ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.) 671/01 ತುಮಕೂರು ವಿಭಾಗದಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕಲ್ಲ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣ ಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗಗಳಿಗೂ ಕೊಟ್ಟಂತಹ ಸಂವಿಧಾನ ಎಂದರು.
ಪ್ರಪಂಚ ಆರ್ಥಿಕವಾಗಿ, ಶೈಕ್ಷಣ ಕವಾಗಿ, ರಾಜಕೀಯವಾಗಿ ಪ್ರಬಲವಾದಾಗ ಯಾವುದೇ ಜಾತಿ ಅಡ್ಡಿ ಬರುವುದಿಲ್ಲ, ಬುದ್ದಿ ಜೀವಿಗಳ ಮಧ್ಯೆ ತಲೆ ಎತ್ತಿಕೊಂಡು ಬಾಳಬೇಕು ಎಂದು ಶಿಕ್ಷಣ ಮುಖ್ಯ, ಇದರಿಂದ ಆರ್ಥಿಕವಾಗಿ ಸಬಲೀಕರಣವಾಗಿ ಸಮಾಜದಲ್ಲಿ ತಲೆ ಎತ್ತುವ ರೀತಿಯಲ್ಲಿ ಆಗಬೇಕು ಎಂದು ಹೇಳಿದರು.
ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದ ಕೆಲವು ನಾಯಕರುಗಳು, ಮುಖಂಡರು ಆರ್ಥಿಕವಾಗಿ, ಶೈಕ್ಷಣ ಕವಾಗಿ ಮುಂದೆ ಬರುವುದನ್ನು ನಾವು ಸಮಾಜದಲ್ಲಿ ನೋಡಿದ್ದೇವೆ. ಆದರೆ ಸಾಮಾಜಿಕವಾಗಿ ಇರುವ ಪಿಡುಗನ್ನು ಹೋಗಲಾಡಿಸಲು ದೇಶದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿವೆ ಎಂದರು.
ಕೇಂದ್ರ ಸರ್ಕಾರ ಯುಪಿಐ ಭೀಮ್ ಆಪ್ ನ್ನು ಅಭಿವೃದ್ಧಿಪಡಿಸಿದ್ದು, ಇದು ಅಂಬೇಡ್ಕರ್‍ಗೆ ಕೊಟ್ಟ ದೊಡ್ಡ ಗೌರವವಾಗಿದೆ ಎಂದರು.
ಆರೋಗ್ಯ ಮತ್ತು ಸಾರಿಗೆ ಈ ಎರಡನ್ನೂ ಯಾವುದೇ ಕಾರಣಕ್ಕೂ ಸಂಪೂರ್ಣ ಖಾಸಗಿಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ತುಮಕೂರು ವಿಭಾಗದ ಗೌರವಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ನಮ್ಮಿಂದ ರಾಜಕೀಯ ಹಕ್ಕನ್ನು ಪಡೆದುಕೊಂಡು ಹೋಗಿರುವ ಜನಪ್ರತಿನಿಧಿಗಳಲ್ಲಿ ಕನಿಷ್ಟ ಪ್ರಾಮಾಣ ಕತೆ ಬಂದಿದ್ದರೆ, ಇನ್ನೂ ಹೆಚ್ಚು ಸುಧಾರಣೆಯಾಗುತ್ತಿತ್ತು, ಅವರಲ್ಲಿ ಪ್ರಾಮಾಣ ಕತೆ, ದಕ್ಷತೆ ಬರಲಿಲ್ಲ, ಕೇವಲ ಸ್ವಾರ್ಥ ಬಂದಿತು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಸ್ವಾರ್ಥ ಬಂದಿದ್ದರೆ ಈ ದೇಶದ ರಾಷ್ಟ್ರಪತಿಯೋ ಅಥವಾ ಪ್ರಧಾನಿಯೋ ಆಗುತ್ತಿದ್ದರು.
ಹಿಂದಿರುಗಿ ನೋಡುವಂತಹ ಕೆಲಸ ನಮ್ಮ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಜಾತಿ ವ್ಯವಸ್ಥೆಯಲ್ಲಿನ ನೋವನ್ನು ಸ್ವತಃ ಅನುಭವಿಸಿದ್ದ ಬಾಬಾ ಸಾಹೇಬರು ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದವರನ್ನು ದೇಶದ ಅತ್ಯುನ್ನತ ಹುದ್ದೆಗೆ ಏರುವಂತೆ ಮಾಡಲು ಶ್ರಮಿಸಿದರು. ಆರ್ಥಿಕತಜ್ಞರಾಗಿ, ರಾಜಕಾರಣ ಯಾಗಿ, ಸಂವಿಧಾನ ಶಿಲ್ಪಿಯಾಗಿ, ನೊಂದವರ ಪಾಲಿನ ಆಶಾ ಜ್ಯೋತಿಯಾಗಿದ್ದ ಅವರ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ತುಮಕೂರು ವಿಭಾಗದ ಅಧ್ಯಕ್ಷ ಶ್ರೀನಿವಾಸ್, ಭಾರತದ ಭಾಗ್ಯ ವಿಧಾತರಾದ ಬಾಬಾ ಸಾಹೇಬ್ ರವರು ಒಂದು ಕಟ್ಟಡವನ್ನು ಕಟ್ಟಲಿಲ್ಲ ಬದಲಿಗೆ ಇಡೀ ಭಾರತವನ್ನೇ ಕಟ್ಟಿದ್ದಾರೆ. ಇಡೀ ವಿಶ್ವದಲ್ಲಿಯೇ ಶೂನ್ಯದಿಂದ ಶಿಖರಕ್ಕೆ ಏರಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಕೇವಲ ಬಿ.ಆರ್. ಅಂಬೇಡ್ಕರ್ ಮಾತ್ರ ಎಂದು ಹೇಳಿದರು.
ಸ್ವಾತಂತ್ರ್ಯದ ಮುಂಚೆಯಿಂದಲೂ ಜಮೀನು ಇದ್ದವರು ಡಿಗ್ರಿ ಪಡೆದವರು ಮಾತ್ರ ಓಟ್ ಹಾಕುವ ಅನುಮತಿ ಇತ್ತು ಅದನ್ನು ತಡೆದು 18 ವರ್ಷದವರಿಂದ ಓಟ್ ಹಾಕಲು ಅನುಮತಿ ತಂದುಕೊಟ್ಟ ಕೀರ್ತಿ ಅಂಬೇಡ್ಕರ ರವರಿಗೆ ಸಲ್ಲುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ತುಮಕೂರು ವಿವಿ ಉಪನ್ಯಾಸಕರಾದ ನಾಗಭೂಷಣ್ ಬಗ್ಗನಡು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ರಾಜಸಿಂಹ, ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು, ತುಮಕೂರು ವಿಭಾಗಿಯ ತಾಂತ್ರಿಕ ಶಿಲ್ಪಿ ಆಸಿಫ್ ಉಲ್ಲಾ ಶರೀಫ್, ನೆಲಮಂಗಲ ಘಟಕ ವ್ಯವಸ್ಥಾಪಕ ಬಿ.ಮಂಜುನಾಥ್, ತುಮಕೂರು ವಿಭಾಗದ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಸಿದ್ಧರಾಜು, ಹಿರಿಯ ಉಪಾಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಡಿ.ಸಿ.ವನರಂಗಪ್ಪ, ಕಾರ್ಯಾಧ್ಯಕ್ಷ ಜಿ.ಬಿ.ನಾಗೇಶ್, ವಕೀಲರ ಸಂಘದ ಸಲಹೆಗಾರ ಟಿ.ಆರ್.ನಾಗೇಶ್, ವಿಭಾಗೀಯ ಸಂಚಲನಾಧಿಕಾರಿ ಡಿ.ಫಕ್ರುದ್ದೀನ್, ಕಾರ್ಮಿಕ ಆಡಳಿತಾಧಿಕಾರಿ ಸಿದ್ಧರಾಜು, ಕಲ್ಯಾಣಾಧಿಕಾರಿ ಹಂಸವೀಣಾ, ತುಳಸೀರಾಮ್, ಸಂತೋಷ್, ರಾಕೇಶ್ ಸೇರಿದಂತೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಅಧಿಕಾರಿ, ನೌಕರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣ ಗೆ ನಡೆಯಿತು.