಡು ಮತ ಹಾಕುವ ಅವಕಾಶವಿದ್ದು, ಮೊದಲ ಪ್ರಾಶಸ್ತ್ಯವಾಗಿ ಮಹಿಳಾ ಅಭ್ಯರ್ಥಿಯಾದ ನನಗೆ ಪ್ರಾಧಾನ್ಯತೆ ಕೊಟ್ಟು ಮತ ನೀಡುವ ಮೂಲಕ ಗೆಲ್ಲಿಸಿದರೆ ತುಮಕೂರು ಜಿಲ್ಲೆಯ ಒಕ್ಕಲಿಗರ ಶ್ರೇಯಸ್ಸಿಗಾಗಿ ಹೋರಾಡುವೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕಿಯಾಗಿ ಆಯ್ಕೆಯಾದರೆ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ರಾಜ್ಯ ಒಕ್ಕಲಿಗರ ಸಂಘ ಹಾಗೂ ಅದರ ಶಿಕ್ಷಣ ಸಂಸ್ಥೆಗಳ ಕಾರ್ಯ ವ್ಯಾಪ್ತಿಯನ್ನು ತುಮಕೂರು ಜಿಲ್ಲೆಗೆ ವಿಸ್ತರಿಸುವುದು. ಜಿಲ್ಲೆಯ ಸಮುದಾಯದ ಜನರಿಗೆ ಕಡಿಮೆ ಬೆಲೆಯಲ್ಲಿ ಕೆಂಪೇಗೌಡ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಒದಗಿಸುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ದೊರಕುವಂತೆ ನೋಡಿಕೊಳ್ಳುವುದು, ಸಮುದಾಯದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಥಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುವ ಮೂಲಕ ಪೆÇ್ರೀತ್ಸಾಹಿಸುವ ಕಾರ್ಯಯೋಜನೆಯನ್ನು ರೂಪಿಸುವ ಉದ್ಧೇಶ ಹೊಂದಲಾಗಿದೆ ಎಂದು ಸುಜಾತ ನಂಜೇಗೌಡ ಹೇಳಿದರು.
ಸಮುದಾಯದ ರೈತ ಮಹಿಳೆಯರನ್ನು ಗುರುತಿಸಿ ಅತ್ಯುತ್ತಮ ಕೃಷಿಕಾ ಹಾಗೂ ಹೈನುಗಾರಿಕಾ ಪ್ರಶಸ್ತಿ ನೀಡುವುದು. ಸಮುದಾಯದ ಯುವಕ-ಯುವತಿಯರಿಗೆ ಸಂಘದ ವತಿಯಿಂದ ಐಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೌಲಭ್ಯ ಕಲ್ಪಸುವುದು, ಸಮುದಾಯದ ಹಿರಿಯರ ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ಸಮುದಾಯದ ಏಳಿಗೆಗೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಪ್ರತಿ ವರ್ಷ ಜಿಲ್ಲಾದ್ಯಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆಚರಣ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಆದುದರಿಂದ ಮಹಿಳಾ ಅಭ್ಯರ್ಥಿಯಾದ ನನಗೆ ಪ್ರಥಮ ಪ್ರಾಶಸ್ತ್ಯ ನೀಡಿ ಮತ ನೀಡುವ ಮೂಲಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಪ್ರಥಮ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಬೇಕೆಂದು ಒಕ್ಕಲಿಗ ಸಮುದಾಯದ ಮತದಾರರಲ್ಲಿ ವಿನಂತಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಗರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಒಕ್ಕಲಿಗರ ಸಮುದಾಯದ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಹಕಾರ ಸಂಘಗಳ ಉಪನಿಬಂಧಕ ಆರ್.ಜೆ. ಕಾಂತರಾಜ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ವೇಳೆ ಸಮಾಜದ ಮುಖಂಡರಾದ ಶಿರಾ ತಾಲ್ಲೂಕು ಚುಂಚ ಸಹಕಾರ ಬ್ಯಾಂಕ್ ಅಧ್ಯಕ್ಷ ರಂಗನಾಥಪ್ಪ, ಗೊಟ್ಟಿಕೆರೆ ಗ್ರಾಪಂ ಸದಸ್ಯ ಮುರಳೀಧರ, ತುಮಕೂರು ಮಹಾನಗರಪಾಲಿಕೆ ಮಾಜಿ ಸದಸ್ಯೆ ಕಮಲಾಕೃಷ್ಣಮೂರ್ತಿ, ತುರುವೇಕೆರೆ ತಾಲ್ಲೂಕು ಮಾವಿನಹಳ್ಳಿ ಮಾಜಿ ಗ್ರಾಪಂ ಸದಸ್ಯ ಎಂ.ವಿ.ಮಂಜೇಗೌಡ, ಮಧುಗಿರಿ ಮಹದೇವಯ್ಯ, ತಿಪಟೂರು ತಾಲ್ಲೂಕಿನ ಬಾಲಕೃಷ್ಣಗೌಡ, ಶಶಿಧರ, ಕುಣ ೀಗಲ್ ತಾಲ್ಲೂಕು ಹಾಲ್ಕೆರೆ ರಾಮಣ್ಣ, ಶಿರಾ ತಾಲ್ಲೂಕಿನ ಜುಂಜಣ್ಣ, ಕೊರಟಗೆರೆಯ ಈಶ್ವರಪ್ಪ, ವಡ್ಡಗೆರೆ ಮಂಜುನಾಥ್ ಸೇರಿದಂತೆÉ ಎಲ್ಲಾ ತಾಲ್ಲೂಕುಗಳ ಒಕ್ಕಲಿಗರ ಸಮುದಾಯದ ಅಪಾರ ಬೆಂಬಲಿಗರು ಹಾಜರಿದ್ದರು.