Uncategorized

MLC-Chidanand Gowda Distribution of Free Medicine Kit’s to all Primary Health Center in Sira Taluk

MLC-Chidanand Gowda Distribution of Free Medicine Kit’s to all Primary Health Center in Sira Taluk

ತುಮಕೂರು: ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ರವರು ತಮ್ಮ ಸಂಸ್ಥೆಯಾ ಸಿ.ಎಂ.ಜಿ ಪೌಂಡೇಶನ್ ವತಿಯಿಂದ. ಮಹಾಮಾರಿ ಕೊರೋನ  ಹೆಚ್ಚುತ್ತಿರುವುದಕ್ಕೆ ಮೂಲ ಕಾರಣ ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೊಳ್ಳದೇ ಇರುವುದು ಎಂದು ಅರಿತು, ಸಿರಾ ತಾಲ್ಲೂಕಿನಾದ್ಯಂತ  ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೆಡಿಸಿನ್ ಕಿಟ್ ವಿತರಣಾ ಕಾರ್ಯಕ್ರಮ  ಹಮ್ಮಿಕೊಂಡಿದ್ದರು.

Subscribe Our Channel for more new updates – INFO JOURNALIST

ಈ ಕಾರ್ಯಕ್ರಮದ ನಿಮಿತ್ತ ಚಿದಾನಂದ್ ಎಂ ಗೌಡ ರವರು ಸಿರಾ ತಾಲ್ಲೂಕಿನ ಗೋಮಾರದಹಳ್ಳಿ, ತಾವರೆಕೆರೆ ಹಾಗೂ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ  ರೋಗಿಗಳಿಗೆ ಧೈರ್ಯ ತುಂಬಿ ಕೊರೋನ ಔಷಧಿ ಕಿಟ್ ಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಮ್ಮ ಸ್ವಂತ ಖರ್ಚಿನಿಂದ ನೀಡಿ ರೋಗಿಗಳಿಗೆ ಉಚಿತವಾಗಿ ಎಲ್ಲಾ ಔಷಧಿಗಳನ್ನು ನೀಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ತಿಳಿಸಿದರು. ತದನಂತರ ಮಾತನಾಡಿದ ವಿಧಾನ ಪರಿಷತ್ ಶಾಸಕರು ಗ್ರಾಮಾಂತರ ಪ್ರದೇಶದ ಜನರು ಇದನ್ನು ಸದುಪಯೋಗ ಪಡೆದುಕೊಂಡು ಹಳ್ಳಿಗಳಲ್ಲಿನ ಎಲ್ಲಾ ರೋಗಿಗಳು ಔಷಧಿ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ  ಡಾ. ಪವಿತ್ರ ರವರು, ವಾಸವಿ ಸಂಘದ ಸದಸ್ಯರಾದ ಸುಬ್ಬರಾಜ್ , ವಾಚ್ ಉಮೇಶ, ಮಾಜಿ ತಾಲ್ಲೂಕ್ ಪಂಚಾಯತಿ ಅಧ್ಯಕ್ಷರಾದ ಚಿಕ್ಕಣ್ಣನವರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *