ದೇವರಾಯನದುರ್ಗದಲ್ಲಿ ಕುಸಿದ ಗುಡ್ಡ ಭಕ್ತರ ಪ್ರವೇಶ ತಾತ್ಕಾಲಿಕ ನಿಷೇಧ.
ತುಮಕೂರಿನ ಇತಿಹಾಸ ಪ್ರಸಿದ್ಧ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ತುಮಕೂರಿನ ದೇವರಾಯನ ದುರ್ಗದಲ್ಲಿ ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ದೇವರಾಯನದುರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿ ಬೃಹತ್ ಗಾತ್ರದ ಬಂಡೆಗಳ ಧರೆಗುರುಳಿದ ಘಟನೆ ನಡೆದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ಮೊದಲ ಬಾರಿಗೆ ದೇವರಾಯನದುರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು. ಬೆಟ್ಟದ ಮೇಲಿನ ನರಸಿಂಹಸ್ವಾಮಿ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬಂಡೆಗಳು ಉರುಳಿದ್ದು ಭೂಕುಸಿತ ಉಂಟಾಗಿದೆ ಹಾಗಾಗಿ ದೇವಾಲಯಕ್ಕೆ ಬರುವ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ದೇವಸ್ಥಾನದ ಮಂಡಳಿ ನಿಷೇಧಿಸಿದೆ. ದಸರಾ ಹಬ್ಬದ ನಿಮಿತ ದೇವರಾಯನದುರ್ಗಕ್ಕೆ ಪ್ರವಾಸಿಗರ ದಂಡು ಈ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು ಆದರೆ ಗುಡ್ಡ ಕುಸಿತದಿಂದ ದೇವಸ್ಥಾನಕ್ಕೆ ಹಾಗೂ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ
ಗುಡ್ಡ ಕುಸಿದಿರುವ ಹಿನ್ನೆಲೆಯಲ್ಲಿ ರಸ್ತೆ ತೆರವು ಕಾರ್ಯಾಚರಣೆ ನಡೆಯುತ್ತಿದೆ