breaking news

ಬಿಜೆಪಿ ವಕ್ತಾರರಾಗಿ ಚಂದ್ರಶೇಖರ್ ನೇಮಕ

ಬಿಜೆಪಿ ವಕ್ತಾರರಾಗಿ ಚಂದ್ರಶೇಖರ್ ನೇಮಕ
HN Chandrasekhar appointed as BJP spokesperson

ತುಮಕೂರು: ಜಿಲ್ಲಾ ಬಿಜೆಪಿಯ ವಿವಿಧ ಹುದ್ದೆಗಳನ್ನು
ನಿರ್ವಹಿಸಿರುವ ಮುಖಂಡ ಹೆಚ್.ಎನ್.ಚಂದ್ರಶೇಖರ್ ಅವರು ರಾಜ್ಯ ಬಿಜೆಪಿ
ವಕ್ತಾರರಾಗಿ ನೇಮಕವಾಗಿದ್ದಾರೆ. ಈ ಮೂಲಕ ಇದೇ ಮೊದಲ
ಬಾರಿಗೆ ಜಿಲ್ಲಾ ಬಿಜೆಪಿ ಮುಖಂಡರೊಬ್ಬರಿಗೆ ರಾಜ್ಯ ವಕ್ತಾರ ಸ್ಥಾನದ
ಗೌರವ ಲಭಿಸಿದೆ.

ತುಮಕೂರು ತಾಲ್ಲೂಕು ಹೊನಸಿಗೆರೆಯವರಾದ
ಹೆಚ್.ಎನ್.ಚಂದ್ರಶೇಖರ್ ಎಂಜಿನಿಯರಿಂಗ್ ಪದವೀಧರ. ಜಿಲ್ಲಾ ಬಿಜೆಪಿ
ಯುವ ಮೋರ್ಚಾ ಕಾರ್ಯದರ್ಶಿಯಾಗಿ, ಜಿಲ್ಲಾ ಘಟಕದ
ಕಾರ್ಯದರ್ಶಿ, ಉಪಾಧ್ಯಕ್ಷರಾಗಿ, ಪಕ್ಷದ ಮಾಧ್ಯಮ ಪ್ರಮುಖ,
ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದ ಹೆಚ್.ಎನ್.ಚಂದ್ರಶೇಖರ್
ಭಜರಂಗದಳದ ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.

ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ
ಚಂದ್ರಶೇಖರ್, ಮಾಧ್ಯಮಗಳಲ್ಲಿ ಹಲವಾರು ಪ್ಯಾನಲ್
ಚರ್ಚೆಯಲ್ಲಿ ಪಾಲ್ಗೊಂಡು ಪಕ್ಷವನ್ನು, ಪಕ್ಷದ
ಯೋಜನೆಗಳನ್ನು ಸಮರ್ಥವಾಗಿ ಸಮರ್ಥಿಸಿಕೊಂಡು ರಾಜ್ಯ
ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅದರ ಫಲವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು
ಹೆಚ್.ಎನ್.ಚಂದ್ರಶೇಖರ್ ಅವರನ್ನು ಪಕ್ಷದ ರಾಜ್ಯ
ವಕ್ತಾರರನ್ನಗಿ ನೇಮಕ ಮಾಡಿದ್ದಾರೆ.

Share this post

About the author

Leave a Reply

Your email address will not be published. Required fields are marked *