ಸವಣ ್ೀಯರ ಕಿರುಕುಳಕ್ಕೆ ಬೇಸತ್ತು ದೂರು ನೀಡಿದ ವಾಟರ್ ಮ್ಯಾನ್.
ಗುಬ್ಬಿ ಪಟ್ಟಣದ ಸುಭಾμï ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿಯ ರಾಜು ಎಂಬುವರು ವಾಟರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದು ಇದನ್ನು ಸಹಿಸದ ಕೆಲ ಸವಣ ್ೀಯ ಜನಾಂಗದ ವ್ಯಕ್ತಿಗಳು ಈತನ ಮೇಲೆ ಸದಾ ಕಿರುಕುಳ ನೀಡುತ್ತಿದ್ದು ಇವರ ಕಿರುಕುಳಕ್ಕೆ ಬೇಸತ್ತು ವಾಟರ್ ಮ್ಯಾನ್ ರಾಜು ಎಂಬುವವರು ತುಮಕೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ ಪ್ರಸಂಗ ವರದಿಯಾಗಿದೆ.
ಇನ್ನು ಸುಭಾμï ನಗರದಲ್ಲಿ ವಾಸವಿರುವ ಕೆಲ ವ್ಯಕ್ತಿಗಳು ಪರಿಶಿಷ್ಟಜಾತಿಯ ವ್ಯಕ್ತಿಯೊಬ್ಬ ನೀರು ಬಿಡುವ ಕೆಲಸ ನಿರ್ವಹಿಸುತ್ತಿದ್ದು ಇದನ್ನು ಸಹಿಸಲಾಗದೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಳೆದ ಕೆಲದಿನಗಳ ಹಿಂದೆ ಅಚಾನಕ್ಕಾಗಿ ಟ್ಯಾಂಕ್ ನಿಂದ ನೀರು ತುಂಬಿ ಹರಿದು ಹೊರ ಬರುತ್ತಿದ್ದ ಸಮಯದಲ್ಲಿ ವಿಡಿಯೋ ಮಾಡಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಯೋಗೇಶ್ ರವರಿಗೆ ವಿನಾಕಾರಣ ದೂರು ನೀಡಿ ನನ್ನ ತೇಜೋವಧೆ ಮಾಡುವ ಮೂಲಕ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಜಾತಿನಿಂದನೆ ಮಾಡುತ್ತಿದ್ದರೂ ಸಹ ನಾನು ಅವೆಲ್ಲವುಗಳನ್ನು ಸಹಿಸಿಕೊಂಡು ಇಷ್ಟು ದಿನ ನನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಆದರೆ ಅವರ ವರ್ತನೆ ಮಿತಿಮೀರಿದ್ದು ನ್ಯಾಯಕ್ಕಾಗಿ ತುಮಕೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿರುವುದಾಗಿ ಗುಬ್ಬಿ ಪಟ್ಟಣ ಪಂಚಾಯಿತಿ ಸುಭಾμï ನಗರದ ವಾಟರ್ ಮ್ಯಾನ್ ರಾಜುರವರು ತಿಳಿಸಿದ್ದಾರೆ.