ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ವಾರ್ಡ್ ನಂ.04ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ರಿಂದ ಚಾಲನೆ.
ತುಮಕೂರು ಮಹಾನಗರಪಾಲಿಕೆಯ ವಾರ್ಡ್ ನಂ.04ರ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಬಾವಿಕಟ್ಟೆ ಪೆಟ್ರೋಲ್ ಬಂಕ್ ಪಕ್ಕದಿಂದ ಶ್ರೀ ಶನಿಮಹಾತ್ಮ ದೇವಾಲಯದ ರಸ್ತೆವರೆಗೆ ಹಾಗೂ ಅಡ್ಡರಸ್ತೆಗಳಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ರಾಜ್ಯ ಸರ್ಕಾರದ ನಗರಾಭಿವೃದ್ಧಿಯ ಯೋಜನೆಯಲ್ಲಿ ಪ್ರತಿ ಮಹಾನಗರಪಾಲಿಕೆಗೂ ರೂ.125.00 ಕೋಟಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ ತುಮಕೂರಿನ ಎಲ್ಲಾ ವಾರ್ಡಿನಲ್ಲೂ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರೂ.125.00 ಕೋಟಿಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಮಹಾನಗರಪಾಲಿಕೆ ಮತ್ತು ರಾಜ್ಯ ಸರ್ಕಾರದ ವಂತಿಕೆಗಳನ್ನು ಕಳೆದು ಕಾಮಗಾರಿಗೆ ಸುಮಾರು 44.00 ಕೋಟಿ ರೂಗಳು ಲಭ್ಯವಿದೆ.
ಈ ಭಾಗದಲ್ಲಿ ಸದರಿ ಕಾಮಗಾರಿಗಳು ರೂ.60.00 ಲಕ್ಷಗಳ ವೆಚ್ಚದಲ್ಲಿ ನಡೆಯಲಿದ್ದು, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸಿಸಿ ಚರಂಡಿ ಹಾಗೂ ರಸ್ತೆ ಮಾಡಲಾಗುವುದು ಈ ಸಂದರ್ಭದಲ್ಲಿ ಸಾರ್ವಜನಿಕರು ಕಾಮಗಾರಿ ನಡೆಯುವ ಸಮಯದಲ್ಲಿ ಸಹಕರಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ, ಮಹಾನಗರಪಾಲಿಕೆಯ ಸದಸ್ಯರಾದ ದೀಪಶ್ರೀ ಮಹೇಶ್‍ಬಾಬು, ಆಯುಕ್ತರಾದ ರೇಣುಕಾ, ನಗರ ಬಿಜೆಪಿ ಉಪಾದ್ಯಕ್ಷರಾದ ಮಹೇಶ್ ಬಾಬು, ಜಿಮ್ ಶೇಖರ್, ರಾಜೇಶ್, ಹನುಮಂತರಾಜು, ಪ್ರಧಾನ ಅರ್ಚಕ ರಾಜಣ್ಣ ನವರು, ಪಾಲಿಕೆ ಸಿಬ್ಬಂದಿ ಹಾಗೂ ಮುಂತಾದವರು ಹಾಜರಿದ್ದರು.