ಇಂಜಿನಿಯರ್ ಹಾಗೂ ಕುಟುಂಬ ಸದಸ್ಯರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಸಾಗರನಹಳ್ಳಿ ಗೇಟ್ ಬಳಿ ಒಂದೇ ಕುಟುಂಬದ 3 ಜನರು ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣದ ಘಟನೆ ಜರುಗಿದೆ.
ನಿಟ್ಟೂರು ಬಳಿಯ ಸೋಮಲಾಪುರದ ಹೇಮಾವತಿ ನಾಲೆಯಲ್ಲಿ 2 ಶವಗಳು ಪತ್ತೆಯಾಗಿದ್ದು ಹೇಮಾವತಿ ನಾಲಾ ಕಛೇರಿಯ ಇಂಜಿನಿಯರ್ ರಮೇಶ್ (55) ಮತ್ತು ಶಿಕ್ಷಕಿ ಪತ್ನಿ ಮಮತಾ (46 ) ವರ್ಷ ಇವರ ಮಗಳು ಶುಭ (25)ವರ್ಷ ಸಾವನ್ನಪ್ಪಿರುವ ದುರ್ದೈವಿಗಳು.
ಮಮತಾ ಮತ್ತು ಶುಭ ಶವಗಳು ನಾಲೆಯಲ್ಲಿ ತೇಲಿಬಂದು ಸೋಮಲಾಪುರ ಬಳಿ ಸಿಕಿದ್ದು ಉಳಿದಂತೆ ಹೇಮಾವತಿ ಇಂಜಿನಿಯರ್ ರಮೇಶ್ (55) ಇವರ ಶವ ಪತ್ತೆ ಮಾಡಲು ಶೋಧ ಕಾರ್ಯಚರಣೆ ಮುಂದುವರೆದಿದೆ.
ಸ್ಥಳಕ್ಕೆ ಗುಬ್ಬಿ ಸಿಪಿಐ ನದಾಫ್, ಚೇಳೂರು ಪಿ ಎಸ್ ಐ ವಿಜಯ್ ಕುಮಾರಿ ಹಾಗೂ ಸಿಬ್ಬಂದಿ ಬೇಟಿ ನೀಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ.ಈ ಪ್ರಕರಣ ಚೇಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.