Lok Sabha ticket for Muralidhar Halappa; Supporters Demand
ತುಮಕೂರು:ಐದು ವರ್ಷಗಳ ಕಾಲ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ
ನಿಗಮದ ಅಧ್ಯಕ್ಷರಾಗಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ
ನಿರ್ವಹಿಸಿರುವುದಲ್ಲದೆ, ಕೆಪಿಸಿಸಿ ವಕ್ತಾರರಾಗಿ, ಪ್ರಧಾನ ಕಾರ್ಯದರ್ಶಿಯಾಗಿ
ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ
ಮುರುಳೀಧರ ಹಾಲಪ್ಪ ಅವರಿಗೆ ಈ ಬಾರಿ ಲೋಕಸಭೆಯ ಟಿಕೇಟ್
ನೀಡಬೇಕೆಂದು ಮುರುಳೀಧರ ಹಾಲಪ್ಪ ಬೆಂಬಲಿಗರು ಹಾಗೂ ಕಾಂಗ್ರೆಸ್
ಮುಖಂಡರುಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡನ್ನು
ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಕಾಲೇಜೊಂದರಲ್ಲಿ ಸ್ವಯಂ ಪ್ರೇರಿತ ಸಭೆ ನಡೆಸಿದ
ಮುರುಳೀಧರ ಹಾಲಪ್ಪ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಪಕ್ಷದ
ಮುಖಂಡರುಗಳು ಮಾತನಾಡಿ, ಕಳೆದ ಐದು ವರ್ಷಗಳಿಂದ ಜಿಲ್ಲೆಯ 11
ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರವಾಸ ಮಾಡಿ,ಪಕ್ಷವನ್ನು
ಸಂಘಟಿಸಿದ್ದಾರೆ.ರೈತರೊಂದಿಗೆ ನಾವು,ಕೌಶಲ್ಯ ತರಬೇತಿ,ಯುವ ಸೌರಭ
ಇನ್ನಿತರ ಕಾರ್ಯಕ್ರಮಗಳ ಮೂಲಕ ರೈತರು,ವಿವಿಧ ವರ್ಗಗಳ
ಜನರು,ಯುವಕರು, ಪದವಿಧರರು,ತಾಂತ್ರಿಕ ಶಿಕ್ಷಣ ಪಡೆದ
ಯುವಜನರೊಂದಿಗೆ ಸಂವಾದ ನಡೆಸಿ,ಅವರ ಕಷ್ಟ,ಸುಖಃಗಳನ್ನು
ಆಲಿಸುತ್ತಾ,ಅವರಿಗೆ ತಮ್ಮ ಕೈಲಾದ ಸಹಾಯ ಮಾಡು ವುದರ
ಜೊತೆಗೆ,ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಜಿಲ್ಲೆಯಲ್ಲಿ
ಜನಾನುರಾಗಿಯಾಗಿದ್ದಾರೆ.ಹಾಗಾಗಿ 2024ರಲ್ಲಿ ನಡೆಯುವ ಲೋಕಸಭಾ
ಚುನಾವಣೆಯ ತುಮಕೂರು ಲೋಕಸಭಾ ಕ್ಷೇತ್ರದ ಟಿಕೇಟ್‍ನನ್ನು
ಮುರುಳೀಧರ ಹಾಲಪ್ಪ ಅವರಿಗೆ ನೀಡಿದರೆ ಹೆಚ್ಚು ಸೂಕ್ತ ಮತ್ತು
ಪಕ್ಷದ ಅಭ್ಯರ್ಥಿಯ ಗೆಲುವು ಖಂಡಿತ ಎಂದರು.

ಮಾಜಿ ಶಾಸಕ ಗಂಗ ಹನುಮಯ್ಯ ಮಾತನಾಡಿ, ಮುರುಳೀಧರ ಹಾಲಪ್ಪ
ಅವರು ಹಾಲಪ್ಪ ಪ್ರತಿಷ್ಠಾನದ ಮೂಲಕ ರೈತರು ಮತ್ತು ಜನರ
ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ರೈತರೊಂದಿಗೆ ನಾವು
ಕಾರ್ಯಕ್ರಮದಲ್ಲಿ ರೈತರು ಇರುವಲ್ಲಿಗೆ ಅಧಿಕಾರಿಗಳನ್ನು
ಕರೆಯಿಸಿ,ಅವರಿಗೆ ರೈತರಿಗೆ ಸಿಗಬಹುದಾದ ಯೋಜನೆಗಳು,ಅವುಗಳನ್ನು
ಪಡೆಯಲು ಅರ್ಜಿ ಸಲ್ಲಿಸಬೇಕಾದ ವಿಧಾನ ಸೇರಿದಂತೆ ಹಲವಾರು
ಮಾಹಿತಿಗಳನ್ನು ಕೊಡಿಸಿ,ಜನರು ಸರಕಾರದ ಯೋಜನೆಗಳನ್ನು
ಪಡೆಯು ವಂತೆ ಸಹಾಯ ಮಾಡಿದ್ದಾರೆ.ಇದರಿಂದ ಸಾವಿರಾರು ರೈತರಿಗೆ
ಅನುಕೂಲವಾಗಿದೆ.ಹಾಗಾಗಿ ಇಂತಹವರು ಜನಪ್ರತಿನಿಧಿ ಯಾದರೆ ಜನರಿಗೆ
ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಲೋಕಸಭೆಯ
ಟಿಕೇಟ್ ನೀಡಿದರೆ ಗೆಲುವು ಖಚಿತ ಎಂದರು.
ಕಾಂಗ್ರೆಸ್ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ,ಕಳೆದ ಐದು
ವರ್ಷಗಳಿಂದ ನಿರಂತರವಾಗಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ
ಜಿಲ್ಲಾಧ್ಯಕ್ಷರ ಹೆಗಲಿಗೆ ಹೆಗಲು ಕೊಟ್ಟು ಮುರುಳೀಧರ ಹಾಲಪ್ಪ ಕೆಲಸ
ಮಾಡಿದ್ದಾರೆ.ಎಲ್ಲಾ ವರ್ಗದ ಜನರೊಂದಿಗೂ ಬೆರೆತು ಕೆಲಸ ಮಾಡಿದ್ದಾರೆ.ಹಾಗಾಗಿ
ಜನವರಿ 19ರಂದು ತುಮಕೂರು ಜಿಲ್ಲಾ ಉಸ್ತುವಾರಿಯಾದ ಮಯೂರ
ಜಯಕುಮಾರ್ ಜಿಲ್ಲೆಗೆ ಬರುತ್ತಿದ್ದು,ಅಂದು ಅವರಿಗೆ ಮುರುಳೀಧರ
ಹಾಲಪ್ಪ ಅವರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಲಾಗುದು ಎಂದರು.
ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರ ಅಭಿಪ್ರಾಯ ಆಲಿಸಿದ ನಂತರ
ಮಾತನಾಡಿದ ಲೋಕಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿ
ಮುರುಳೀಧರ ಹಾಲಪ್ಪ,ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ
ಈಗಾಗಲೇ ಬಂದಿರುವ ಸಮೀಕ್ಷಾ ವರದಿಗಳ ಪ್ರಕಾರ ಯಾರು
ಮಂಚೂಣಿಯಲಿದ್ದಾರೆ ಅವರಿಗೆ ಟಿಕೇಟ್ ನೀಡಿ ಎಂಬುದು ನನ್ನ ಒತ್ತಾಯವಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರವನ್ನು ಒಂದು ಮಾದರಿ
ಕ್ಷೇತ್ರವನ್ನಾಗಿಸುವ ಕನಸು ಇಟ್ಟುಕೊಂಡಿದ್ದು,ಮಹಿಳೆಯರು,
ಮಕ್ಕಳಿಗೆ ಅನುಕೂಲವಾಗುವಂತಹ ಕೆಲಸಗಳು ಇಲ್ಲಿ ಆಗಬೇಕೆಂಬುದು
ನನ್ನ ಕನಸಾಗಿದೆ. ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕರಿಗೆ ಟಿಕೇಟ್

ನೀಡಿ,ಇನ್ನೊಬ್ಬರನ್ನು ಅಮದು ಮಾಡಿಕೊಳ್ಳುವ ಅಗತ್ಯವಿಲ್ಲ.ಪಕ್ಷದಲ್ಲಿಯೇ
ಸದೃಢವಾದ ಅಭ್ಯರ್ಥಿ ಇದ್ದಾರೆ. ಇದನ್ನು ಪಕ್ಷ ಪರಿಗಣಿಸಬೇಕು.ನಮ್ಮ
ಮುಖಂಡರಾದ ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಅವರಿಗೆ ಮನವಿ
ಮಾಡುತ್ತೇವೆ.ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳಿಗೆ
ಟಿಕೇಟ್ ನೀಡಿ, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತು ಕಷ್ಟವಾಗಲಿದೆ
ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಹೆಚ್.ನಿಂಗಪ್ಪ, ಚಿಕ್ಕನಾಯಕನಹಳ್ಳಿಯ
ಲಕ್ಕಪ್ಪ,ತುಮಕೂರು ಗ್ರಾಮಾಂತರ ಷಣ್ಮುಖಪ್ಪ,
ಮುಖಂಡರಾದ ಬೆಟ್ಟಸ್ವಾಮಿ,ಸಿದ್ದಲಿಂಗೇಗೌಡ,ಶಿವಾಜಿ, ಮಹಿಳಾ ಮುಖಂಡರಾದ
ನಾಗಮಣಿ, ವಿಜಯಲಕ್ಷ್ಮಿ, ಭಾಗ್ಯಮ್ಮ, ಗ್ರಾಮಾಂತರ ಬ್ಲಾಕ್
ಅಧ್ಯಕ್ಷರುಗಳಾದ ಲೋಕೇಶ್,ಗಿರೀಶ್,ಶಂಕರಾನಂದ್,ಸೇವಾದಳದ
ಕೃಷ್ಣೇಗೌಡ,ಜಿಲ್ಲಾಧ್ಯಕ್ಷ ಕಿರಣ್, ರೈತ ಘಟಕದ ರಾಜಪ್ಪ,ಕೊರಟಗೆರೆ
ಮಹಿಳಾ ಘಟಕ ಅಧ್ಯಕ್ಷೆ ಜಯಮ್ಮ,ಚಿಕ್ಕನಾಯಕನಹಳ್ಳಿಯ ರಾಧಾ
ರಾಘವೇಂದ್ರ,ಕಾರ್ಮಿಕ ಘಟಕದ ಲೋಕೇಶ್,ಸ್ವರ್ಣಕುಮಾರ್,ತೇಸಿ
ವೆಂಕಟೇಶ್,ಕಡಬ ಶಿವಕುಮಾರ್,ಗೋವಿಂದೇಗೌಡ,ಸಂಜೀವ್, ದೇವರಾಜು,
ಲಕ್ಷ್ಮಮ್ಮ, ಸೌಭಾಗ್ಯ, ಕಮಲಮ್ಮ,ಹಿರಿಯ ಕ್ರೀಡಾಪಟು
ಟಿ.ಕೆ.ಆನಂದ್,ಮಂಜನಾಥ್,ವಸುಂಧರ ಸೇರಿದಂತೆ ಹಲವಾರು
ಮುಖಂಡರುಗಳು ತಮ್ಮ ಅಭಿಪ್ರಾಯ ಮಂಡಿಸುವ ವೇಳೆ
ಮುರುಳೀಧರ ಹಾಲಪ್ಪ ಅವರಿಗೆ ಈ ಬಾರಿಯ ಲೋಕಸಭಾ ಟಿಕೇಟ್
ನೀಡಬೇಕೆಂದು ಪಕ್ಷವನ್ನು ಒತ್ತಾಯಿಸಿದರು.