ತುಮಕೂರು: ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ‘ಹಲೋ ಡಾಕ್ಟರ್ಸ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಈ ಶನಿವಾರದಿಂದ ಆರಂಭವಾಗುತ್ತದೆ.
ಮನೆಯಲ್ಲಿ ಕ್ವಾರಂಟೈನ್ ಆದ ಕೋವಿಡ್ ರೋಗಿಗಳಿಗೆ ಮತ್ತು ಕೋವಿಡ್ ಪ್ರಾಥಮಿಕ ಹಂತದ ಚಿಕಿತ್ಸೆಗಾಗಿ, ಕೋವಿಡ್ ಲಕ್ಷಣಗಳು ಇರುವವರಿಗೆ ತಜ್ಞ ವೈದ್ಯರ ಜೊತೆ ನೇರ ಉಚಿತ ದೂರವಾಣಿ ಸಮಾಲೋಚನೆ ನಡೆಸುವ ಉದ್ದೇಶದಿಂದ, ಈ ಸೇವೆಯನ್ನು ಆರಂಭಿಸಲಾಗಿದೆ.
ಗ್ರಾಮೀಣ ಪ್ರದೇಶದ, ಹೆಚ್ಚಾಗಿ ಆರೋಗ್ಯ ವ್ಯವಸ್ಥೆ ಇಲ್ಲದ ನಗರಗಳಲ್ಲಿ ವಾಸಿಸುತ್ತಿರುವ ಬಡ ಜನರಿಗೆ ನೆರವು ಒದಗಿಸುವುದು ಮತ್ತು ಕೋವಿಡ್ ಪೀಡಿತರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವುದು ನಮ್ಮ ಉದ್ದೇಶ.
ರಾಜ್ಯದ ಹಲವಾರು ಪ್ರತಿಷ್ಠಿತ, ನುರಿತ ವೈದ್ಯರು ನಮ್ಮ ಜೊತೆ ಕೈಸೇರಿಸಿರುವುದು, ಸರ್ಕಾರಗಳ ವೈಫಲ್ಯಗಳ ನಡುವೆ, ಜನ ಸೇವೆಗೆ ಮುಂದೆ ಬಂದಿರುವ ಜೀವಪರ ವ್ಯಕ್ತಿ/ಸಂಘಟನೆಗಳ ದಾರಿಯಲ್ಲಿ ನಮ್ಮ ಸಣ್ಣ ಪ್ರಯತ್ನಕ್ಕೆ ಶಕ್ತಿ ನೀಡಿದೆ.
ದಿನಾಂಕ 22ರಿಂದ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ತಲಾ ಒಂದು ಘಂಟೆಗಳ ಎರಡು ಅವಧಿಗಳಿಗೆ ಅಪಾಯಿಂಟ್‍ಮೆಂಟ್ ನೀಡಲಾಗುವುದು.
ಅಪಾಯಿಂಟ್‍ಮೆಂಟ್‍ಗಾಗಿ ನೀವು ಕರೆ ಮಾಡಬೇಕಾಗಿರುವ ದೂರವಾಣಿ ಸಂಖ್ಯೆಗಳು: 9164220387, 9035762866, 8951824630, 9538627750, 8880744437, 9632127094. ಮತ್ತಷ್ಟು ಮಾಹಿತಿ, ತಜ್ಞ ವೈದ್ಯರ ಪಟ್ಟಿ, ನಿರ್ದಿಷ್ಟ ವೇಳಾಪಟ್ಟಿಗೆ ಎಐಡಿಎಸ್‍ಓ ಕರ್ನಾಟಕ ಫೇಸ್‍ಬುಕ್ ಪೇಜ್ ಗಮನಿಸಿ.
ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ವಿನಂತಿಸಿದೆ.