breaking newsPUBLICSOCIAL ACTIVIST

Miss, Mrs, and Kids Fashion Show – 2019 Grand Finale

Miss, Mrs, and Kids Fashion Show – 2019 Grand Finale

ತುಮಕೂರು: ಕೊರೋನಾದಿಂದ ಸ್ತಬ್ಧವಾಗಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸುತ್ತಿದ್ದೆ. ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ಮಿಸ್, ಮಿಸ್ಟರ್, ಮಿಸೆಸ್, ಟೀನ್ ಮತ್ತು ಕಿಡ್ಸ್‍ಗಳು ಹೆಜ್ಜೆ ಹಾಕುವ ಮೂಲಕ ಎಲ್ಲರ ಕಣ್ಮನ ತಣ ಸಿದರು.
ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಶ್ರೀ ಗವಿರಂಗ ಕನ್ವೆಷನ್ ಹಾಲ್‍ನಲ್ಲಿ ನಡೆದ ಮಿಸ್ಟರ್, ಮಿಸ್, ಮಿಸೆಸ್, ಟೀನ್ ಮತ್ತು ಕಿಡ್ಸ್‍ಗಳು ಫ್ಯಾಷನ್ ಶೋ-2021 ‘ಗ್ರಾಂಡ್ ಫಿನಾಲೆ’ ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು.


ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಕೆಗೆ ಬಂದ ಮಕ್ಕಳು ಸಂಗೀತದ ನಾದಕ್ಕೆ ತಕ್ಕಂತೆ ಬಳುಕುವ ಹೆಜ್ಜೆ ಹಾಕುವ ಮೂಲಕ ಮಕ್ಕಳ ಪೋಷಕರು ಹಾಗೂ ನೆರೆದಿದ್ದವರ ಮನ ಖುಷಿಗೊಳಿಸಿದರು.


ಮಾದಕ ನಡೆಯ ಮೂಲಕ ರ್ಯಾಂಪ್ ಮೇಲೆ ಬಂದ ತರುಣ ತರುಣ ಯರು ವಿಭಿನ್ನ ಉಡುಗೆಗಳಿಂದ ಫ್ಯಾಷನ್ ಶೋ ಮೆರುಗು ಹೆಚ್ಚಿಸಿದರು. ಮದುವೆಯಾದ ಮೇಲೆ ಫ್ಯಾಷನ್ ಲೋಕ ನಮಗಲ್ಲ ಎಂದು ತಿಳಿದ ಎಷ್ಟೋ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ರೂಪದಲ್ಲಿ ವೇದಿಕೆ ಮೇಲೆ ಬಂದ ಮಹಿಳೆಯರಿಗೆ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಮೆಚ್ಚುಗೆ ಸೂಚಿಸಿದರು.


ತುಮಕೂರು ಸೇರಿದಂತೆ ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹೀಗೆ ವಿವಿಧ ಜಿಲ್ಲೆಗಳ ಸುಮಾರು 80 ಸ್ಪರ್ಧಿಗಳು ರ್ಯಾಂಪ್ ಮೇಲೆ ವಾಕ್ ಮಾಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಫ್ಯಾಷನ್ ಲೋಕದ ತಾರೆಯರ ಪ್ರಶ್ನೆಗಳಿಗೆ ಚೂರು ತಡವರಿಸದೆ ಎಲ್ಲರೂ ಆತ್ಮವಿಶ್ವಾಸದಿಂದ ಉತ್ತರಿಸಿದ್ದು ಸಹ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು.


ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯ ಶ್ರಮಹಾಕಿದ ಆಯೋಜಕರಾದ ವಿಂಗ್ಸ್ ಫ್ಯಾಷನ್ ಈವೆಂಟ್ಸ್‍ನ ಸಂಸ್ಥಾಪಕರು ಹಾಗೂ ಸಿಇಒ ಆದ ಪಿ.ಕೆ.ಅರುಂಧತಿ ಲಾಲ್ ಮಾತನಾಡಿ, ಮಿಸ್, ಮಿಸ್ಟರ್, ಮಿಸೆಸ್, ಟೀನ್ ಮತ್ತು ಕಿಡ್-2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯದ 80 ಸ್ಪರ್ಧಿಗಳು ಭಾಗವಹಿಸಿರುವುದು ಖುಷಿ ತಂದಿದೆ. ಸೀಸನ್ 2 ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಶೀಘ್ರವೇ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.


ಸೀಸನ್-1 ರಲ್ಲಿ 80 ಮಾಡೆಲ್ಸ್‍ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 20 ಮಕ್ಕಳು, ಮಿಸ್ಟರ್ ಕ್ಯಾಟಗರಿಯಲ್ಲಿ 20 ಮಂದಿ, ಮಿಸೆಸ್ ಕ್ಯಾಟಗರಿಯಲ್ಲಿ 20 ಮಂದಿ ಸೇರಿ ಒಟ್ಟಾರೆ 80 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಶೋ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಕುಟುಂಬ ಮತ್ತು ಫಿಟ್ ಇನ್ ಜಿಮ್ ಮಾಲೀಕ ಅರ್ಜುನ್ ಪಾಳೇಗಾರ್ ಸೇರಿ ಹಲವರು ಸಹಕಾರ ನೀಡಿದ್ದಾರೆ. ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಈವೆಂಟ್‍ಗಳನ್ನು ಮಾಡುತ್ತೇನೆ, ನವೆಂಬರ್‍ನಲ್ಲಿ ನಡೆಯಲಿರುವ ಸೀಸನ್-2 ಘೋಷಣೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ತುಮಕೂರಿನಲ್ಲಿ ಇನ್ನೂ ಹೆಚ್ಚು ಫ್ಯಾಷನ್ ಶೋ ಗಳನ್ನು ಮಾಡಬೇಕೆಂಬ ಬಯಕೆ ನನ್ನದಾಗಿದೆ ಎಂದರು.


ಫಿಟ್ ಇನ್ ಜಿಮ್ ಮಾಲೀಕ ಅರ್ಜುನ್ ಪಾಳೆಗಾರ್ ಮಾತನಾಡಿ, ಬೆಂಗಳೂರು ಕಾರ್ಪೊರೇಟ್ ಲೆವೆಲ್‍ನಲ್ಲಿ ಈವೆಂಟ್ ಮಾಡಬೇಕಿತ್ತು. ಕೊರೋನ ಕಾರಣದಿಂದ ಮಾಡಲಿಕ್ಕಾಗಲಿಲ್ಲ, ಕೊರೋನ ಇಳಿಮುಖವಾಗುತ್ತಿದ್ದ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಈವೆಂಟ್ ಮಾಡಿದ್ದೇವೆ. ಇದಕ್ಕೆ ವಿಂಗ್ಸ್ ಫ್ಯಾಷನ್ ಈವೆಂಟ್ಸ್‍ನ ಪಿ.ಕೆ.ಅರುಂಧತಿ ಲಾಲ್ ಅವರು ಮತ್ತು ಆ್ಯಂಕರ್ ಆಗಿ ಬಂದಂತಹ ಶರತ್ ಅವರು ಎಲ್ಲರಿಗೂ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.


ನಮ್ಮ ಜಿಲ್ಲೆಯಲ್ಲಿ ಅರುಂಧತಿಯವರು ಫ್ಯಾಷನ್ ಈವೆಂಟ್ ಮಾಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ನಾವು ಅವರಿಗೆ ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ಮಕ್ಕಳು ಭಾಗವಹಿಸಿ ರ್ಯಾಂಪ್ ಮೇಲೆ ಹಜ್ಜೆ ಹಾಕಿರುವುದು ತುಂಬಾ ಖುಷಿಯಾಗಿದೆ, ಕೊರೋನ ಮುಗಿದ ಬಳಿಕ ಇದೇ ಮೊದಲ ಭಾರಿಗೆ ಈವೆಂಟ್ ಮಾಡಲಾಗಿದೆ. ಆದರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಈವೆಂಟ್ ಮಾಡಲಾಯಿತು ಎಂದರು.


ಎಲ್ಲಾ ವರ್ಗದವರೂ ಭಾಗವಹಿಸುವಂತಹ ಅವಕಾಶ ಈ ಶೋ ನಲ್ಲಿ ನೀಡಲಾಗಿತ್ತು. ಮದುವೆಯಾದವರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವೇದಿಕೆ ಸಹಾಯವಾಗಿತ್ತು. ಸಾಕಷ್ಟು ಜನರ ಬದುಕಿಗೆ ಈ ಫ್ಯಾಷನ್ ಶೋ ಈವೆಂಟ್ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದರು.


ಈ ರೀತಿಯ ಕಾರ್ಯಕ್ರಮಗಳು ಮಕ್ಕಳು, ದೊಡ್ಡವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿಂಗ್ಸ್ ಫ್ಯಾಷನ್ ಈವೆಂಟ್ಸ್‍ನ ಈ ಕಾರ್ಯಕ್ರಮ ಶ್ಲಾಘನೀಯ. ಸ್ಪರ್ಧಿಗಳಿಗೆ ಅಗತ್ಯ ಡ್ರಸ್ ಅನ್ನು ಫ್ಯಾಷನ್ ಡಿಸೈನರ್ ಅಮೃತಶೆಟ್ಟಿ ಡಿಸೈನ್ ಮಾಡಿದ್ದರು ಎಂದರು.


ಈ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಬೆಳ್ಳಿ ಬ್ಲಡ್ ಬ್ಯಾಂಕ್‍ನ ಬೆಳ್ಳಿ ಲೋಕೇಶ್, ತಿಲಕ್ ಪಾರ್ಕ್ ಸಬ್ ಇನ್ಸ್‍ಪೆಕ್ಟರ್ ಚಂದ್ರಕಲಾ, ಬಂಡೆ ಶಿವಕುಮಾರ್, ಡಿಸೈನರ್ ಅಮೃತ ಶೆಟ್ಟಿ, ಕಿರಣ್, ಲಕ್ಷ್ಮೀಕಾಂತ್ ಲಾಲ್ ಸೇರಿದಂತೆ ಚಲನಚಿತ್ರ ನಟ-ನಟಿಯರು, ನಿರ್ದೇಶಕರು, ಫ್ಯಾಷನ್ ಲೋಕದ ಗಣ್ಯರು ಪ್ರತ್ಯೇಕವಾಗಿ ಭಾಗವಹಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಬೆಂಗಳೂರಿನಿಂದ ಹಲವು ಗಣ್ಯರು ಭಾಗವಹಿಸಿ, ವಿಜೇತರನ್ನು ಪ್ರಕಟಿಸಿದರು.


ಮಿಸ್ ಕಿರೀಟ ತುಮಕೂರಿನ ಪ್ರಾಜಕ್ತ ವಿಜೇತರಾಗಿದ್ದು, ಪ್ರಥಮ ರನ್ನರ್ ಆಗಿ ಹೆಬ್ಬೂರಿನ ಪವನ, ಎರಡನೇ ರನ್ನರ್ ಆಗಿ ತುಮಕೂರಿನ ಬಿಂದು ಹೊರಹೊಮ್ಮಿದ್ದಾರೆ. ಮೂರು ಮತ್ತು ನಾಲ್ಕನೇ ರನ್ನರ್ ಆಗಿ ತುಮಕೂರಿನ ರೋಹಿಣ , ಹೆಗ್ಗೆರೆ ಕುಸುಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಮಿಸ್ಟರ್ ವಿಭಾಗದಲ್ಲಿ ತುಮಕೂರಿನ ಸಮ್ರತ್ ವಿಜೇತರಾಗಿದ್ದು, ಪ್ರಥಮ ರನ್ನರ್ ಆಫ್ ಅರುಣ್, ಎರಡನೇ ರನ್ನರ್ ಮೈಸೂರಿನ ಮಧು, ಮೂರನೇ ರನ್ನರ್ ತುಮಕೂರಿನ ಶ್ರೀಷ ಪ್ರಶಸ್ತಿ ಪಡೆದರು. ಇನ್ನೂ ಮಿಸೆಸ್ ವಿಭಾಗದಲ್ಲಿ ತುಮಕೂರಿನ ಕುಮುದ ವಿಜೇತರಾಗಿದ್ದು, ಪ್ರಥಮ ರನ್ನರ್ ಆಗಿ ತುಮಕೂರಿನ ಹೇಮ, ಎರಡನೇ ರನ್ನರ್ ಆಗಿ ತುಮಕೂರಿನ ಶಿಲ್ಪ, ಮೂರನೇ ರನ್ನರ್ ಆಗಿ ತಾಹೆರಾ, ಕುನಿತಾ ನಾಲ್ಕನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ.


ಟೀನ್ ಬಾಲಕಿಯರ ವಿಭಾಗದಲ್ಲಿ ಧನು ಕೊರಟಗೆರೆ ವಿಜೇತರಾಗಿದ್ದು, ತುಮಕೂರಿನ ಯಶಿಕಾ ಪ್ರಥಮ ರನ್ನರ್, ತುಮಕೂರಿನ ಜಾನ್ಹವಿ ಎರಡನೇ ರನ್ನರ್ ಆಗಿ ಪ್ರಶಸ್ತಿ ಪಡೆದರು. ಟೀನ್ ಬಾಲಕರ ವಿಭಾಗದಲ್ಲಿ ತುಮಕೂರಿನ ಸಚಿನ್ ವಿಜೇತರಾಗಿದ್ದು, ವಿಜೇತ್ ಪ್ರಥಮ ರನ್ನರ್ ಆಫ್ ತುಮಕೂರ್, ದುರ್ಗಾಪ್ರಸಾದ್ ಎರಡನೇ ರನ್ನರ್ ಆಫ್ ತುಮಕೂರು.


ಕಿಡ್ ಬಾಲಕಿಯರ ವಿಭಾಗದಲ್ಲಿ ತುಮಕೂರಿನ ‘ಸಂಸ್ಕøತಿ’ ಕಿರೀಟ ಮುಡಿಗೇರಿಸಿಕೊಂಡರೆ, ನಿತ್ಯ ರನ್ನರ್ ಆಫ್ ದಿ ಬೆಂಗಳೂರು. ಧನ್ಯತಾ ನಾರಾಯಣ್ ಎರಡನೇ ರನ್ನರ್ ಆಫ್ ದಿ ತುಮಕೂರು.


ಕಿಡ್ಸ್ ಬಾಲಕರ ವಿಭಾಗದಲ್ಲಿ ತುಮಕೂರಿನ ವಿಲಾಸ್ ವಿಜೇತರಾಗಿದ್ದು, ಋಷಿ ತುಮಕೂರು, ಶೌರ್ಯ ಕ್ರಮವಾಗಿ ಪ್ರಥಮ ರನ್ನರ್ ಮತ್ತು ದ್ವಿತೀಯ ರನ್ನರ್ ಆಗಿ ಪ್ರಶಸ್ತಿ ಪಡೆದುಕೊಂಡರು.

Share this post

About the author

Leave a Reply

Your email address will not be published. Required fields are marked *