Meter interest loan scammers harassed to poverty women: case registered in police station
ಮಿಟರ್ ಬಡ್ಡಿ ದಂಧೆಯಿಂದ ಹೆಚ್ಚುತ್ತಿರುವ ಆತ್ಮಹತ್ಯೆಗೆ ಯತ್ನ ಪ್ರಕರಣಗಳು: ಆತ್ಮಹತ್ಯೆಗೆ ಯತ್ನಿಸಿದ ನೊಂದ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ನರಳಾಟ: ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ತುಮಕೂರು ನಗರದ ಪಿ.ಎಚ್ ಕಾಲೋನಿ, ಬಡಾವಣೆಯಲ್ಲಿ ವಾಸುಸುತ್ತಿರುವ ಝೋಹರ ಎಂಬ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ಆರೋಗ್ಯ ಸುಧಾರಣೆಗೆ ಮಾಡಿದ ಮೀಟರ್ ಬಡ್ಡಿ ಸಾಲದ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿ ಇದೀಗ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ನಿಜಕ್ಕೂ ಅಘಾತಕಾರಿ ವಿಷಯ.
![ಮೀಟರ್ ಬಡ್ಡಿ ದಂಧೆ: ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 2 lOAN 1 AGENCIES](https://infojournalist.in/wp-content/uploads/2023/12/lOAN-1-AGENCIES-1024x768.jpg)
ಮೊನ್ನೆ ಅಷ್ಟೇ ತುಮಕೂರಿನ ವಿಜಯನಗರ ಬಡಾವಣೆಯಲ್ಲಿ ವಾಸಿಸುತ್ತಿರುವ ಪ್ರಭಾಕರ್ ಎಂಬ ವ್ಯಕ್ತಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ಮೀಟರ್ ಬಡ್ಡಿ ಸಾಲಕ್ಕೆ ಸಿಲುಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದ ಬೆನ್ನಲ್ಲೇ ಮತ್ತೊಂದು ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ತುಮಕೂರಿನ ಸದಾಶಿವ ನಗರದಲ್ಲಿ ಮೀಟರ್ ಬಡ್ಡಿ ಸಾಲದ ಸುಳಿಯಲ್ಲಿ ಸಿಕ್ಕಿ ಒಂದೇ ಕುಟುಂಬದ ಐವರು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಅಂತದ್ದೇ ಘಟನೆಗಳು ಇತ್ತಿಚಿನ ದಿನಗಳಲ್ಲಿ ತುಮಕೂರು ನಗರದಲ್ಲಿ ಬೆಳಕಿಗೆ ಬರುತ್ತಿರುವುದು ನಗರದ ಜನತೆ ಬೆಚ್ಚಿ ಬೀಳುವಂತೆ ಮಾಡುತ್ತಿದೆ.
![ಮೀಟರ್ ಬಡ್ಡಿ ದಂಧೆ: ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 3 Meter intrest loan poverty family women IJTV 2](https://infojournalist.in/wp-content/uploads/2023/12/Meter-intrest-loan-poverty-family-women-IJTV-2-1024x689.jpg)
ತುಮಕೂರು ನಗರದ ಪೋಲಿಸ್ ಠಾಣೆಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದು ಪ್ರಕರಣದ ತೀವ್ರತೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇನ್ನೇಷ್ಟು ಕುಟುಂಬಗಳು ಮೀಟರ್ ಬಡ್ಡಿ ದಂಧೆ ಮಾಡುತ್ತಿರುವವರ ಹಿಂಸೆಗೆ ಪ್ರಾಣ ಬಲಿಯಾಗುವ ರೋ ಎಂಬ ಪ್ರಶ್ನೆ ಸಾರ್ವಕರಲ್ಲಿ ಮೂಡಿಬರಲರಂಬಿಸಿದೆ.ಆತ್ಮಹತ್ಯೆಗೆ ಯತ್ನಿಸಿದ ನೊಂದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ದಂಧೆ ಕೋರರ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಲಕ್ ಪಾರ್ಕ್ ಪಿಎಸ್ಐ ಸಂಜಯ್ ಕಂಬ್ಳೆ ತಿಳಿಸಿದರು.