breaking newsPolitics PublicPUBLICSOCIAL ACTIVIST

Do not join an organization to make money, join an organization to serve

Do not join an organization to make money, join an organization to serve

ಹಣ ಮಾಡಲು ಸಂಘಟನೆಗೆ ಸೇರಬೇಡಿ, ಸೇವೆ ಮಾಡಲು ಸಂಘಟನೆ ಸೇರಿ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್

ತುಮಕೂರು: ಹಣ ಮಾಡಲು ಸಂಘಟನೆಗೆ ಸೇರಬೇಡಿ, ಸೇವೆ ಮಾಡಲು ಸಂಘಟನೆ ಸೇರಿ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್(ಕೆ.ಉಮೇಶ್) ತಿಳಿಸಿದರು.


ಜಿಲ್ಲೆಯ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೈಸ್ಕೂಲ್ ಮೈದಾನದಲ್ಲಿ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಮತ್ತು ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ, ರಾಜ್ಯ ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕಾರ್ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಶಿರಾ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಇಂದು ಹಣ ಮಾಡಲೆಂದು ಕೆಲವರು ಸಂಘಟನೆಗೆ ಸೇರುತ್ತಾರೆ, ಆದರೆ ಹಣ ಮಾಡಲು ಮಾತ್ರ ಸಂಘಟನೆಗೆ ಬರಬೇಡಿ, ಸಮಾಜ ಸೇವೆಗೋಸ್ಕರ ಸಂಘಟನೆಗೆ ಬನ್ನಿ, ಇಂದು ಸಂಘಟನೆಗಳು ಬರೀ ರೋಲ್‍ಕಾಲ್ ಸಂಘಟನೆಗಳಾಗುತ್ತಿರುವುದು ವಿಷಾಧನೀಯ, ಆದುದರಿಂದ ಸೇವೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಸಂಘಟನೆಗೆ ಬನ್ನಿ ಎಂದು ಕರೆ ನೀಡಿದರು.


ಯಾವುದೇ ಇಲಾಖೆಗಳಲ್ಲಿ ಅಥವಾ ಶಾಲಾ ಕಾಲೇಜುಗಳಲ್ಲಿ ಕೆಲಸ ಕಾರ್ಯಗಳು ವಿಳಂಭವಾದರೆ ಒಬ್ಬ ವ್ಯಕ್ತಿಯಿಂದಾಗಲೀ ಅಥವಾ ಓರ್ವ ವಿದ್ಯಾರ್ಥಿಯಿಂದಾಗಲೀ ಕೆಲಸ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅವರ ಹಿಂದೆ ಸಂಘಟನೆ ಇದ್ದರೆ ತಕ್ಷಣ ಕೆಲಸ ಕಾರ್ಯಗಳು ಸುಲಭವಾಗಿ ಆಗುತ್ತವೆ. ಆದುದರಿಂದಲೇ ಸಂಘಟನೆಗಳು ಸಮಾಜದಲ್ಲಿ ಅತ್ಯವಶ್ಯ ಎಂದರು.


ಒಂದು ಊರು ಅಭಿವೃದ್ಧಿಯಾಗಬೇಕಾದರೆ ಕೇವಲ ಜನಪ್ರತಿನಿಧಿ, ಇಲಾಖೆ ಮತ್ತು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಊರಿನ ಚಿಂತಕರು ಮತ್ತು ಸಂಘಟನೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.


ಇಡೀ ರಾಜ್ಯಾದ್ಯಂತ ಜಯಕರ್ನಾಟಕ ಜನಪರ ವೇದಿಕೆ ವಿಸ್ತಾರಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಸಂಘಟನೆಯಾಗಿ ಹೊರಹೊಮ್ಮಿದ್ದು, ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜಯಕರ್ನಾಟಕ ಜನಪರ ವೇದಿಕೆ ಮುಂದಾಗಿದೆ ಎಂದು ತಿಳಿಸಿದರು.


ಬಹುತೇಕ ಇಲಾಖೆಗಳಲ್ಲಿ ಲಂಚವಿಲ್ಲದೆ ಕೆಲಸಗಳೇ ಆಗುವುದಿಲ್ಲ, ಆದುದರಿಂದ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಲಂಚಮುಕ್ತ, ಸ್ವಚ್ಚ ಸಮಾಜ ನಿರ್ಮಾಣ ಮಾಡುವಲ್ಲಿ ಕೈಜೋಡಿಸಿ ಕಾರ್ಯನಿರ್ವಹಿಸಬೇಕು, ಆಗ ಸಂಘಟನೆಯಲ್ಲಿ ಸೇವೆ ಮಾಡಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಉತ್ತಮ ಆಲೋಚನೆ ಹೊಂದಿರಬೇಕು. ಈ ಆಲೋಚನೆಗಳು ಕ್ರಿಯಾತ್ಮಕ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಕೂಡ ಅಷ್ಟೇ ಮುಖ್ಯ, ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಲು ತಾಳ್ಮೆ ಮುಖ್ಯ. ನಾಯಕತ್ವ ಹೊಂದಿದವರು ಸಂಘಟನಾ ಸಾಮಥ್ರ್ಯ ಹೊಂದಿರಬೇಕು. ಪ್ರತಿಯೊಬ್ಬರ ಮಾತನ್ನು ಆಲಿಸುವುದು ಬಹಳ ಮುಖ್ಯ ಎಂದರು.


ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಗಲಿದ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು.
ಶಿರಾ ತಾಲ್ಲೂಕು ನೂತನ ಪದಾಧಿಕಾರಿಗಳ ಪದಗ್ರಹಣ:


ಜಯಕರ್ನಾಟಕ ಜನಪರ ವೇದಿಕೆ ಶಿರಾ ತಾಲ್ಲೂಕು ಅಧ್ಯಕ್ಷರಾಗಿ ಡಿ.ಹೆಚ್.ಸಂತೋಷ್, ಕಾರ್ಯಾಧ್ಯಕ್ಷ ಕೆ.ಟಿ.ಈರಣ್ಣ, ನಗರ ಅಧ್ಯಕ್ಷ ಮಂಜುನಾಥಾಚಾರ್, ಉಪಾಧ್ಯಕ್ಷರಾಗಿ ಕೆ.ನಾಗರಾಜು, ಧನಂಜಯ, ಬಿ.ರಮೇಶ್, ಶಿವು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್‍ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ನರಸಿಂಹಯ್ಯ, ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ಕೆ.ಓ.ದೇವರಾಜು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ.ನವೀನ್‍ಕುಮಾರ್ ಆಯ್ಕೆಯಾಗಿ ಪದಗ್ರಹಣ ಮಾಡಿದರು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಪಿ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಮಂಜೇಶ್, ನಗರಾಧ್ಯಕ್ಷ ಎಸ್.ಸಚಿನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್ ಅಪ್ಪಾಜಿ, ಪ್ರಸಾದ್, ಅರುಣ್, ರಾಜೇಶ್, ಮಧು, ಹನುಮಂತರಾಜು, ಆನಂದ್, ಚೇತನ್ ಸೇರಿದಂತೆ ದೊಡ್ಡ ಅಗ್ರಹಾರ, ಕಳ್ಳಂಬೆಳ್ಳ, ಯಲಿಯೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಶಿರಾ ನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತಿತರರು ಭಾಗವಹಿಸಿದ್ದರು.

Share this post

About the author

Leave a Reply

Your email address will not be published. Required fields are marked *