breaking news

ಚುನಾವಣೆಗೂ ಮುನ್ನ ಜಿಲ್ಲಾ ಉಪನ್ಯಾಸಕರ ಸಂಘ ರಚನೆ ವಿವಾದ: ಉಪನಿರ್ದೇಶಕರ ತುರ್ತು ನಿರ್ಧಾರಕ್ಕೆ ಉಪನ್ಯಾಸಕರ ಅಸಮಾಧಾನ

ಚುನಾವಣೆಗೂ ಮುನ್ನ ಜಿಲ್ಲಾ ಉಪನ್ಯಾಸಕರ ಸಂಘ ರಚನೆ ವಿವಾದ: ಉಪನಿರ್ದೇಶಕರ ತುರ್ತು ನಿರ್ಧಾರಕ್ಕೆ ಉಪನ್ಯಾಸಕರ ಅಸಮಾಧಾನ

ತುಮಕೂರು: ಜಿಲ್ಲೆಯ ಪಿಯು ಇಲಾಖೆ ಉಪನಿರ್ದೇಶಕರಾದ ಡಾ. ಬಾಲ ಗುರುಮೂರ್ತಿ ಅವರು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳತ್ತ ಗಮನಹರಿಸಬೇಕಾದ ಸಮಯದಲ್ಲಿ, ಇದೀಗ ತುಮಕೂರು ಜಿಲ್ಲಾ ಉಪನ್ಯಾಸಕರ ಸಂಘಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ.

ಈ ಕ್ರಮದಿಂದ ಉಪನ್ಯಾಸಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಕೆಲವರು ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸುತ್ತಾ — “ಉಪನಿರ್ದೇಶಕರು ಎಲ್ಲಾ ಉಪನ್ಯಾಸಕರನ್ನು ಗುಂಪು ಮಾಡಿಸಿ, ತಮ್ಮ ಇಷ್ಟದವರನ್ನು ಆಯ್ದುಕೊಂಡು ಸಂಘ ರಚನೆಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ,” ಎಂದು ಹೇಳಿದ್ದಾರೆ.

ಮುಂದಿನ ತಿಂಗಳಲ್ಲಿ ರಾಜ್ಯ ಉಪನ್ಯಾಸಕರ ಸಂಘದ ಚುನಾವಣಾ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಈ ರೀತಿಯ ಆತುರದ ನಿರ್ಧಾರ ತೆಗೆದುಕೊಂಡಿರುವುದು ಉಪನ್ಯಾಸಕರಲ್ಲಿ ಕುತೂಹಲ ಹಾಗೂ ವಿರೋಧವನ್ನು ಹುಟ್ಟಿಸಿದೆ.

“ಕಾಲೇಜುಗಳಿಗೆ ಹೋಗದೆ, ಅಧಿಕಾರಿಗಳ ಸುತ್ತ ಓಡಾಡುವ ಕೆಲ ಉಪನ್ಯಾಸಕರಿಗೆ ಮಣೆ ಹಾಕಲು ಉಪನಿರ್ದೇಶಕರು ಮುಂದಾಗಿದ್ದಾರೆ. ಇಂತಹ ಕ್ರಮವು ಇಲಾಖೆ ಗೌರವಕ್ಕೆ ಧಕ್ಕೆಯಾಗಿದೆ,” ಎಂದು ಅಸಮಾಧಾನಗೊಂಡ ಉಪನ್ಯಾಸಕರು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

Share this post

About the author

Leave a Reply

Your email address will not be published. Required fields are marked *