ಎಐಎಂಐಎಂ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷರಾಗಿ ಬುರ್ಹಾನುದ್ದೀನ್ ನೇಮಕ
ತುಮಕೂರು: ಆಲ್‍ಇಂಡಿಯಾ ಮಜ್ಲಿಸೆ ಇ ಇತ್ತೆಹಾದುಲ್ ಮುಸ್ಲೀಮೀನ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೈಯದ್ ಬುರ್ಹಾನ್ ಉದ್ದೀನ್ ಅವರನ್ನು ನೇಮಕ ಮಾಡಿ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆದೇಶ ಪತ್ರವನ್ನು ನೀಡಿದ್ದಾರೆ.
ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಕ್ಷದ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿಯುವಂತೆ ತಿಳಿಸಿದ್ದಾರೆ.