breaking newsCrime StoryPolicePolitics PublicPUBLICSOCIAL ACTIVIST

Jayakarnāṭaka Janapara Vedike protest against Shiv Sena and MES

Jayakarnāṭaka Janapara Vedike protest against Shiv Sena and MES

ತುಮಕೂರು: ಕನ್ನಡಾಂಬೆಯ ಬಾವುಟವನ್ನು ಸುಟ್ಟುಹಾಕಿ ಪುಂಡಾಟಿಕೆ ಮೆರೆದಿರುವ ಶಿವಸೇನೆ ಮತ್ತು ಎಂ.ಇ.ಎಸ್. ಕಾರ್ಯಕರ್ತರ ನಡೆಯನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಶಿವಕುಮಾರಸ್ವಾಮೀಜಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.


ಜಯಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಅವರ ಆದೇಶದ ಮೇರೆಗೆ ರಾಜ್ಯಾಧ್ಯಕ್ಷರಾದ ಆರ್. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಉಮಾಶಂಕರ್ ನೇತೃತ್ವದಲ್ಲಿ ಬೆಳಗಾವಿಯ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಕೆ.ಉಮಾಶಂಕರ್ ಮಾತನಾಡಿ, ತಾಯಿಯಂತೆ ಪೂಜಿಸುವ ಕನ್ನಡ ಬಾವುಟವನ್ನು ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ಸುಟ್ಟುಹಾಕಿದ್ದಾರೆ, ಇದು ನಮ್ಮ ತಾಯಿಯನ್ನು ಸುಟ್ಟಂತೆ, ಹರಿಶಿಣ ಕುಂಕುಮ ನಮ್ಮ ನಾಡ ಧ್ವಜದಲ್ಲಿದೆ, ಹರಿಶಿಣ ಮತ್ತು ಕುಂಕುಮ ಕರ್ನಾಟಕದ ಸಂಕೇತ, ನಾವು ಹೆಣ್ಣು ಮಕ್ಕಳಿಗೆ ಬಾಗಿನ ಕೊಡುತ್ತೇವೆ, ಇಂತಹ ಚರಿತ್ರೆಯುಳ್ಳ ನಾಡಧ್ವಜವನ್ನು ಸುಟ್ಟುಹಾಕಿರುವುದು ಖಂಡನೀಯ ಎಂದರು.


ರಾಜ್ಯದಲ್ಲಿ 224 ಮಂದಿ ಶಾಸಕರಿದ್ದಾರೆ, 28 ಮಂದಿ ಸಂಸದರಿದ್ದಾರೆ, ಇಂದು ಬೆಳಗಾವಿಯಲ್ಲಿ ಅವರೆಲ್ಲಾ ಮಲಗಿದ್ದಾರೇನೋ ಗೊತ್ತಿಲ್ಲ, ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದಲ್ಲಿ ಯಾರೂ ಸಹ ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಇಂದು ಕರ್ನಾಟಕದಲ್ಲಿ ಊಟ ಮಾಡಿ ಎಂಎಲ್‍ಎ, ಎಂಪಿಗಳಾಗುತ್ತಾರೆ, ಯಾರೂ ಕೂಡ ಚಕಾರ ಎತ್ತುತ್ತಿಲ್ಲ, ಪಕ್ಷ ಮತ್ತು ರಾಜಕೀಯದಲ್ಲಿ ತಮ್ಮ ಅಸ್ಥಿತ್ವ ಕಾಪಾಡಿಕೊಳ್ಳಲಷ್ಟೇ ಸೀಮಿತರಾಗುವ ರಾಜಕಾರಣ ಗಳಿಗೆ ಈ ಬಗ್ಗೆ ಕಿಂಚತ್ತೂ ರೋಷಾವೇಷ ಎಂಬುದಿಲ್ಲವೇ ಎಂದು ಕಿಡಿಕಾರಿದರು.


ಕನ್ನಡ ಬಾವುಟ ಸುಟ್ಟುಹಾಕಿರುವ ಪ್ರಕರಣ ಸಂಬಂಧ ಯಾವ ರಾಜಕಾರಣ ಯೂ ಚಕಾರವೆತ್ತಿಲ್ಲ, ಇವರೆಲ್ಲಾ ಕರ್ನಾಟಕದಲ್ಲಿ ಹುಟ್ಟಿಲ್ಲವೇ.? ನಾನು ಕನ್ನಡ ಮಣ ್ಣನ ಮಗ ಎನ್ನುತ್ತಾರೆ, ಹಸಿರು ಶಾಲು ಹಾಕಿಕೊಂಡು ನಾನು ರೈತರ ಮಗ ಎನ್ನುತ್ತಾರೆ ಆದರೆ ಕನ್ನಡ ಧ್ವಜಕ್ಕೆ ಅಪಮಾನವಾದಾಗ ಇವರೆಲ್ಲಾ ಎಲ್ಲಿ ಹೋಗುತ್ತಾರೆ ಎಂಬುದೇ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಯಕರ್ನಾಟಕ ಜನಪರ ವೇದಿಕೆ ನಗರಾಧ್ಯಕ್ಷ ಎಸ್.ಸಚಿನ್ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ಕನ್ನಡಾಭಿಮಾನಕ್ಕೆ ಅಗೌರವ ತೋರಿಸಿದ್ದು, ನಾವು ಕರ್ನಾಟಕದ ಮಣ ್ಣನ ಮಕ್ಕಳು ಇದನ್ನು ನೋಡಿಕೊಂಡು ತಾಳ್ಮೆಯಿಂದ ಕೂರಲ್ಲ, ಹುಲಿ ಮಲಗಿದೆ ಎಂದು ಕೆಣಕಬೇಡಿ ಮುಂದಿನ ಪರಿಣಾಮ ಎದುರಿಸುತ್ತೀರಾ ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಯುವ ಘಟಕ ಅಧ್ಯಕ್ಷ ಸುಜನ್, ಉಪಾಧ್ಯಕ್ಷ ಜೂನೇದ್, ಪ್ರಧಾನ ಕಾರ್ಯದರ್ಶಿ ಜಿತೇಂದ್ರ, ದರ್ಶನ್, ಪವನ್, ಅಂಜನ್ ಸೇರಿದಂತೆ ಇತರೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Share this post

About the author

Leave a Reply

Your email address will not be published. Required fields are marked *