Public was Appreciated for Haji Nurullah work of sheltering poor orphan girls
ತುಮಕೂರು: ಸಮಾಜದ ಮುಸ್ಲಿಂ ಸಮುದಾಯದಲ್ಲಿ ಇನ್ನೂ ಬಡತನ ಜೀವಂತವಾಗಿದ್ದು ಹಿನ್ನೆಲೆಯಲ್ಲಿ ಸಮುದಾಯದ ಬಡ ಹೆಣ್ಣು ಮಕ್ಕಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಮಸೀದಿ-ಎ-ರಿಯಾಝ್ ಉಲ್ ಜನ್ನಾದ ಅಧ್ಯಕ್ಷರಾದ ಹಾಜಿ ಸಯ್ಯದ್ ನೂರುಲ್ಲಾ ಅವರು ಮದ್ರೆಸ-ಎ- ನೂರುಲ್ ಬನಾತ್ ಸಾಧ್ ಮೂಲಕ ಸಮುದಾಯ ಬಡ ಅನಾಥ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ ವಿದ್ಯಾಭ್ಯಾಸ ಮಾಡಿ ಜೀವನ ನಡೆಸಲು ಅನುಕೂಲ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮುಸ್ಲಿಂ ಸಮುದಾಯದ ಧರ್ಮ ಗುರುಗಳಾದ ಹಜರತ್ ಮೌಲಾನಾ ಪಿಎಂ ಮುಜ್ಮಿಲ್ ಸಾಬ್ ಅವರು ತಿಳಿಸಿದರು.
ತುಮಕೂರು ನಗರದ ಸದಾಶಿವನಗರದಲ್ಲಿ ನೂತನವಾಗಿ ಸ್ಥಾಪನೆಯಾದ ಮದ್ರೆಸ ನೂರುಲ್ ಬನಾಥ್ ಸಾದ್ ಕಟ್ಟಡವನ್ನ ಲೋಕಾರ್ಪಣೆಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರಿನಲ್ಲಿ ಮುಸ್ಲಿಂ ಸಮುದಾಯದ ಅನಾಥ ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ಮದ್ರಸಾ-ಎ-ನೂರುಲ್ ಬನಾತ್ ಸಾಧ್ ಸ್ಥಾಪನೆ ಮಾಡಲಾಗಿದ್ದು ನಮ್ಮ ಬಡ ಅನಾಥ ಹೆಣ್ಣುಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಮಜೀದ್-ಎ-ರಿಯಾಝ್ ಉಲ್ ಜಾನ್ನಃ ಅಧ್ಯಕ್ಷರಾದ ಹಾಜಿ ಸೈಯದ್ ನೂರೂಲ್ಲಾ ಈ ವೇಳೆ ಅವರು ಮಾತನಾಡಿ 1997 ರಲ್ಲಿ ಈ ಮಸೀದಿಯನ್ನು ಸ್ಥಾಪನೆ ಮಾಡಿ ಅನೇಕ ಧರ್ಮ ಕಾರ್ಯಗಳನ್ನ ಮಾಡುತ್ತ ಬಂದಿದ್ದು ಇದೀಗ ತಮ್ಮ ಸ್ವಂತ ಖರ್ಚಿಯಿಂದ ಮುಸ್ಲಿಂ ಸಮುದಾಯದ ಸುಮಾರು 500 ಅನಾಥ ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಮುಂದಿನ ಜೀವನೋಪಾಯಕ್ಕಾಗಿ ದಾರಿ ಕಲ್ಪಿಸಿದ್ದು ಅದರ ಜೊತೆಗೆ ಅವರು ಒಪ್ಪಿದ ಕಡೆ ಅವರಿಗೆ ಮದುವೆ ಮಾಡಿ ಅವರ ಸುಖ ಜೀವನಕ್ಕೆ ನಮ್ಮ ಮಸೀದಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈವರೆಗೂ ಸುಮಾರು 35ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರನ್ನು ಸ್ವತಃ ಜೀವನ ನಿರ್ವಹಣೆ ಮಾಡುವ ದಾರಿ ಕಲ್ಪಿಸಿದ್ದು ಇದೀಗ 250 ಹೆಣ್ಣುಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು ಈ ನಮ್ಮ ಕಾರ್ಯವೈಖರಿಯನ್ನ ಧರ್ಮ ಗುರುಗಳಾದ ಹಜರತ್ ಮೌಲಾನಾ ಪಿಎಂ ಮುಜ್ಮಿಲ್ ಸಾಬ್ ಅವರು ತಮ್ಮ ಕಾರ್ಯವನ್ನ ಸ್ಲಾಗಿಸಿದ್ದಾರೆ ಎಂದು ತಿಳಿಸಿದರು.
ನೂತನ ಕಟ್ಟಡದ ಲೋಕಾರ್ಪಣ ವೇಳೆ ಲೋಕಾಯುಕ್ತ ಎಸ್ಪಿ, ವಲಿಭಾಷ, ಜಿಲ್ಲೆಯ 12ನೇ ಬ್ಯಾಚ್ ನ ಕೆಸ್ ಪಿಎಸ್ ಕಮಾಂಡೆಂಟ್ ಹಮ್ಜಾ ಹುಸೇನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ರಾಜ್ಯ ವಕ್ತಾರ ಮುರುಳೀಧರ್ ಹಾಲಪ್ಪ, ಸಮಾಜ ಸೇವಕರಾದ ಎಸ್ ಎಂ ಇರ್ಫಾನ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಈ ಸಂದರ್ಭದಲ್ಲಿ ಹಾಜಿ ನೂರುಲ್ಲಾ ಅವರ ಕಾರ್ಯವೈಖರಿಯನ್ನ ಹಾಡಿ ಹೊಗಳಿದರು.
ಇದೇ ವೇಳೆ ಮುಸ್ಲಿಂ ಸಮುದಾಯದ ವಿವಿಧ ಧರ್ಮ ಗುರುಗಳು ಸೇರಿದಂತೆ ಸಮಾಜದ ಬಂಧುಗಳು ಮುಖಂಡರು ಉಪಸ್ಥಿತರಿದ್ದರು.