ತುಮಕೂರು: ಜಿಲ್ಲೆಯ ಅಲ್ಪಸಂಖ್ಯಾತ
ಸಮುದಾಯಕ್ಕೆ ಸೇರಿದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್
ನಂತರದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು ಮತ್ತು
ಪಾರ್ಸಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ ರಾಜ್ಯ ವಿದ್ಯಾರ್ಥಿ ವೇತನ ನೀಡಲು ಆನ್ ಲೈನ್
ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಜಾಲತಾಣ https://ssp.karnataka.gov.in ಮೂಲಕ
ಅಕ್ಟೋಬರ್ ೩೧ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ
ಸಂಬಂಧಿಸಿದ ಶಾಲೆಗಳಿಗೆ ಅರ್ಜಿ ಪ್ರತಿಯನ್ನು ನೀಡಬೇಕು. ಹೆಚ್ಚಿನ
ಮಾಹಿತಿಗಾಗಿ ಹತ್ತಿರದ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ
ಕೇಂದ್ರಗಳನ್ನು ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಅರಿವು ಸಾಲ : ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ತುಮಕೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ
ನಿಗಮವು ಅರಿವು ನವೀಕರಣ ಸಾಲ ಯೋಜನೆಯಡಿ ಅಲ್ಪಸಂಖ್ಯಾತ
(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್, ಪಾರ್ಸಿ) ವಿದ್ಯಾರ್ಥಿಗಳ
ವಿದ್ಯಾಭ್ಯಾಸಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ಡಿ-ಸಿಇಟಿ/ಪಿ.ಜಿ-ಸಿಇಟಿ/ನೀಟ್
ಮೂಲಕ ವೈದ್ಯಕೀಯ(ಎಂ.ಬಿ.ಬಿ.ಎಸ್, ಎಂ.ಡಿ., ಎಂ.ಎಸ್.), ದಂತ
ವೈದ್ಯಕೀಯ(ಬಿ.ಡಿ.ಎಸ್, ಎಂ.ಡಿ.ಎಸ್.) ಆಯುಷ್(ಬಿ.ಆಯುಷ್, ಎಂ.ಆಯುಷ್),
ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಬಿ.ಇ./ಬಿ.ಟೆಕ್.), ಎಂ.ಬಿಎ, ಎಂಸಿಎ, ಎಲ್.ಎಲ್.ಬಿ,
ಬಿ.ಎಸ್ಸಿ. ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಅರಣ್ಯ,
ಪಶುವೈದ್ಯಕೀಯ ಮತ್ತು ಪ್ರಾಣಿ ತಂತ್ರಜ್ಞಾನ, ಮೀನುಗಾರಿಕೆ,
ರೇಷ್ಮೆ ಕೃಷಿ, ಮನೆ/ಸಮುದಾಯ ವಿಜ್ಞಾನಗಳ ಆಹಾರ ಪೋಷಣೆ
ಮತ್ತು ಆಹಾರ ಪದ್ಧತಿ, ಬಿ.ಫಾರ್ಮಾ, ಎಂ.ಫಾರ್ಮಾ ಮತ್ತು ಡಿ ಫಾರ್ಮಾ
ಕೋರ್ಸ್ ಸೇರಿದಂತೆ ವಿವಿಧ ಪದವಿ ಮತ್ತು ಸ್ನಾತಕೋತ್ತರ
ಕೋರ್ಸ್ಗಳಿಗೆ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು
ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ತಾವು ಪಡೆದಿರುವ
ಸಾಲದ ಮೊತ್ತದ ಶೇ.೧೨ರಷ್ಟನ್ನು ಪಾವತಿಸಿ ನಿಗಮದ ವೆಬ್ ಸೈಟ್ https://Kmdconline.karnataka.gov.in ಮುಖಾಂತರ ಅಕ್ಟೋಬರ್ ೩೧ರೊಳಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸೌಲಭ್ಯಕ್ಕಾಗಿ ೨೦೨೪-೨೫ನೇ ಸಾಲಿನ ಸಿಇಟಿ ಯೋಜನೆಯ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಹಾಗೂ ಈ ಹಿಂದೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ಡಿ-ಸಿಇಟಿ/ಪಿ.ಜಿ-ಸಿಇಟಿ/ನೀಟ್
ಆಯ್ಕೆಯಾಗಿ ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿರುವ ಹಾಗೂ ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈ ವಿದ್ಯಾರ್ಥಿಗಳು ಯಾವುದೇ ರಿನಿವಲ್ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ.
ಅರ್ಹ ವಿದ್ಯಾರ್ಥಿಗಳು ಉಪ್ಪಾರಹಳ್ಳಿ, ಇಂದಿರಾ ಕಾಲೇಜು ಮುಂಭಾಗ,
ಮೌಲಾನಾ ಆಜಾದ್‌ಭವನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ
ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ
ವೆಬ್ ಸೈಟ್ https://Kmdconline.karnataka.gov.in ಮೂಲಕ ಅರ್ಜಿ
ಸಲ್ಲಿಸಬಹುದಾಗಿದೆ.