ಯುವ ಪೀಳಿಗೆಗೆ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಅಗತ್ಯ
ತುಮಕೂರು ನಗರದ ಸದಾಶಿವ ನಗರದ ಅಂಬಾವಿಲಾಸ ಕಲ್ಯಾಣ ಮಂಟಪದಲ್ಲಿ ಇಂದು ಕೆನ್ ಬು ಕಯ್ ರಿಯು ಕರಾಟೆ ಸ್ಕೂಲ್ ಆಫ್ ಇಂಡಿಯಾ ತುಮಕೂರು ಇವರ ಸಹಯೋಗದಲ್ಲಿ ಕರಾಟೆ ಕಲರ್ಸ್ ಫ ಆಂಡ್ ಬ್ಲಾಕ್ ಬೆಲ್ಟ್ ಪರಿಕ್ಷೆ ನೆಡೆಸಲಾಯಿತು.
ಇತ್ತಿಚಿನ ದಿನಗಳಲ್ಲಿ ಯುವ ಪೀಳಿಗೆಗೆ ಅವಶ್ಯಕವಾಗಿರುವುದು ಕರಾಟೆ ತರಬೇತಿ ಯುವಕರು ಮತ್ತು ಹೆಣ್ಣು ಮಕ್ಕಳು ಕರಾಟೆ ತರಬೇತಿ ಪಡೆದುಕೊಂಡು ತಮ್ಮ ಆತ್ಮ ರಕ್ಷಣೆಗಾಗಿ ಸ್ವಯಂ ಪ್ರೇರಿತರಾಗಿ ತಮ್ಮ ರಕ್ಷಣೆ ಮಾಡಿಕೊಳ್ಳಲು ಕರಾಟೆ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ನಯಾಜ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಹಿ ಸಿಕಂದರ್, ಭುವನೇಶ್ವರಿ, ಮಂಜುಳಾ, ಮುಬಾರಕ್ ಪಾಷಾ ಮತ್ತು ರೇಂಶಿ ಜಾಬಿ ಉಲ್ಲಾ 3 ಡಾನ್ ಬ್ಲಾಕ್ ಬೆಲ್ಟ್,ರೇಂಶಿ ಎಸ್ ಅಶ್ರಫ್ 5 ಡಾನ್ ಬ್ಲಾಕ್ ಬೆಲ್ಟ್,ರೇಂಶಿ ಎಂ ವಿಜಯನ್ 7 ಡಾನ್ ಬ್ಲಾಕ್ ಬೆಲ್ಟ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟರ್, ಮತ್ತು ಇತರರು ಭಾಗವಹಿಸಿದ್ದರು.