ತುಮಕೂರು ಕೆಂದ್ರ ಸರ್ಕಾರ ರಾಷ್ಷ್ರಿಕೃತ ಬ್ಯಾಂಕ್ ಗಳನ್ನು ಖಾಸಗಿಕರಣ ಮಾಡುತ್ತಿರುವುದನ್ನು ಖಂಡಿಸಿ ತುಮಕೂರಿನ ರಾಷ್ಟ್ರಿಕೃತ ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗದವರು ಭಾರತತೀಯ ಸ್ಟೇಟ್ ಬ್ಯಾಂಕ್ ತುಮಕೂರು ಜಿಲ್ಲಾ ಪ್ರಾಧಾನ ಶಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನೇಡೆಸಲಾಯಿತು.
ನೆನ್ನೆ ಮತ್ತು ಇಂದು ರಾಷ್ಟ್ರಿಕೃತ ಬ್ಯಾಂಕಿನ ಸಿಬ್ಬಂದಿ ವರ್ಗದವರು ದೇಶಾದ್ಯಂತ 10 ಲಕ್ಷ ನೌಕರರು ಖಾಸಗೀಕರಣ ಬ್ಯಾಂಕ್ ಗಳ ವಿರುದ್ಧ ಪ್ರತಿಭಟನೆ ನೇಡೆಸುತ್ತಿದ್ದು ರಾಷ್ಟ್ರಿಕೃತ ಬ್ಯಾಂಕ್ ಗಳು ಪ್ರತಿ ವರ್ಷವೂ ಲಾಭಾಂಶದಲ್ಲಿ ಕೇಲಸ ನಿರ್ವಹಿಸುತ್ತಿದ್ದು ಈದನ್ನು ಮನಗಂಡ ಕೆಂದ್ರ ಸರ್ಕಾರ ರಾಷ್ಟ್ರಿಕೃತ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಖಂಡನೀಯ .
ದೇಶಾದ್ಯಂತ ರಾಷ್ಟ್ರಿಕೃತ ಬ್ಯಾಂಕ್ ಗಳು ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಸಕ್ರಿಯವಾಗಿ ಕೇಲಸ ನಿರ್ವಹಿಸುತ್ತಿದೆ ಜನ್ ಧನ್ಯೋಜನೆಯಲ್ಲಿ ರಾಷ್ಟ್ರಿಕೃತ ಬ್ಯಾಂಕ್ ಗಳ ಪಾಲು ಶೇಕಡಾ 93 ರಷ್ಟಿದ್ದರೆ ಖಾಸಗಿ ಬ್ಯಾಂಕ್ ಗಳ ಪಾಲು ಕೇವಲ ಶೇಕಡಾ 7ರಷ್ಟು ಮಾತ್ರ ಇತ್ತಿಚಿನ ಸರ್ಕಾರದ ಮುದ್ರ ಯೋಜನೆ ಸ್ವನಿಧಿ ಯೋಜನೆ ಹಾಗು ಕೆಂದ್ರ ಸರ್ಕಾರದ ಸಾಲ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿರುವ ರಾಷ್ಷ್ರಿಕೃತ ಬ್ಯಾಂಕ್ ಗಳನ್ನು ಖಾಸಗಿಯವರಿಗೆ ಮಾರಲು ಮುಂದಾಗಿರುವುದನ್ನು ಖಂಡಿಸಿದ್ದಾರೆಕೆಂದ್ರ ಸರ್ಕಾರ ಗ್ರಾಮಿಣ ಭಾಗದ ಜನಸಾಮಾನ್ಯರ ಜೀವ ನಾಡಿಯಾಗಿರುವ ರಾಷ್ಟ್ರಿಕೃತ ಬ್ಯಾಂಕ್ ಗಳನ್ನು ದಿವಾಳಿ ಮಾಡುವಂತ ಕೇಲಸ ಮಾಡುತ್ತಿದೆ .ಉಳ್ಳವರ ಪರವಾಗಿ ಕಾನೂನು ರೂಪಿಸಲು ಮುಂದಾಗಿದೆ .ಈ ಇನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರಿಕೃತ ಬ್ಯಾಂಕ್ ನ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.