breaking newsCongressCrime StoryPolicePolitics PublicPUBLIC

KPCC leaders appealed to DG of Police to take action against shout about Tipu in Bajrang Dal protest

KPCC leaders appealed to DG of Police to take action against shout about Tipu in Bajrang Dal protest

ತುಮಕೂರು: ಮೂರು ದಿವಸಗಳ ಹಿಂದೆ ತುಮಕೂರಿನಲ್ಲಿ ನಡೆದ ನಗರ ಬಂದ್ ವೇಳೆ ವಿಶ್ವಹಿಂದೂ ಪರಿಷತ್, ಭಜರಂಗದಳ ಹಾಗೂ ‌ಇನ್ನಿತರ ಸಂಘಟನೆದಳು ಸ್ವಾತಂತ್ರ್ಯ ಹೋರಾಟಗೀರ ಟಿಪ್ಪೂ ಬಗ್ಗೆ ಮತ್ತು ಮುಸ್ಲಿಂ ಸಮುದಾಯ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ ಘೋಷಣೆ ಕೂರಿರುವವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು‌.


ಈ ವೇಳೆ ತುಮಕೂರು ನಗರ ಮಾಜಿ ಡಾ.ರಫೀಕ್ ಅಹ್ಮದ್ ಪ್ರಕರಣದ ಬಗ್ಗೆ ಸವಿವರವಾಗಿ ತಿಳಿಸಿ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಕಠಿಣ ಕ್ರಮ ತಗೆದುಕೊಳ್ಳುಂತೆ ಮನವಿ ಮಾಡಿದರು.


ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಂಸದರಾದ ನಾಸೀರ್ ಹುಸೇನ್, ಶಾಸಕರಾದ ಎನ್.ಎ.ಹ್ಯಾರಿಸ್, ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್, ಶಾಸಕರಾದ ಕನೀಜ್ ಫಾತಿಮಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *