ಹಿರಿಯ ಪತ್ರಕರ್ತ ಜಯನುಡಿ ಜಯಣ್ಣ ಅವರು ಪತ್ರಿಕೆಯ ಹೆಸರಿನಲ್ಲಿ ಹೊರತಂದಿರುವ 2022ನೇ ಸಾಲಿನ ಕ್ಯಾಲೆಂಡರ್‍ನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಪತ್ರಿಕೆಯ ಸಂಪಾದಕರಾದ ಸಿ.ಜಯಣ್ಣ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್‍ವಾಡ್, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ,ತುಮಕೂರು ಉಪವಿಭಾಗಾಧಿಕಾರಿ ಅಜಯ್,ತಹಶೀಲ್ದಾರ್ ಮೋಹನ್ ಕುಮಾರ್,ಪತ್ರಕರ್ತರಾದ ಸೊಗಡು ವೆಂಕಟೇಶ್,ದಲಿತ ಮುಖಂಡರಾದ ರಂಜನ್.ಎ,ಕಾಟೇನಹಳ್ಳಿ ಕುಮಾರ್,ಬಾಬಣ್ಣ,ಪೂಜಾ ಹನುಮಯ್ಯ, ಶಿವಣ್ಣ ಕೆಸ್ತೂರು ಮತ್ತಿತರರು ಉಪಸ್ಥಿತರಿದ್ದರು.