ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಫುಟ್ಪಾತ್ ವ್ಯಾಪಾರಿಗಳ ಸಂಘ ಒತ್ತಾಯ.
ಬೀದಿ ಬದಿ ವ್ಯಾಪಾರಿಗಳು ಬಡ ಜನರಿಗೆ ಕೈಗೆಟಕುವ ಧರಗಲ್ಲಿ ರುಚಿಯಾದ ಅಹಾರ – ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಬಡ ಜನರ ಮಿತ್ರರಾಗಿದ್ದಾರೆ . ಸರ್ಕಾರ ಈ ವ್ಯಾಪಾರಿಗಳ ದತ್ತಾಂಶವನ್ನು ಸಮಗ್ರವಾಗಿ ಸಂಗ್ರಹಿಸಿ ಅವರಿಗೆ ಪುರ್ನರ್ ವಸತಿ ಕಲ್ವಿಸಿ, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಚಿಂತಕ – ಹೋರಾಟಗಾರ ಸಿ.ಯತಿರಾಜು ಅವರು ಅಭಿಪ್ರಾಯ ಪಟ್ಟರು, ಸರ್ಕಾರಗಳು ಬಡ ಜನರ ಪರವಾದ ಕಾನೂನುಗಳನ್ನು ಜಾರಿಯಲ್ಲಿ ಅಸಕ್ತಿ ತೊರದ ಮನಸ್ಥಿತಿ ವ್ಯಾಪಕವಾಗಿದೆ ಎಂದು ಅವರು ಇದರ ವಿರುದ್ದ ತಮ್ಮ ಹಕ್ಕುಭಾದ್ಯತೆಗಳನ್ನು ಪಡೆಯಲು ಸಂಘಟಿತರಾಗುವುದು. ಅತಿ ಹೆಚ್ಚು ಆಸಕ್ತಿಯನ್ನು ತೋರಬೇಕೆಂದು ಅಭಿಪ್ರಾಯಪಟ್ಟರು.
ನಗರದ ಜನ ಚಳುವಳಿ ಕೇಂದ್ರದಲ್ಲಿ ತುಮಕೂರು ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘ.ರಿ. ಸಿಐಟಿಯು ನ 21 ನೇ ವಾರ್ಷಿಕೋತ್ಸವದ ಸಮಾರಂಭ ಹಾಗು ತುಮಕೂರು ನಗರ ಸಮ್ಮೇಳವನ್ನು ಉಧ್ಘಾಟಿಸಿ ಮಾತನಾಡಿದರು
ಈ ಸಮ್ಮೇಳನವು ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸುವವ ಹಾಗು ಅವರಿಗೆ ಕಡ್ಡಾಯವಾಗಿ ಮಹಾ ನಗರ ಪಾಲಿಕೆ ಕಾರ್ಡ ನೀಡ ಬೇಕು, ನಗರದಲ್ಲಿರುವ ಸರಿ ಸುಮಾರು 8-9 ಸಾವಿರ ಬೀದಿ ವ್ಯಾಪಾರಿಗಳ ಪುರ್ನರ್ ವಸತಿಗೆ ಬೇಕಾಗಿ ಕನಿಷ್ಟ 50 ವೆಂಡಿಗ್ ಜೋನ್ ಗಳನ್ನು ರೂಪಿಸಬೇಕು, ಸ್ವಂತ ಮನೆ/ ನಿವೇಶನ ಇಲ್ಲದ ವ್ಯಾಪಾರಿಗಳನ್ನು ಗುರುತಿ ವಸತಿ ಸೌಲಭ್ಯ ನೀಡಬೇಕು, ಕನಿಷ್ 1 ಲಕ್ಷ ಬಡ್ಡಿ ರಹಿತ ಸಾಲ ನೀಡಬೇಕು, ಹಾಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗ ಸೂಕ್ತ ಪುರ್ನರ್ ವಸತಿ ನೀಡದೆ ಒಕ್ಕಲೆಬ್ಬಿಸ ಬಾರದು.
ಎಂ.ಜಿ. ರಸ್ತೆಯ ಪುಟ್ ಪಾತ್ ವ್ಯಾಪಾರಿಗಳಿಗೆ ಅದೆ ಬೀದಿಯಲ್ಲಿ ಕನ್ಸವೆನ್ಸಿ ಒಂದರಲ್ಲಿ ಜಾಗ ನೀಡಬೇಕು , ಸ್ಮಾಟ್ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ವೇಡಿಂಗ್ ಜೋನ್ ಗಳಲ್ಲಿ ನಿಜವಾದ ವ್ಯಾಪಾರಿಗಳನ್ನೆ ಮಳಿಗೆಗಳನ್ನು ನೀಡಬೇಕು ಎಂಬ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು,
ಸಭೆಯ ಅರಂಭದಲ್ಲಿ ವಸೀಂ ಅಕ್ರಂ ಅವರು ಪ್ರಾಸ್ತಾವಿಕ ಮಾತನಾಡಿದರು. ಮುತ್ತುರಾಜ್ ಸ್ವಾಗತಿಸಿ, ರವಿಕುಮಾರ್ ಹೆಚ್. ಕೆ ವಂದಿಸಿದರು
ಸಮ್ಮೇಳದಲ್ಲಿ ಅಧ್ಯಕ್ಷತೆ ವಹಿಸಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್, ಮುಖ್ಯ ಅಥಿತಿಗಳಾಗಿ ಎನ್.ಕೆ ಸುಬ್ರಮಣ್ಯ , ಟಿ.ಎಸ್ ರಾಜ್ ಶೇಖರ್ , ಶ್ರೀಧರ್, ಪುಡ್ ಕೋಟ್ ನ ಪ್ರಕಾಶ್, ಶಿರಾ ಗೇಟ್ ನ ಅಲ್ಲಬಕಾಶ್, ಶೆಟ್ಟೇಹಳ್ಳಿ ಪ್ರದೇಶದ ಮುಖಂಡರಾದ ತುಳಸಿ, ಅಶೋಕ ರಸ್ತೆಯ ಸಾಬ್ ಜಾನ ಸಾಬ್ ಮಾತನಾಡಿದರು
ಸಮ್ಮೇಳನದಲ್ಲಿ ಜಿ. ಜಗದೀಶ್, ಸುಜಾತ, ಎಂ.ಜಿ. ರಸ್ತೆಯ ಪರವಾಗಿ ತಬೇಜ್ ಪಾಷ, ಗಿರಿ , ಶೇಕ್‍ಪಜ್ಮಾನ್, ಇತರರು ಮಾತನಾಡಿದರು
ಸಮ್ಮೇಳನವು ಮುಂದಿನ ಮೂರು ವರ್ಷಗಳ ಅವಧಿಗೆ ನಗರ ಮಟ್ಟ ಪದಾಧಿಕಾರಿಗಳನ್ನು ಚುನಾಯಿಸಲಾಯಿತು
ಅಧ್ಯಕ್ಷರಾಗಿ ; ಟಿ.ಎಸ್ . ರಾಜಶೇಖರ್ , ಉಪಧ್ಯಾಕ್ಷರಾಗಿ ; ರವಿ ಕುಮಾರ್ ಹೆಚ್’.ಕೆ ಮಿನಿ ಸಿದ್ದಿ ವಿನಾಯಕ ಮಾರುಕಟ್ಟೆ, ಜಿ. ಜಗದೀಶ್ ಅರ್.ಟಿ.ಓ ಪುಡ್ ಕೊಟ್, ಶ್ರೀಧರ್ ಜೆ.ಸಿ ರಸ್ತೆ, ಪ್ರಧಾನ ಕಾರ್ಯಧರ್ಶಿ; ವಸೀಂ ಅಕ್ರಂ ಕಾರ್ಯದರ್ಶಿಗಳು; ಪ್ರಕಾಶ್, ಅಲ್ಲಾ ಬಕಾಶ್, ಸೈಯದ್ ಅಸಿಪ್ ಖಚಾಂಜಿ ; ಎನ್ ಮುತ್ತುರಾಜ್
ಸಂಘಟನಾ ಕಾರ್ಯಧರ್ಶಿಗಳು ; ಶ್ರೀಮತಿ ತುಳಸಿ, ಶ್ರೀಮತಿ ಲಕ್ಷ್ಮಮ್ಮ, ಶ್ರೀಮತಿ ಅಂಬಿಕಾ. ಶ್ರೀಮತಿ ಸುಜಾತ.